ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಪ್ಯಾಕ್ಟ್ ಎಸ್‌ಯುವಿ ಮಾರುಕಟ್ಟೆ ಪ್ರವೇಶಿಸಲಿರುವ ಟೊಯೊಟಾ

Last Updated 28 ಜುಲೈ 2020, 13:13 IST
ಅಕ್ಷರ ಗಾತ್ರ

ನವದೆಹಲಿ: ಮಾರುತಿ ಸುಜುಕಿ ಕಂಪನಿಯ (ಎಂಎಸ್‌ಐ) ‘ವಿತಾರಾ ಬ್ರೆಜ್ಜಾ’ ಮಾದರಿಯಲ್ಲಿ ತಾನೂ ಕಾಂಪಾಕ್ಟ್‌ ಎಸ್‌ಯುವಿಯನ್ನು ಮುಂಬರುವ ಹಬ್ಬಗಳ ಅವಧಿಯಲ್ಲಿಮಾರುಕಟ್ಟೆಗೆ ತರಬೇಕು ಎಂಬ ಆಲೋಚನೆ ಟೊಯೊಟಾ ಕಿರ್ಲೋಸ್ಕರ್ ಮೋಟರ್ (ಟಿಕೆಎಂ)‌ ಕಂಪನಿಗೆ ಇದೆ.

ಹೈಬ್ರಿಡ್ ಹಾಗೂ ಇತರ ವಾಹನಗಳನ್ನು ಒಬ್ಬರಿಗೊಬ್ಬರು ಪೂರೈಸಬೇಕು ಎನ್ನುವ ಒಪ್ಪಂದವನ್ನು ಟೊಯೊಟಾ ಮತ್ತು ಸುಜುಕಿ 2018ರ ಮಾರ್ಚ್‌ನಲ್ಲಿ ಮಾಡಿಕೊಂಡಿದ್ದವು. ಇದರ ಭಾಗವಾಗಿ ಟಿಕೆಎಂ, ಬಲೆನೊ ಕಾರುಗಳನ್ನು ಮಾರುತಿಯವರಿಂದ ಪಡೆದು, ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿ, ‘ಗ್ಲಾಂಜಾ’ ಹೆಸರಿನಲ್ಲಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.

ಈಗ ಈ ಒಪ್ಪಂದದ ಅಡಿಯಲ್ಲಿ ಎರಡನೆಯ ಉತ್ಪನ್ನವನ್ನು ಹಬ್ಬಗಳ ಸಂದರ್ಭದಲ್ಲಿ ಮಾರುಕಟ್ಟೆಗೆ ತರುವ ಉದ್ದೇಶವನ್ನು ಟಿಕೆಎಂ ಹೊಂದಿದೆ. ‘ನಾಲ್ಕು ಮೀಟರ್‌ಗಿಂತ ಕಡಿಮೆ ಉದ್ದದ, ಕಾಂಪ್ಯಾಕ್ಟ್ ಎಸ್‌ಯುವಿ ಕಾರುಗಳನ್ನು ಭಾರತೀಯರು ಹೆಚ್ಚು ಇಷ್ಟಪಡುತ್ತಾರೆ. ಈ ಬಗೆಯ ಕಾರುಗಳ ಮಾರಾಟ ಪ್ರಮಾಣವು ಒಟ್ಟು ಪ್ರಯಾಣಿಕ ವಾಹನ ಮಾರಾಟದಲ್ಲಿ ಶೇಕಡ 10ರಿಂದ 11ರಷ್ಟು ಇದೆ’ ಎಂದು ಟಿಕೆಎಂನ ಹಿರಿಯ ಉಪಾಧ್ಯಕ್ಷ ನವೀನ್ ಸೋನಿ ತಿಳಿಸಿದರು.

‘ಕಳೆದ ವರ್ಷದಲ್ಲಿ ಬೆಳವಣಿಗೆ ಕಂಡುಬಂದಿದ್ದು ಕಾಂಪ್ಯಾಕ್ಟ್‌ ಎಸ್‌ಯುವಿಗಳ ಮಾರಾಟದಲ್ಲಿ ಮಾತ್ರ. ಹಾಗಾಗಿ, ಈ ಬಾರಿಯ ಹಬ್ಬಗಳ ಸಂದರ್ಭದಲ್ಲಿ ನಾವು ನಮ್ಮದೇ ಆದ ಕಾಂಪ್ಯಾಕ್ಟ್‌ ಎಸ್‌ಯುವಿ ವಾಹನವನ್ನು ಮಾರುಕಟ್ಟೆಗೆ ತರಲಿದ್ದೇವೆ ಎಂಬ ಘೋಷಣೆ ಮಾಡುತ್ತಿದ್ದೇವೆ’ ಎಂದು ಸೋನಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT