ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಟಿಬ್ರ್ಯಾಂಡ್‌ ಸರ್ವಿಸ್‌ ಜನಪ್ರಿಯತೆ

Last Updated 22 ಜನವರಿ 2020, 19:30 IST
ಅಕ್ಷರ ಗಾತ್ರ

ದೇಶಿ ವಾಹನ ಉದ್ಯಮವು ದಿನೇ ದಿನೇ ತನ್ನ ಮಾರುಕಟ್ಟೆ ವಿಸ್ತರಿಸುತ್ತ ಸಾಗಿದೆ. ಈ ವಹಿವಾಟು ದೇಶಿ ಜಿಡಿಪಿಗೆ ಶೇ 7ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತದೆ. ಹೆಚ್ಚು ಸ್ಪರ್ಧಾತ್ಮಕವಾದ ಈ ವಾಹನ ತಯಾರಿಕಾ ವಲಯದ ಮಾರುಕಟ್ಟೆಗೆ ಸರಿಸಮನಾಗಿ ವಾಹನಗಳ ಸರ್ವಿಸ್‌ ವಹಿವಾಟು ವಾರ್ಷಿಕ ₹34 ಸಾವಿರ ಕೋಟಿಗಳಷ್ಟು ವಹಿವಾಟು ನಡೆಸುತ್ತಿದೆ. ಸದ್ಯಕ್ಕೆ ಮಾರುಕಟ್ಟೆಯನ್ನು ಆವರಿಸಿರುವ ವೈವಿಧ್ಯಮಯ ಕಾರ್‌ಗಳು ಮತ್ತು ವಿಲಾಸಿ, ಅತ್ಯಾಧುನಿಕ ದೊಡ್ಡ ಗಾತ್ರದ ಕಾರ್‌ಗಳನ್ನು ತಯಾರಿಸುವ ಜಾಗತಿಕ ಕಂಪನಿಗಳು ಭಾರತದಲ್ಲಿ ತಮ್ಮ ಮಾರುಕಟ್ಟೆ ವಿಸ್ತರಣೆಗೆ ಮುಂದಾಗಿರುವುದರಿಂದ ಮುಂಬರುವ ವರ್ಷಗಳಲ್ಲಿ ಜಾಗತಿಕ ಕಾರು ಮಾರುಕಟ್ಟೆಯಲ್ಲಿ ಭಾರತ ಪ್ರಭಾವಿ ದೇಶವಾಗಿ ಹೊರಹೊಮ್ಮುವ ನಿಟ್ಟಿನಲ್ಲಿ ದಾಪುಗಾಲು ಹಾಕುತ್ತಿದೆ.

ಗೋ– ಮೆಕ್ಯಾನಿಕ್‌ನ ಸಹ ಸ್ಥಾಪಕ ಅಮಿತ್ ಭಾಸಿನ್ ಅವರು ದೇಶಿ ಕಾರು ಸೇವಾ ಉದ್ಯಮವನ್ನು ಅಧಿಕೃತ ಸೇವಾ ಕೇಂದ್ರ, ಅಸಂಘಟಿತ ಸೇವಾ ಕೇಂದ್ರ ಮತ್ತು ಬಹು ಬ್ರ್ಯಾಂಡ್ ಕಾರ್ ಸೇವಾ ಕೇಂದ್ರಗಳೆಂದು ಮೂರು ಪ್ರಮುಖ ಕ್ಷೇತ್ರಗಳಾಗಿ ವಿಂಗಡಿಸುತ್ತಾರೆ.

ಅಧಿಕೃತ ಸೇವಾ ಕೇಂದ್ರಗಳು

ಕಂಪನಿಯ ಮಾಲೀಕತ್ವದಲ್ಲಿ ಅಥವಾ ಫ್ರಾಂಚೈಸಿ ಆಗಿ ಕಾರ್ಯನಿರ್ವಹಿಸುವ ನಿರ್ದಿಷ್ಟ ಕಾರ್ ಬ್ರ್ಯಾಂಡ್‌ನ ಸೇವೆ ಮತ್ತು ನಿರ್ವಹಣೆಯನ್ನು ನೋಡಿಕೊಳ್ಳುವ ಅಧಿಕೃತ ಕಾರ್ಯಾಗಾರಗಳು ಹೆಸರೇ ಸೂಚಿಸುವಂತೆ ಅಧಿಕೃತ ಸೇವಾ ಕೇಂದ್ರಗಳಾಗಿವೆ. ಈ ವಲಯವು ಈ ವಲಯದ ವಹಿವಾಟಿನ ಸರಿಸುಮಾರು ಶೇ 45% ಪಾಲು ಹೊಂದಿದೆ. ಅಧಿಕೃತ ಸೇವಾ ಕೇಂದ್ರದಲ್ಲಿನ ಸೇವೆಗಳನ್ನು ಪಡೆಯಲು ವಾಹನ ತಯಾರಕರು ಗ್ರಾಹಕರನ್ನು ನಿರ್ಬಂಧಿಸಿರುತ್ತಾರೆ. ವಾಹನಗಳ ಮಾಲೀಕರು ಬಿಡಿಭಾಗಗಳನ್ನು ಅಧಿಕೃತ ಸೇವಾ ಕೇಂದ್ರಗಳಲ್ಲಿ ಮಾತ್ರ ಖರೀದಿಸುವ ನಿರ್ಬಂಧ ಇರುತ್ತದೆ.

ಅಸಂಘಟಿತ ಸೇವಾ ಕೇಂದ್ರಗಳು

ಅಸಂಘಟಿತ ವಲಯದ ಮನೆ ಅಕ್ಕಪಕ್ಕದ ಗ್ಯಾರೇಜ್‌ಗಳು ಅಗ್ಗದ ದರದಲ್ಲಿ ಸೇವೆ ಒದಗಿಸಿ ತಮ್ಮ ಅಸ್ತಿತ್ವ ಉಳಿಸಿಕೊಂಡಿವೆ. ಈ ಗ್ಯಾರೇಜ್‌ಗಳು ಮೂಲತಃ ಅಸಂಘಟಿತ, ಅಲ್ಪ-ಸುಸಜ್ಜಿತ ಮತ್ತು ಕಡಿಮೆ ಖರ್ಚು-ವೆಚ್ಚ, ಮತ್ತು ಕನಿಷ್ಠ ನಿರ್ವಹಣೆಯ ಸೇವಾ ಕೇಂದ್ರಗಳಾಗಿರುತ್ತವೆ. ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಹೊಂದಿದ ಗ್ರಾಹಕರು ಹೆಚ್ಚಾಗಿ ಈ ಗ್ಯಾರೇಜ್‌ಗಳನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುತ್ತಾರೆ. ಕಾರಿನ ನಿರ್ವಹಣೆಯಲ್ಲಿ ಸ್ಪಲ್ಪಮಟ್ಟಿಗೆ ಹಣ ಉಳಿಸಲು ಗ್ಯಾರೇಜ್‌ಗಳು ನೆರವಾಗುತ್ತವೆ.

ಬಹು ಬ್ರ್ಯಾಂಡ್‌ ಸೇವಾ ಕೇಂದ್ರಗಳು

ಸಂಘಟಿತ ವಲಯದಲ್ಲಿ ಬರುವ ಈ ಬಹು (ಮಲ್ಟಿ) ಬ್ರ್ಯಾಂಡ್‌ ಕಾರ್ ಸೇವಾ ಕೇಂದ್ರಗಳು, ವಾಹನ ತಯಾರಿಕಾ ಕಂಪನಿಗಳ ಅಧಿಕೃತ ಸೇವಾ ಕೇಂದ್ರಗಳಾಗಿ ಗಮನ ಸೆಳೆಯುತ್ತವೆ. ವಾಹನಗಳ ಮಾಲೀಕರಿಗೆ ಹೆಚ್ಚು ವಿಶ್ವಾಸಾರ್ಹವಾದ ಸೇವೆ ಒದಗಿಸುವಲ್ಲಿ ಇವು ಮುಂಚೂಣಿಯಲ್ಲಿ ಇವೆ.

ಬಹು ಬ್ರ್ಯಾಂಡ್‌ನ ಸೇವೆ ಒದಗಿಸುವ ಮಹೀಂದ್ರಾ ಫಸ್ಟ್ ಚಾಯ್ಸ್ ಸರ್ವಿಸಸ್‌ನ ಮಾರುಕಟ್ಟೆ ವ್ಯವಹಾರದ ಮುಖ್ಯಸ್ಥ ಅಲೋಕ್ ಕಪೂರ್ ಅವರ ಪ್ರಕಾರ, ಬಹು ಬ್ರ್ಯಾಂಡ್‌ನ ಸರ್ವಿಸ್‌ ಕೇಂದ್ರಗಳ ವಹಿವಾಟು ಸದ್ಯಕ್ಕೆ ಕೇವಲ ಶೇ 1ರಷ್ಟಿದೆ. ಅಸಂಘಟಿತ ವಲಯದ ಸೇವಾ ಕೇಂದ್ರಗಳ ಪಾಲು (ಶೇ 53) ಗಮನಾರ್ಹವಾಗಿದೆ.

ಬಹು ಬ್ರ್ಯಾಂಡ್‌ ಸರ್ವಿಸ್‌ ಕೇಂದ್ರಗಳು ಕಾರ್ಯಾರಂಭ ಮಾಡುವ ಮುಂಚಿನ ದಿನಗಳಲ್ಲಿ ಕಾರ್ ಮಾಲೀಕರು ತಮ್ಮ ಕಾರು ಸೇವೆಗಾಗಿ ಆಯ್ಕೆ ಮಾಡಲು ಎರಡು ಆಯ್ಕೆಗಳನ್ನು ಹೊಂದಿದ್ದರು. ಕಂಪನಿಯು ಕಡ್ಡಾಯವಾಗಿ ನಿಗದಿಪಡಿಸಿದ ಸೇವಾ ಕೇಂದ್ರ ಅಥವಾ ಮನೆ ಹತ್ತಿರವಿರುವ ಸ್ಥಳೀಯ ಗ್ಯಾರೇಜ್‌ಗಳಿಗೆ ಹೋಗುತ್ತಿದ್ದರು. ಕಂಪನಿಯ ಅಧಿಕೃತ ಸೇವಾ ಕೇಂದ್ರಗಳಲ್ಲಿ ಗುಣಮಟ್ಟದ ಸೇವೆ, ಮೂಲ ಬಿಡಿ ಭಾಗಗಳ ಬಳಕೆ ಮತ್ತು ವಹಿವಾಟಿನಲ್ಲಿ ಪಾರದರ್ಶಕತೆ ಕಂಡು ಬರುತ್ತದೆ. ಬಲವಂತದ ಬಿಡಿ ಭಾಗ ಬದಲಿ ಮತ್ತು ಹೆಚ್ಚುವರಿ ಬಿಲ್‌ ವೆಚ್ಚವು ನಾಟಕೀಯವಾಗಿ ಏರುತ್ತಿತ್ತು. ಈ ಕಾರಣಕ್ಕೆ ಇಂತಹ ಸರ್ವಿಸ್‌ ಕೇಂದ್ರಗಳು ಗ್ರಾಹಕರಿಗೆ ಹೊರೆಯಾಗುತ್ತಿತ್ತು.

ಸ್ಥಳೀಯ ಗ್ಯಾರೇಜ್ಗಳಲ್ಲಿ ಹೆಚ್ಚುವರಿ ಬಿಲ್‌ ಸಮಸ್ಯೆಯನ್ನು ಪರಿಹರಿಸಬಹುದು. ಅಸಂಘಟಿತ ವಲಯದಲ್ಲಿನ ಗ್ಯಾರೇಜ್‌ಗಳು ಉತ್ತಮ ಗುಣಮಟ್ಟದ ಮತ್ತು ಕೈಗೆಟುಕುವ ದರದಲ್ಲಿ ಸರ್ವಿಸ್‌ ಸೇವೆ ಒದಗಿಸುವ ಬಹುಸಂಖ್ಯಾತರ ಬೇಡಿಕೆಗಳನ್ನು ಪೂರೈಸುತ್ತವೆ.

ದೇಶಿ ರಸ್ತೆಗಳಲ್ಲಿ ಲಕ್ಷಾಂತರ ಕಾರ್‌ಗಳು ಸಂಚರಿಸುತ್ತಿವೆ. ಇದು ಮಾರಾಟದ ನಂತರದ ಸೇವೆ ದ್ವಿಗುಣಗೊಳ್ಳಲು ಕಾರಣವಾಗಿದೆ. ಇತ್ತೀಚಿಗೆ ಹೆಚ್ಚು ಜನಪ್ರಿಯಗೊಳ್ಳುತ್ತಿರುವ ಬಹು ಬ್ರ್ಯಾಂಡ್‌ ಕಾರ್‌ ಸರ್ವಿಸ್‌ ಕೇಂದ್ರಗಳು ಉತ್ತಮ ಗುಣಮಟ್ಟದ ಸೇವೆ ಒದಗಿಸುತ್ತಿವೆ.

ಕಾರ್‌ ವಿಮೆ ಕಂಪನಿಗಳು ಮತ್ತು ಗೋಮೆಕ್ಯಾನಿಕ್ ನಂತಹ ಸಂಸ್ಥೆಗಳೂ ಸಹ ಬಹುಬ್ರಾಂಡ್ ಸರ್ವಿಸ್‌ ಕೇಂದ್ರಗಳಿಗೆ ಹೆಚ್ಚು ಆದ್ಯತೆ ಕೊಡುತ್ತವೆ. ಇವುಗಳು ಅಧಿಕೃತ ಸರ್ವಿಸ್‌ ಕೇಂದ್ರಗಳಿಗಿಂತ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಸೇವೆಗಳನ್ನು ಒದಗಿಸುತ್ತವೆ. ‘ರಿಪೇರಿ-ಓವರ್-ರಿಪ್ಲೇಸ್’ ನೀತಿಯು ವಿಮೆ ಕಂಪನಿಗಳಿಗೆ ತಮ್ಮ ನಷ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಬಹು-ಬ್ರ್ಯಾಂಡ್ ಸರ್ವಿಸ್‌ ಕೇಂದ್ರಗಳಲ್ಲಿ ನಗದುರಹಿತ ಸೇವಾ ಸೌಲಭ್ಯವನ್ನೂ ಕಾಣಬಹುದು. ವಾಹನಗಳ ಮಾಲೀಕರು ಹೊಂದಿರುವ ವಿಶ್ವಾಸದಿಂದಾಗಿ ಈ ಮಲ್ಟಿ ಬ್ರ್ಯಾಂಡ್ ಕಾರ್ ಸೇವಾ ಕೇಂದ್ರಗಳ ಭವಿಷ್ಯ ಉತ್ತಮವಾಗಿದೆ. ಹೊಸ ಯುವ ತಲೆಮಾರಿನವು ಈ ಬಗೆಯ ಸರ್ವಿಸ್‌ ಕೇಂದ್ರಗಳತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ.

(ಲೇಖಕ: ಗೋ ಮೆಕ್ಯಾನಿಕ್‌ನ ಸಹ-ಸ್ಥಾಪಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT