ಗುರುವಾರ , ಜೂನ್ 4, 2020
27 °C
ಹುಂಡೈ ಮೋಟರ್‌ ಇಂಡಿಯಾ ನಿರೀಕ್ಷೆ

ಕೊರೊನಾ: ಸುರಕ್ಷಿತ ಸಾರಿಗೆ, ಕಾರ್‌ಗೆ ಹೆಚ್ಚಲಿದೆ ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಎಲ್ಲೆಡೆ ‘ಕೊರೊನಾ–2’ ಸೃಷ್ಟಿಸಿರುವ ಹಾವಳಿಯಿಂದಾಗಿ, ಈಗಾಗಲೇ ಮಾರಾಟ ಕುಸಿತದಿಂದ ಕಂಗೆಟ್ಟಿರುವ ವಾಹನ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಳದ ಬೆಳ್ಳಿ ಕಿರಣಗಳು ಕಂಡು ಬರಲಿವೆಸ ಎಂದು ಕಾರ್‌ ತಯಾರಿಕೆಯಲ್ಲಿನ ದೇಶದ ಎರಡನೆ ಅತಿದೊಡ್ಡ ಕಂಪನಿಯಾಗಿರುವ ಹುಂಡೈ ಮೋಟರ್‌ ಇಂಡಿಯಾ (ಎಚ್‌ಎಂಐಎಲ್‌) ಆಶಾವಾದ ತಳೆದಿದೆ.

ಜನರು ಸುರಕ್ಷತೆ ದೃಷ್ಟಿಯಿಂದ ಬಾಡಿಗೆ ಕ್ಯಾಬ್‌, ನಗರ ಸಾರಿಗೆ ಬಸ್‌, ಮೆಟ್ರೊಗಳಲ್ಲಿ ಪ್ರಯಾಣಿಸುವುದಕ್ಕಿಂತ ತಾವೊಬ್ಬರೇ ವಾಹನ ಚಲಾಯಿಸಿಕೊಂಡು ಹೋಗುವುದಕ್ಕೆ ಹೆಚ್ಚು ಆದ್ಯತೆ ನೀಡಲಿದ್ದಾರೆ. ಇದರಿಂದ ವಾಹನಗಳ ಮಾರಾಟದ ಬೇಡಿಕೆ ಹೆಚ್ಚುವ ಸಾಧ್ಯತೆ ಇದೆ. ಈ ಬೇಡಿಕೆ ಹೆಚ್ಚಳ ಪೂರೈಸಲು ಕಂಪನಿಯು ಆನ್‌ಲೈನ್‌ ಮಾರಾಟ ಹೆಚ್ಚಳಕ್ಕೆ ಕ್ರಮ ಕೈಗೊಂಡಿದೆ.

‘ಪ್ರತಿಯೊಬ್ಬರೂ ಸುರಕ್ಷತೆಗೆ ಆದ್ಯತೆ ನೀಡುತ್ತಿದ್ದಾರೆ. ಜನದಟ್ಟಣೆಯಿಂದ ದೂರ ಇರಲು ಬಯಸುತ್ತಿದ್ದಾರೆ. ಮನೆಯಲ್ಲಿ ಸುರಕ್ಷಿತವಾಗಿ ಇರುವವರರು ಮನೆಯ ಹೊರಗೂ ಅದೇ ಬಗೆಯ ಸುರಕ್ಷತೆ ಪಡೆಯಲು ಸ್ವಂತ ಕಾರ್‌ ಬಳಕೆಗೆ ಒಲವು ತೋರುತ್ತಿದ್ದಾರೆ’ ಎಂದು ಕಂಪನಿಯ ಸಿಇಒ ಎಸ್‌. ಎಸ್‌. ಕಿಮ್‌ ಹೇಳಿದ್ದಾರೆ.

‘ಇದುವರೆಗೆ ಕಾರ್‌ ಖರೀದಿಸಲು ಹಿಂದೇಟು ಹಾಕುತ್ತಿದ್ದವರು ಈಗ ತಿರುಗಾಟದ ಸಂದರ್ಭದಲ್ಲಿಯೂ ಸುರಕ್ಷಿತ ಏಕಾಂತ ಬಯಸುತ್ತಿದ್ದಾರೆ. ಕಾರ್‌ ಖರೀದಿ ಕುರಿತ ಜನರ ಮನೋಭಾವದಲ್ಲಿ ಬದಲಾವಣೆ ಕಂಡುಬರುತ್ತಿದೆ. ವಾಹನ ಖರೀದಿಸುವವರು ಡೀಲರ್‌ಶಿಪ್‌ಗಳಿಗೆ ಭೇಟಿ ನೀಡುವುದನ್ನು ತಪ್ಪಿಸಲು ಕಂಪನಿಯು ಆನ್‌ಲೈನ್‌ನಲ್ಲಿಯೇ ಖರೀದಿಸಲು ‘ಕ್ಲಿಕ್‌ ಟು ಬಾಯ್‌’ ಸೌಲಭ್ಯಕ್ಕೆ ಚಾಲನೆ ನೀಡಿದೆ. ಕಾರ್‌ ಖರೀದಿಯ ಹಣಕಾಸು, ವಿಮೆ ಮತ್ತು ವಾಹನ ವಿತರಣೆ ಸೇವೆಗಳಿಗೆ ಆನ್‌ಲೈನ್‌ನಲ್ಲಿಯೇ ಅವಕಾಶ ಮಾಡಿಕೊಡಲಾಗುತ್ತಿದೆ. ಸದ್ಯಕ್ಕೆ ದೆಹಲಿ ಎನ್‌ಸಿಆರ್‌ ನಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ಶೀಘ್ರದಲ್ಲಿಯೇ ದೇಶದಾದ್ಯಂತ ಈ ಸೌಲಭ್ಯ ಜಾರಿಗೆ ಬರಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು