ಗುರುವಾರ , ಡಿಸೆಂಬರ್ 12, 2019
17 °C

ಬಿಎಂಡಬ್ಲ್ಯು ಎಕ್ಸ್‌7ಗೆ ಭಾರಿ ಬೇಡಿಕೆ

Published:
Updated:
Prajavani

ಗುರುಗ್ರಾಮ: ಐಷಾರಾಮಿ ಕಾರು ತಯಾರಿಸುವ ಬಿಎಂಡಬ್ಲ್ಯು ಕಂಪನಿಯ ಎಕ್ಸ್‌ 7ಗೆ ಭಾರತದಲ್ಲಿ ಭಾರಿ ಬೇಡಿಕೆ ಬಂದಿದೆ. ಬಿಡುಗಡೆ ಆದ ಮೂರು ತಿಂಗಳ ಒಳಗಾಗಿಯೇ ಎಲ್ಲವೂ ಮಾರಾಟವಾಗಿವೆ. ಇದರ ಎಕ್ಸ್‌ಷೋರೂಂ ಬೆಲೆ ₹ 98.9 ಲಕ್ಷ ಇದೆ. 

‘ಸ್ಪೋರ್ಟ್ಸ್‌ ಆ್ಯಕ್ಟಿವಿಟಿ ವೆಹಿಕಲ್‌ (ಎಸ್‌ಎವಿ) ವಿಭಾಗದಲ್ಲಿ ಮುಂಚೂಣಿಯಲ್ಲಿ ನಿಲ್ಲಲಿದೆ ಎನ್ನುವ ಅರಿವಿತ್ತು. ದೇಶದಾದ್ಯಂತ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಯಾರು ಮಾಡಿದ್ದೆಲ್ಲವೂ ಬುಕಿಂಗ್‌ ಆಗಿದೆ. ಮಾರುಕಟ್ಟೆಯ ಪರಿಸ್ಥಿತಿ ಹೇಗೆ ಇರಲಿ, ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ನೀಡಿದರೆ ಅದಕ್ಕೆ ಯಾವಾಗಲೂ ಬೇಡಿಕೆ ಇರುತ್ತದೆ ಎನ್ನುವುದನ್ನು ಎಕ್ಸ್‌ 7 ಮತ್ತೊಮ್ಮೆ ಸಾಬೀತುಪಡಿಸಿದೆ. ಇದೊಂದು ಆರಂಭವಷ್ಟೆ. ಐಷಾರಾಮಿ ಕಾರು ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಇಂಡಿಯಾದ ಹೊಸ ಮಾದರಿಯ ವಾಹನಗಳು ಬೇಡಿಕೆಯನ್ನು ಇನ್ನಷ್ಟು ಹೆಚ್ಚಿಸಲಿವೆ’ ಎಂದು ಬಿಎಂಡಬ್ಲ್ಯು ಗ್ರೂಪ್‌ ಇಂಡಿಯಾದ ಅಧ್ಯಕ್ಷ ರುದ್ರತೇಜ್‌ ಸಿಂಗ್‌ ತಿಳಿಸಿದ್ದಾರೆ.

ಎಕ್ಸ್‌ 7ನ ಪೆಟ್ರೋಲ್‌ ಮಾದರಿಯನ್ನು ಚೆನ್ನೈ ಘಟಕದಲ್ಲಿ ತಯಾರಿಸಲಾಗುತ್ತಿದೆ. ಪೆಟ್ರೋಲ್‌ ಮಾದರಿಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಎಸ್‌ಎವಿ ಪೆಟ್ರೋಲ್‌ ಮಾದರಿ 340 ಅಶ್ವಶಕ್ತಿ ಮತ್ತು ಡೀಸೆಲ್ ಮಾದರಿ 265 ಅಶ್ವಶಕ್ತಿ ಉತ್ಪಾದಿಸಬಲ್ಲದು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು