ವಾಹನ ಮಾರಾಟಕ್ಕೆಡಿಜಿಟಲ್‌ ಸ್ಪರ್ಶ

ಬುಧವಾರ, ಏಪ್ರಿಲ್ 24, 2019
33 °C

ವಾಹನ ಮಾರಾಟಕ್ಕೆಡಿಜಿಟಲ್‌ ಸ್ಪರ್ಶ

Published:
Updated:

ಡಿಜಿಟಲ್‌ ಸ್ಪರ್ಶ ಈಗ ವಾಹನಗಳ ಮಾರುಕಟ್ಟೆಯಲ್ಲೂ ಮಹತ್ವದ ಪಾತ್ರ ವಹಿಸುತ್ತಿದೆ. ಭಾರತದಲ್ಲಿ 2018ರಲ್ಲಿ ಶೇ 90ರಷ್ಟು ವಾಹನಗಳು ಡಿಜಿಟಲ್‌ ವಹಿವಾಟಿನ ಮೂಲಕವೇ ನಡೆದಿವೆ. 2016ರಲ್ಲಿ ಶೇ 74ರಷ್ಟು ವಹಿವಾಟು ನಡೆದಿತ್ತು. ವಿಡಿಯೊ ಮತ್ತು ಡೀಲರ್‌ಗಳ ವೈಬ್‌ಸೈಟ್‌ಗಳು ಗ್ರಾಹಕರ ಮೇಲೆ ಅಪಾರ ಪ್ರಭಾವ ಬೀರುತ್ತಿವೆ. ಈ ಮೂಲಕ ಭಾರತದ ವಾಹನ ಉದ್ಯಮ ಪರಿವರ್ತನೆಯ ಹಾದಿಯಲ್ಲಿ ಸಾಗಿದೆ.

ಆನ್‌ಲೈನ್‌ ಮೂಲಕ ಕಾರು ಬುಕ್‌ ಮಾಡಿದರೆ ಮನೆ ಮುಂದೆಯೇ ತಂದು ನಿಲ್ಲಿಸುವ ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳಿ. ಅಂತಹ ವ್ಯವಸ್ಥೆ ಜಾರಿಯಾಗುವ ದಿನಗಳು ದೂರ ಉಳಿದಿಲ್ಲ. ಗೂಗಲ್‌ ಮತ್ತು ಕಂತಾರ್‌ ಟಿಎನ್‌ಎಸ್‌ನ ‘ದಿ ಡ್ರೈವ್‌ ಟು ಡಿಸೈಡ್‌ 2018’ ವಾರ್ಷಿಕ ವರದಿ ಅನ್ವಯ, ಇಂದು ಭಾರತದ ಶೇ 90ರಷ್ಟು ಕಾರು ಖರೀದಿಗಳು ಡಿಜಿಟಲ್‌ ವ್ಯವಸ್ಥೆಯ ಮೂಲಕವೇ ನಡೆಯುತ್ತಿವೆ.

ಈ ಅಧ್ಯಯನವು ಗ್ರಾಹಕರು ಕಾರುಗಳ ಬಗ್ಗೆ ಪಡೆಯುವ ಮಾಹಿತಿ ಬಗ್ಗೆ ವಿಶ್ಲೇಷಿಸಿದೆ. ಗ್ರಾಹಕರು ವಾಹನಗಳ ವಿಡಿಯೊ (ಶೇ 80) ಮತ್ತು ಮಾಹಿತಿ ಹುಡುಕಾಟ (ಶೇ 90) ಹಾಗೂ ಬ್ರ್ಯಾಂಡ್‌ ಮತ್ತು ಡೀಲರ್‌ ವೈಬ್‌ಸೈಟ್‌ಗಳನ್ನು (ಶೇ 56) ಹೆಚ್ಚು ನೋಡುತ್ತಾರೆ ಎನ್ನುವುದರ ಮೇಲೆ ಬೆಳಕು ಚೆಲ್ಲಿದೆ. ಈ ಮೂರು ಸಂಗತಿಗಳೇ ಕಾರು ಖರೀದಿಸುವ ಸಂದರ್ಭದಲ್ಲಿ ನಿರ್ಧಾರ ಕೈಗೊಳ್ಳಲು ಅತಿ ಹೆಚ್ಚು ಪ್ರಭಾವ ಬೀರುತ್ತಿವೆ.

ಆನ್‌ಲೈನ್‌ ಎನ್ನುವುದು ಈಗ ಅನಿವಾರ್ಯ ಸಂಶೋಧನಾ ಸಂಪನ್ಮೂಲವಾಗಿದೆ. ದೇಶಿ ಗ್ರಾಹಕರ ಆಶಯಗಳು ಮತ್ತು ಬಯಕೆಯನ್ನು ಈಡೇರಿಸುವ ನಿಟ್ಟಿನಲ್ಲೂ ಆನ್‌ಲೈನ್‌ ವಹಿವಾಟು ಮಹತ್ವದ ಪಾತ್ರವಹಿಸಿದೆ. ವಾಹನಗಳನ್ನು ಖರೀದಿಸುವ ಶೇ 90ರಷ್ಟು ಗ್ರಾಹಕರು ಆನ್‌ಲೈನ್‌ನಲ್ಲಿಯೇ ಹೆಚ್ಚು ಮಾಹಿತಿ ಪಡೆದು ನಿರ್ಧಾರ ಕೈಗೊಳ್ಳುತ್ತಾರೆ.

ಆನ್‌ಲೈನ್‌ ಎನ್ನುವುದು ಸಂಪನ್ಮೂಲ ವಸ್ತುವಾಗಿದೆ. ಇಂದು ವಾಹನಗಳನ್ನು ಖರೀದಿಸುವ ಶೇ 90ರಷ್ಟು ಮಂದಿ ಆನ್‌ಲೈನ್‌ನಲ್ಲೇ ಮಾಹಿತಿ ಪಡೆಯುವ ಮೂಲಕ ನಿರ್ಧಾರ ಕೈಗೊಳ್ಳುತ್ತಾರೆ ಎಂದು ವರದಿ ಹೇಳುತ್ತದೆ. ಅಲ್ಲದೇ, ಖರೀದಿದಾರರು ಆನ್‌ಲೈನ್‌ನಲ್ಲಿ ಮಾಹಿತಿಗಾಗಿ ಶೋಧಿಸುವವರು ಬ್ರ್ಯಾಂಡ್‌ಗಳ ಬಗ್ಗೆ ಹೆಚ್ಚು ಖಚಿತತೆ ಹೊಂದಿರುತ್ತಾರೆ. ಬ್ರ್ಯಾಂಡ್‌ಗಳ ಬಗ್ಗೆ ಬದಲಾವಣೆ ಬಯಸುವವರು 2016ರಲ್ಲಿ ಶೇ 11ರಷ್ಟು ಇದ್ದರೆ, 2018ರಲ್ಲಿ ಶೇ 8ರಷ್ಟು ಇತ್ತು.

ಖರೀದಿದಾರರಿಗೆ ವಿಡಿಯೊ ಮಾಹಿತಿ: ವಾಹನಗಳ ಖರೀದಿಯಲ್ಲಿ ಆನ್‌ಲೈನ್‌ ವಿಡಿಯೊ ಮಹತ್ವದ ಪಾತ್ರ ವಹಿಸುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ವಿಡಿಯೊ ನೋಡಿ ಖರೀದಿ ಬಗ್ಗೆ ನಿರ್ಧಾರ ಕೈಗೊಳ್ಳುವವರ ಸಂಖ್ಯೆಯೂ ದುಪ್ಪಟ್ಟಾಗಿದೆ. 2016ರಲ್ಲಿ ಈ ಪ್ರಮಾಣ ಶೇ 43ರಷ್ಟು ಇದ್ದರೆ, 2018ರಲ್ಲಿ ಶೇ 80ರಷ್ಟು ಇತ್ತು.

ವಿಡಿಯೊಗಳ ಕೇವಲ ಮಾಹಿತಿ ನೀಡುವ ವೇದಿಕೆಗೆ ಮಾತ್ರ ಸೀಮಿತವಾಗದೆ ಸಮಾಲೋಚನೆಗೂ ಅನುಕೂಲ ಕಲ್ಪಿಸಿದೆ. ವಿವಿಧ ರೀತಿಯ ಮಾಹಿತಿ ಸಂಗ್ರಹಿಸಲು ಮತ್ತು ಕ್ರಿಯಾತ್ಮಕ ರೂಪದಲ್ಲಿ ಒಳನೋಟ ಪಡೆಯಲು ಸಹಕಾರಿಯಾಗಿದೆ. ಆನ್‌ಲೈನ್‌ನಲ್ಲಿ ವಿಡಿಯೊ ವೀಕ್ಷಿಸಿದ ಶೇ 87ರಷ್ಟು ಮಂದಿಯಲ್ಲಿ ಶೇಕಡ 52ರಷ್ಟು ಮಂದಿ ಡೀಲರ್‌ಗಳನ್ನು ಭೇಟಿಯಾಗಿದ್ದಾರೆ. ಶೇಕಡ 45ರಷ್ಟು ಮಂದಿ ‘ಟೆಸ್ಟ್‌ ಡ್ರೈವ್‌’ ಮಾಡಿದ್ದಾರೆ. ಶೇ 40ರಷ್ಟು ಮಂದಿ ದರಗಳ ಬಗ್ಗೆ ಮಾಹಿತಿ ಕೋರಿದ್ದಾರೆ. ಶೇ 27ರಷ್ಟು ಮಂದಿ ಹಣಕಾಸು ಸೌಲಭ್ಯದ ಕುರಿತು ವಿವರಗಳನ್ನು ಪಡೆದುಕೊಂಡಿದ್ದಾರೆ.

ಡಿಜಿಟಲ್‌ ಡೀಲರ್‌ಗಳು: ಖರೀದಿಗಾರರಿಗೆ ಡಿಜಿಟಲ್‌ ವ್ಯವಸ್ಥೆ ಪ್ರಾಥಮಿಕ ಸಾಧನೆಯಾಗಿರುವುದರಿಂದ ಆಟೊಮೊಬೈಲ್‌ ಬ್ರ್ಯಾಂಡ್‌ಗಳು ಮತ್ತು ಡೀಲರ್‌ಶಿಪ್‌ ಹೊಂದಿರುವವರು ಆನ್‌ಲೈನ್‌ ಮೊರೆ ಹೋಗುತ್ತಿರುವುದು ಸಾಮಾನ್ಯವಾಗಿದೆ.

ವರದಿ ಪ್ರಕಾರ, ಶೇ 60ರಷ್ಟು ಖರೀದಿದಾರರು ಡೀಲರ್‌ಶಿಪ್‌ಗಳ ಆನ್‌ಲೈನ್‌ಗಾಗಿ ಮಾಹಿತಿ ಪಡೆದಿದ್ದಾರೆ. ಶೇ 56ರಷ್ಟು ಬಳಕೆದಾರರು ಡೀಲರ್‌ ವೆಬ್‌ಸೈಟ್‌ಗಳಿಗೆ ಮೊರೆ ಹೋಗಿದ್ದಾರೆ. ವಾಹನಗಳ ದರಗಳ ಜತೆಗೆ, ನಿರ್ವಹಣೆ (ಶೇ 41), ಪ್ರೊಮೊಷನಲ್‌ ಆಫರ್‌ಗಳಿಗೆ (ಶೇ 37), ಮತ್ತು ಸ್ಥಳಕ್ಕಾಗಿ (ಶೇ 35) ಮತ್ತು ಪರಾಮರ್ಶೆ ಹಾಗೂ ಶಿಫಾರಸುಗಳಿಗೆ (ಶೇ 32) ಮಂದಿ ಆನ್‌ಲೈನ್‌ ಮೊರೆ ಹೋಗಿದ್ದಾರೆ. ಹೀಗಾಗಿ, ಆನ್‌ಲೈನ್‌ ಗ್ರಾಹಕರನ್ನು ಸೆಳೆಯುವ ಪ್ರಯತ್ನಗಳು ಸಹಜವಾಗಿಯೇ ನಡೆಯುತ್ತಿವೆ.

‘ಗ್ರಾಹಕರ ಇಂಟರ್‌ನೆಟ್‌ ಮೇಲಿನ ಅವಲಂಬನೆಯು ದಿನೇ ದಿನೇ ಹೆಚ್ಚುತ್ತಿದೆ. ತಮ್ಮಲ್ಲಿ ಮೂಡುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪರಿಹಾರದ ವೇದಿಕೆಯನ್ನಾಗಿಯೂ ಈ ಮಾಧ್ಯಮವನ್ನು ಪರಿವರ್ತಿಸಿಕೊಂಡಿದ್ದಾರೆ’ ಎಂದು ಗೂಗಲ್‌ ಇಂಡಿಯಾ ಸೇಲ್ಸ್‌ನ ನಿರ್ದೇಶಕ ವಿಕಾಸ್‌ ಅಗ್ನಿಹೋತ್ರಿ ಹೇಳುತ್ತಾರೆ.

ವರದಿಯನ್ನು ಕಾಂತರ್‌ ಟಿಎನ್‌ಎಸ್‌ ಕೈಗೊಂಡ ಅಧ್ಯಯನದ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಆನ್‌ಲೈನ್‌ನಲ್ಲಿ ತೊಡಗಿಸಿಕೊಂಡ 4 ಸಾವಿರ ಮಂದಿಯ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳಲಾಗಿದೆ. ದೂರವಾಣಿ ಮೂಲಕ ನಡೆಸಿದ 25 ನಿಮಿಷ ಸಂದರ್ಶನ ಮತ್ತು 30 ನಿಮಿಷಕ್ಕೂ ಹೆಚ್ಚು ಅವಧಿಯ ಮುಖಾಮುಖಿ ಸಂದರ್ಶನ ಆಧರಿಸಿ ಈ ವರದಿ ಸಿದ್ಧಪಡಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !