ಮಾರುತಿ: ವರ್ಷಕ್ಕೆ 30 ಲಕ್ಷ ವಾಹನ ತಯಾರಿಸುವ ಗುರಿ

7

ಮಾರುತಿ: ವರ್ಷಕ್ಕೆ 30 ಲಕ್ಷ ವಾಹನ ತಯಾರಿಸುವ ಗುರಿ

Published:
Updated:
ಆರ್‌. ಸಿ. ಭಾರ್ಗವ

ನವದೆಹಲಿ: ವಾರ್ಷಿಕ ವಾಹನಗಳ ತಯಾರಿಕೆಯನ್ನು 2025ರ ವೇಳೆಗೆ 30 ಲಕ್ಷಕ್ಕೆ ಹೆಚ್ಚಿಸಲು ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ಗುರಿ ಹಾಕಿಕೊಂಡಿದೆ.

‘ಎಂಎಸ್‌ಐ’ನ ಅಧ್ಯಕ್ಷ ಆರ್‌. ಸಿ. ಭಾರ್ಗವ್‌ ಅವರು, ಸಂಸ್ಥೆಯ ಷೇರುದಾರರಿಗೆ ವಾರ್ಷಿಕ ವರದಿಯಲ್ಲಿ ನೀಡಿರುವ ಸಂದೇಶದಲ್ಲಿ ಈ ವಿವರ ನೀಡಿದ್ದಾರೆ. ‘ಮುಂದಿನ ಹಣಕಾಸು ವರ್ಷದ  ಹೊತ್ತಿಗೆ ವರ್ಷಕ್ಕೆ 20 ಲಕ್ಷ ವಾಹನ ತಯಾರಿಸುವ ಗುರಿ ತಲುಪಲಾಗುವುದು. 2025ರ ವೇಳೆಗೆ ಇದನ್ನು 30 ಲಕ್ಷಕ್ಕೆ ಹೆಚ್ಚಿಸುವುದು ಸಂಸ್ಥೆಯ ಮುಂದಿನ ಗುರಿಯಾಗಿದೆ’ ಎಂದು ತಿಳಿಸಿದ್ದಾರೆ.

ಸದ್ಯಕ್ಕೆ ಗುರುಗ್ರಾಂ ಮತ್ತು ಮಾನೆಸರ್‌ನಲ್ಲಿನ ಎರಡು ತಯಾರಿಕಾ ಘಟಕಗಳ ಒಟ್ಟಾರೆ ಸಾಮರ್ಥ್ಯವು 15 ಲಕ್ಷದಷ್ಟು ಇದೆ. ಈ ಘಟಕಗಳ ಸಾಮರ್ಥ್ಯ ಹೆಚ್ಚಿಸಲಾಗುತ್ತಿದೆ.

ಮಾತೃ ಸಂಸ್ಥೆ ಸುಜುಕಿ ಮೋಟರ್‌ ಕಾರ್ಪ್‌ಗೆ ಪಾವತಿಸುವ ಗೌರವಧನಕ್ಕೆ ಸಂಬಂಧಿಸಿದಂತೆ ಹೊಸ ಸೂತ್ರಕ್ಕೆ ಎರಡೂ ಸಂಸ್ಥೆಗಳು ಇತ್ತೀಚೆಗೆ ಸಹಿ ಹಾಕಿವೆ. 2025ರ ವೇಳೆಗೆ ಸಂಸ್ಥೆಯು ಎಲ್ಲ ಮಾದರಿಯ ವಾಹನಗಳಿಗೆ ರೂಪಾಯಿಗಳಲ್ಲಿ ಗೌರವಧನ ಪಾವತಿಸಲಿದೆ. ಯೆನ್‌ ಬದಲಿಗೆ ರೂಪಾಯಿಗಳಲ್ಲಿ ಪಾವತಿಸುವುದರಿಂದ ಸಂಸ್ಥೆಗೆ ಉಳಿತಾಯವಾಗಲಿದೆ ಎಂದು ಹೇಳಿದ್ದಾರೆ.

ಜಿಎಸ್‌ಟಿ ಹೊರೆ: ಹೈಬ್ರಿಡ್‌ ವಾಹನಗಳ ಮೇಲೆ ಜಿಎಸ್‌ಟಿ ವಿಧಿಸಿರುವುದರಿಂದ ಸಂಸ್ಥೆಯ ಇಂತಹ ವಾಹನಗಳ ಬೇಡಿಕೆ ಕುಸಿದಿದೆ ಎಂದು ಸಿಇಒ ಕೆನಿಚಿ ಆಯುಕವಾ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !