ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2025ಕ್ಕೆ ಮೊದಲ ಎಲೆಕ್ಟ್ರಿಕ್ ಕಾರು ತಯಾರಿಸಲಿದೆ ಬೆಂಟ್ಲಿ

Last Updated 26 ಜನವರಿ 2022, 10:52 IST
ಅಕ್ಷರ ಗಾತ್ರ

ಲಂಡನ್: ಬ್ರಿಟಿಷ್ ಲಕ್ಷುರಿ ಕಾರು ತಯಾರಿಕ ಸಂಸ್ಥೆ ಬೆಂಟ್ಲಿ, 2025ಕ್ಕೆ ಸಂಪೂರ್ಣ ಎಲೆಕ್ಟ್ರಿಕ್ ಕಾರು ತಯಾರಿಸುವುದಾಗಿ ಹೇಳಿದೆ.

ಲಂಡನ್‌ನಲ್ಲಿರುವ ಕಾರು ತಯಾರಿಕ ಘಟಕವನ್ನು ಮಾರ್ಪಾಡಿಸಿ ಅದನ್ನು ಎಲೆಕ್ಟ್ರಿಕ್ ಕಾರು ತಯಾರಿಕೆಗೆ ಬಳಸಿಕೊಳ್ಳುವ ಉದ್ದೇಶವನ್ನು ಬೆಂಟ್ಲಿ ಹೊಂದಿದೆ.

ಸಂಪೂರ್ಣ ಎಲೆಕ್ಟ್ರಿಕ್ ಕಾರು ತಯಾರಿಸುವುದು ಬೆಂಟ್ಲಿ ಯೋಜನೆಯಾಗಿದ್ದು, 2025ಕ್ಕೆ ಅದು ಪೂರ್ಣಗೊಂಡು, ಹೊಸ ಕಾರ್ ಬಿಡುಗಡೆಯಾಗಲಿದೆ. ಆದರೆ ಯಾವ ಮಾದರಿಯ ವಿನ್ಯಾಸ ಇರಲಿದೆ ಮತ್ತು ಕಾರಿನ ತಾಂತ್ರಿಕ ವೈಶಿಷ್ಟ್ಯಗಳ ಕುರಿತು ಕಂಪನಿ ಮಾಹಿತಿ ಬಹಿರಂಗಪಡಿಸಿಲ್ಲ.

ಬಹುತೇಕ ಕಾರು ತಯಾರಿಕ ಕಂಪನಿಗಳು ಸಾಂಪ್ರದಾಯಿಕ ಇಂಧನ ಬಳಕೆಯ ಕಾರುಗಳ ಬದಲಾಗಿ ನವೀಕರಿಸಬಹುದಾದ ಇಂಧನ ಬಳಕೆಯ ಕಾರು ತಯಾರಿಕೆಗೆ ಮುಂದಾಗಿವೆ. ಹೀಗಾಗಿ ಬೆಂಟ್ಲಿ ಕೂಡ ಎಲೆಕ್ಟ್ರಿಕ್ ಕಾರು ತಯಾರಿಕ ಯೋಜನೆಗೆ ಹೆಚ್ಚಿನ ಹೂಡಿಕೆ ಮಾಡಲಿದೆ.

2021ರಲ್ಲಿ ಜಾಗತಿಕ ಕಾರು ಮಾರಾಟದಲ್ಲಿ ಶೇ 31ರಷ್ಟು ಏರಿಕೆ ದಾಖಲಿಸಿರುವುದಾಗಿ ಬೆಂಟ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT