ಸುಜುಕಿ ಬರ್ಗಮನ್ ಸ್ಟ್ರೀಟ್ ಸ್ಕೂಟರ್ ಮಾರುಕಟ್ಟೆಗೆ

7

ಸುಜುಕಿ ಬರ್ಗಮನ್ ಸ್ಟ್ರೀಟ್ ಸ್ಕೂಟರ್ ಮಾರುಕಟ್ಟೆಗೆ

Published:
Updated:

ಬೆಂಗಳೂರು: ಸ್ಕೂಟರ್ ಪ್ರಿಯರಲ್ಲಿ ಕುತೂಹಲ ಮೂಡಿಸಿದ್ದ ಸುಜುಕಿ ಮೋಟರ್ ಸೈಕಲ್ ಇಂಡಿಯಾದ ಹೊಸ ಪ್ರೀಮಿಯಂ ಸ್ಕೂಟರ್ ಬರ್ಗಮನ್ ಸ್ಟ್ರೀಟ್ 125 ಸಿಸಿ ಸ್ಕೂಟರ್ ಅನ್ನು ರಾಜ್ಯದ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.

ಸಂಸ್ಥೆಯ ದಕ್ಷಿಣ ಭಾರತದ ಪ್ರಾದೇಶಿಕ ವ್ಯವಸ್ಥಾಪಕ ಕೆ.ಎನ್.ವಿ.ಎಸ್. ಸುರೇಶ್ ಅವರು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆ ಮಾಡಿದರು.

ಈ ಸ್ಕೂಟರ್‌ ಹಲವಾರು ಪ್ರೀಮಿಯಂ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಅತ್ಯುತ್ತಮ ಚಾಲನಾ ಸೌಲಭ್ಯಗಳನ್ನು ಒಳಗೊಂಡಿದೆ. ದೇಶದಲ್ಲಿ ಯುರೋಪ್‌ ಶೈಲಿಯಲ್ಲಿ ಸಿದ್ಧಗೊಂಡಿರುವ ಮೊದಲ ಸುಜುಕಿ ಸ್ಕೂಟರ್
ಇದಾಗಿದೆ.

ಗ್ರಾಹಕ ಸ್ನೇಹಿ ಸ್ಕೂಟರ್ ಇದಾಗಿರುವುದರಿಂದ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಕಂಡುಬಂದಿದೆ. ಗ್ರಾಹಕರ ಅನುಕೂಲಕ್ಕೆ ತಕ್ಕಂತೆ 3 ಬಣ್ಣಗಳಲ್ಲಿ ಲಭ್ಯ ಇದೆ. ಇದರ ಎಕ್ಸ್‌ಷೋರೂಂ ಬೆಲೆ ₹ 68,000 ಇದೆ.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !