ಶನಿವಾರ, ಅಕ್ಟೋಬರ್ 24, 2020
24 °C

ಔಡಿ ಕ್ಯು2 ಬುಕಿಂಗ್‌ ಆರಂಭ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಐಷಾರಾಮಿ ಕಾರು ತಯಾರಿಸುವ ಔಡಿ ಕಂಪನಿಯು ತನ್ನ ಮುಂಬರುವ ಎಸ್‌ಯುವಿ ‘ಕ್ಯು2’ಗೆ ಬುಕಿಂಗ್‌ ಆರಂಭಿಸಿದೆ.

ಇದೇ ತಿಂಗಳಿನಲ್ಲಿ ಭಾರತದ ಮಾರುಕಟ್ಟೆಗೆ ಬಿಡುಗಡೆ ಆಗಲಿದೆ. ಭಾರತದಲ್ಲಿ ಬಿಡುಗಡೆ ಮಾಡುತ್ತಿರುವ ಐದನೇ ಉತ್ಪನ್ನ ಇದಾಗಿದೆ. ಕಂಪನಿಯ ಜಾಲತಾಣ ಅಥವಾ ಸ್ಥಳೀಯ ಡೀಲರ್‌ ಬಳಿ ₹ 2 ಲಕ್ಷ ಪಾವತಿಸಿ ಬುಕಿಂಗ್‌ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

2 ಲೀಟರ್ ಪೆಟ್ರೋಲ್‌ ಎಂಜಿನ್‌ ಕ್ವಾಟ್ರೊ ತಂತ್ರಜ್ಞಾನ ಹೊಂದಿದೆ. ಮೊದಲ ಬಾರಿಗೆ ಐಷಾರಾಮಿ ಕಾರು ಖರೀದಿಸಲು ಬಯಸುವ ಹರೆಯದವರನ್ನು ಗುರಿಯಾಗಿಸಿಕೊಂಡು ಯೋಜನೆ ರೂಪಿಸಲಾಗಿದೆ ಎಂದು ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.