ಬುಧವಾರ, ಜುಲೈ 28, 2021
21 °C
ಲಾಕ್‌ಡೌನ್‌ನಿಂದ ಬದಲಾದ ಜನರ ಖರೀದಿ ಮನೋಭಾವ

ಸೆಕೆಂಡ್‌ ಹ್ಯಾಂಡ್ ಕಾರ್‌ ಖರೀದಿಗೆ ಆಸಕ್ತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಲಾಕ್‌ಡೌನ್‌ ಮಿತಿಗಳನ್ನು ಸಡಿಲಿಸುತ್ತಿರುವುದರಿಂದ ಜನರು ಬಳಸಿದ (ಸೆಕೆಂಡ್‌ ಹ್ಯಾಂಡ್‌) ಕಾರುಗಳನ್ನು ಖರೀದಿಸಲು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ ಎಂದು ಕಾರುಗಳ ಮಾರಾಟ ಮತ್ತು ಖರೀದಿಗೆ ಇರುವ ಜಾಲತಾಣ ಕಾರ್ಸ್‌24 ಹೇಳಿದೆ.

ಲಾಕ್‌ಡೌನ್‌ಗಿಂತಲೂ ಮೊದಲಿಗೆ ಹೋಲಿಸಿದರೆ ಲಾಕ್‌ಡೌನ್‌ ಸಡಿಲಿಸುತ್ತಿರುವ ಈ ಹೊತ್ತಿನಲ್ಲಿ ಈ ವಾಹನಗಳ ಸರಾಸರಿ ಮಾರಾಟ ದರ ಕಡಿಮೆಯಾಗುತ್ತಿದೆ. ಇದರಿಂದಾಗಿ ಗ್ರಾಹಕರು ಇತ್ತ ಆಕರ್ಷಿತರಾಗುತ್ತಿದ್ದಾರೆ ಎಂದಿದೆ.

ಕೋವಿಡ್‌ ನಿಯಂತ್ರಿಸಲು ಲಾಕ್‌ಡೌನ್‌ ಹೇರಿದಾಗ ಕಾರ್ಸ್‌24 ಸಮೀಕ್ಷೆ ಕೈಗೊಂಡಿತ್ತು. ಅದರಲ್ಲಿ ಲಾಕ್‌ಡೌನ್‌ ನಂತರ ಜನರ ಕಾರ್‌ ಖರೀದಿ ಮನೋವೃತ್ತಿಯಲ್ಲಿ ಯಾವ ರೀತಿಯಲ್ಲಿ ಬದಲಾವಣೆ ಆಗಲಿದೆ ಎನ್ನುವ ಬಗ್ಗೆ ಅಭಿಪ್ರಾಯ ಸಂಗ್ರಹಿಸಿತ್ತು.

‘ಲಾಕ್‌ಡೌನ್‌ನಿಂದಾಗಿ ಜನರ ಬಳಿ ನಗದು ಕೊರತೆ ಎದುರಾಗಿದೆ. ಹೀಗಾಗಿ ಕಾರು ಖರೀದಿಗೆ ಮಾಡುವ ವೆಚ್ಚದಲ್ಲಿ ಇಳಿಕೆ ಆಗಿದೆ. ಹೆಚ್ಚಿನ ಹಣ ಖರ್ಚು ಮಾಡಲು ಸಿದ್ಧರಿಲ್ಲ’ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ ಎಂದು ಕಾರ್ಸ್‌24ನ ಸಹ ಸ್ಥಾಪಕ ಗಜೇಂದ್ರ ಜಂಗಿದ್‌ ತಿಳಿಸಿದ್ದಾರೆ. 

‘ಸದ್ಯದ ಮಟ್ಟಿಗೆ ಮಾರಾಟ ಮಾಡುವವರಿಗಿಂತಲೂ ಕಾರು ಖರೀದಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ನಮ್ಮ ಜಾಲತಾಣದಲ್ಲಿ ಸೆಕೆಂಡ್‌ ಹ್ಯಾಂಡ್‌ ಕಾರ್‌ ಖರೀದಿಗೆ ಬರುತ್ತಿರುವವರ ಸಂಖ್ಯೆ ಗಣನೀಯ ಏರಿಕೆ ಕಾಣುತ್ತಿದೆ’ ಎಂದಿದ್ದಾರೆ.

ಲಾಕ್‌ಡೌನ್‌ ನಂತರ
40–45%: 
ಸ್ವಂತ ಕಾರು ಹೊಂದಲು ಬಯಸಿದವರು
23%: ಸೆಕೆಂಡ್‌ ಹ್ಯಾಂಡ್‌ ಕಾರು ಖರೀದಿಗೆ ಆಸಕ್ತಿ ತೋರಿಸಿರುವವರು
₹ 2.25 ಲಕ್ಷ: ಲಾಕ್‌ಡೌನ್‌ ನಂತರ ಸೆಕೆಂಡ್‌ ಹ್ಯಾಂಡ್‌ ಕಾರಿನ ಸರಾಸರಿ ಮಾರಾಟ ದರ
₹ 2.6 ಲಕ್ಷ: ಲಾಕ್‌ಡೌನ್‌ಗೂ ಮೊದಲು ಸೆಕೆಂಡ್‌ ಹ್ಯಾಂಡ್ ಕಾರಿಗೆ ಇದ್ದ ಸರಾಸರಿ ಮಾರಾಟ ದರ

ಬೇಡಿಕೆ ಇರುವ ಐದು ಮಾದರಿಗಳು
ಮಾರುತಿ ಸುಜುಕಿ ಸ್ವಿಫ್ಟ್
ಹುಂಡೈ ಸ್ಯಾಂಟ್ರೊ ಕ್ಸಿಂಗ್
ಹುಂಡೈ ಗ್ರ್ಯಾಂಡ್‌ ಐ10
ಹೊಂಡಾ ಸಿಟಿ
ಮಾರುತಿ ಸುಜುಕಿ ಸ್ವಿಫ್ಟ್‌ ಡಿಸೈರ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.