ಮುಂಬೈ: ಯೆಜ್ಡಿ ಮತ್ತು ಬಿಎಸ್ಎ ಸಂಸ್ಥೆಯಿಂದ 350 ಸಿ.ಸಿ ಯೆಜ್ಡಿ ಸ್ಕ್ರ್ಯಾಂಬ್ಲರ್ ಮತ್ತು ಬಿಎಸ್ಎ ಸ್ಕ್ರ್ಯಾಂಬ್ಲರ್ 650 ಸಿ.ಸಿ ಸಾಮರ್ಥ್ಯದ ಎರಡು ಬೈಕ್ಗಳನ್ನು ಮುಂಬೈನಲ್ಲಿ ಕ್ಲಾಸಿಕ್ ಲೆಜೆಂಡ್ಸ್ನ ಸಹ-ಸಂಸ್ಥಾಪಕ ಅನುಪಮ್ ತರೇಜಾ ಮತ್ತು ಬೋಮನ್ ಇರಾನಿ ಗುರುವಾರ ಬಿಡುಗಡೆಗೊಳಿಸಿದರು.

ಯೆಜ್ಡಿ ಸ್ಕ್ರ್ಯಾಂಬ್ಲರ್ 350 ಹಗುರವಾದ 350 ಸಿ.ಸಿ ಸ್ಕ್ರ್ಯಾಂಬ್ಲರ್. ಇದರಲ್ಲಿ ‘ಕಟಾರ್’ ಎಂಬ ಹೊಸ ಲಿಕ್ವಿಡ್-ಕೂಲ್ಡ್ಎಂಜಿನ್ ಬಳಸಲಾಗಿದೆ. ಈ ಬೈಕ್ 174 ಕೆ.ಜಿ ತೂಕವಿದೆ. ಆರಂಭಿಕ ಬೆಲೆ ₹1,99,950.

ಬಿಎಸ್ಎ ಸ್ಕ್ರ್ಯಾಂಬ್ಲರ್ 650 ಸಿ.ಸಿ ಬೈಕ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಇದು 45 ಬಿಎಚ್ಪಿ ಪವರ್ ಮತ್ತು 55 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಆರಂಭಿಕ ಬೆಲೆ ₹3,24,950. ಈ ಬೈಕ್ಗಳು ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ: ಲೆಗಸಿ ಬ್ಲಾಕ್, ಒಜಿ ಯೆಲ್ಲೋ, ರೋಗ್ ರೆಡ್ ಮತ್ತು ರ್ಯಾಲಿ ಬ್ಲೂ.

ಎರಡೂ ಬೈಕ್ಗಳಿಗೆ 4 ವರ್ಷ ಅಥವಾ 50,000 ಕಿ.ಮೀ ವಾರಂಟಿ ನೀಡಲಾಗುತ್ತಿದೆ. ಎರಡು ವಿಭಿನ್ನ ಸ್ಕ್ರ್ಯಾಂಬ್ಲರ್ ಮೋಟಾರ್ ಬೈಕ್ಗಳು ನಗರ ಪ್ರದೇಶ, ಸಾಹಸ ಪ್ರವೃತ್ತಿ ಹೊಂದಿರುವವರಿಗೆ ಮತ್ತು ಹೆದ್ದಾರಿಗಳಲ್ಲಿ ಆರಾಮದಾಯಕ ಪಯಣ ಬಯಸುವವರಿಗಾಗಿ ವಿನ್ಯಾಸಗೊಳಿಸಲಾಗಿದೆ.

ಕ್ಲಾಸಿಕ್ ಲೆಜೆಂಡ್ಸ್ನ ಸಹ ಸಂಸ್ಥಾಪಕ ಅನುಪಮ್ ತರೇಜಾ ಮಾತನಾಡಿ, ಸ್ಕ್ರಾಂಬ್ಲರ್ಗಳು ಭಾರತೀಯ ರೈಡಿಂಗ್ ಸಂಸ್ಕೃತಿಯನ್ನು ಮರು ವ್ಯಾಖ್ಯಾನಿಸುತ್ತವೆ. ಇವು ಮೋಟಾರ್ ಸೈಕ್ಲಿಂಗ್ ಪ್ರಪಂಚದ ಎಸ್ಯುವಿಗಳು. ಗಟ್ಟಿಮುಟ್ಟಾದ ವಿನ್ಯಾಸ ಹೊಂದಿವೆ ಎಂದರು.

ಕ್ಲಾಸಿಕ್ ಲೆಜೆಂಡ್ಸ್ನ ಸಹ ಸ್ಥಾಪಕ ಬೋಮನ್ ಇರಾನಿ ಮಾತನಾಡಿ, ಯೆಜ್ಡಿ ಯಾವಾಗಲೂ ವಿಶಿಷ್ಟ ಶೈಲಿ ಒಳಗೊಂಡಿರುತ್ತದೆ. ಪ್ರತಿ ಸವಾರಿಯೂ ವಿಶಿಷ್ಟ ಅನುಭವ ನೀಡುತ್ತದೆ, ಯೆಜ್ಡಿ ಸಂಸ್ಥೆ 2022ರಲ್ಲಿ ಭಾರತದ ಮೊದಲ ಮೇನ್ಸ್ಟ್ರೀಮ್ ಫ್ಯಾಕ್ಟರಿ-ಕಸ್ಟಮ್ ಸ್ಕ್ರಾಂಬ್ಲರ್ ಅನ್ನು ಬಿಡುಗಡೆ ಮಾಡಿತು. ಇದೀಗ ಹಗುರ ತೂಕ, ಹೆಚ್ಚಿನ ಟಾರ್ಕ್ ಮತ್ತು ಹೆಚ್ಚಿನ ಕಾರ್ಯಕ್ಷಮತೆಯೊಂದಿಗೆ ಎರಡು ಹೊಸ ಸ್ಕ್ರಾಂಬ್ಲರ್ಗಳನ್ನು ಪರಿಚಯಿಸಲಾಗಿದೆ ಎಂದರು.

ಯೆಜ್ಡಿ ಸ್ಕ್ರ್ಯಾಂಬ್ಲರ್ ಬೈಕ್ ವಿಶೇಷತೆ

350 ಸಿಸಿ ಲಿಕ್ವಿಡ್-ಕೂಲ್ಡ್ ‘ಕತಾರ್’ ಪವರ್ಟ್ರೇನ್ ಹೊಂದಿದೆ. ಫ್ಯಾಕ್ಟರಿ-ಕಸ್ಟಮ್ ಲುಕ್ ಹೊಂದಿದೆ. ಕ್ಲಾಸಿಕ್ ಸ್ಕ್ರ್ಯಾಂಬ್ಲರ್ ಕರ್ವ್ ಎತ್ತರಿಸಿದ ಮುಂಭಾಗದ ಬೀಕ್ ಮತ್ತು ಕಿರಿದಾದ ರಿಯರ್ ಫೆಂಡರ್ ಒಳಗೊಂಡಿದೆ. ರೇಡಿಯೇಟರ್ ಮತ್ತು ಮಧ್ಯಭಾಗದಲ್ಲಿ ಸಾಗುವ ಎಕ್ಸಾಸ್ಟ್ ಸಿಸ್ಟಂ ಎಂಜಿನ್ ತಂಪಾಗಿರಲು ಸಹಾಯ ಮಾಡುತ್ತದೆ. ಇದರಿಂದ ಸವಾರರಿಗೆ ಹೆಚ್ಚು ಆರಾಮದಾಯಕ ಅನುಭವ ಸಿಗಲಿದೆ. ಸುರಕ್ಷಿತ ಹ್ಯಾಂಡ್ಲಿಂಗ್: ಸೆಮಿ-ನಾಬಿ ಟೈರ್ ಮತ್ತು ಅತ್ಯುತ್ತಮ ಬ್ರೇಕಿಂಗ್ ವ್ಯವಸ್ಥೆ ಒಳಗೊಂಡಿದೆ. ಐಕಾನಿಕ್ ಬಿಎಸ್ಎ ಸ್ಕ್ರಾಂಬ್ಲರ್ಗಳಾದ ಗೋಲ್ಡ್ ಸ್ಟಾರ್ ಕ್ಯಾಟಲಿನಾ ಮತ್ತು ಎ10 ಸ್ಪಿಟ್ಫೈರ್ ಮಾದರಿಗಳಿಂದ ಪ್ರೇರಿತವಾಗಿದೆ. ಕ್ರೋಮ್ ಫಿನಿಶ್ ಇರುವ ಟ್ಯಾಂಕ್ ಫ್ಲಾಟ್ ರಿಬ್ಬಡ್ ಸೀಟ್ ಸಿಗ್ನೇಚರ್ ‘65’ ಓವಲ್ ಸೈಡ್ ಪ್ಯಾನಲ್ ಮತ್ತು ಎಕ್ಸ್ಪೋಸ್ಡ್ ಸಬ್ಫ್ರೇಮ್ ಹೊಂದಿ ಆಕರ್ಷಕವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.