ಶುಕ್ರವಾರ, ಫೆಬ್ರವರಿ 28, 2020
19 °C

ಸ್ಕೋಡಾ: 5 ಹೊಸ ಕಾರ್‌

ಕೆ.ಎಂ. ಸಂತೋಷ್ ಕುಮಾರ್ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸ್ಕೋಡಾ ಆಟೊ ಪೋಗ್ಸ್‌ವ್ಯಾಗನ್ ಇಂಡಿಯಾ ಕಂಪನಿಯು ತನ್ನ ನೂತನ ಐದು ಮಾದರಿಯ ಕಾರುಗಳನ್ನು ಸೋಮವಾರ ಇಲ್ಲಿ ಭಾರತದ ಮಾರುಕಟ್ಟೆಗೆ ಪರಿಚಯಿಸಿತು.

ಸ್ಕೋಡಾ ವಿಷನ್ ಇನ್ ಮತ್ತು ಫೋಗ್ಸ್‌ವ್ಯಾಗನ್ ಕಾಂಪ್ಯಾಕ್ಟ್ (ಟೈಗುನ್) ಎಸ್‌ಯುವಿ ಐಷಾರಾಮಿ ಕಾರುಗಳು, ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿರುವ ಔಡಿ ಎ8ಎಲ್, ಲ್ಯಾಂಬೊರ್ಗಿನಿ ಹುರಾಕೆನ್ ಹಾಗೂ ಪೋರ್ಷೆ 911 ಕ್ಯಾಬ್ರಿಯೊಲೆಟ್ ಕಾರುಗಳು ಬಿಡುಗಡೆಯಾದವು.

ಇದರಲ್ಲಿ ಔಡಿ ಎ8ಎಲ್ ಕಾರಿನ ಬೆಲೆ ₹1.56 ಕೋಟಿ ( ಎಕ್ಸ್ ಷೋ ರೂಂ) ಇದೆ. ಉಳಿದ ಮಾದರಿಯ ಕಾರುಗಳ ಬೆಲೆಯನ್ನು ಕಂಪನಿ ಘೋಷಿಸಿಲ್ಲ.

‘ಭಾರತದಲ್ಲಿ ಹೊಸದಾಗಿ ಸ್ಕೋಡಾ ಆಟೊ ಡಿಜಿ ಲ್ಯಾಬ್ ಮತ್ತು ಸಾಫ್ಟವೇರ್ ಅಭಿವೃದ್ಧಿ ಕೇಂದ್ರ ಸ್ಥಾಪಿಸಲಾಗುತ್ತಿದೆ. 'ಇಂಡಿಯಾ 2.0 ಯೋಜನೆ'ಯಡಿ ಕಂಪನಿಯು ದೇಶದಲ್ಲಿ ಆಟೊಮೊಬೈಲ್ ಉದ್ಯಮಕ್ಕೆ ₹7,900 ಕೋಟಿ ಬಂಡವಾಳ ಹೂಡಿಕೆ ಮಾಡಲಿದೆ’ ಎಂದು ಸ್ಕೋಡಾ ಆಟೊ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಬರ್ನಾರ್ಡ್ ಮೇಯಿರ್ ತಿಳಿಸಿದರು.

(ಕಂಪನಿ‌ಯ ಆಹ್ವಾನದ ಮೇರೆಗೆ ವರದಿಗಾರ ದೆಹಲಿಗೆ ಭೇಟಿ ನೀಡಿದ್ದರು)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು