ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀರೊ ಮೋಟೊ ‘ವಿಡಾ ವಿ1 ಪ್ರೊ’ ಬೆಲೆ ₹ 6 ಸಾವಿರ ಏರಿಕೆ

Published 4 ಜೂನ್ 2023, 11:18 IST
Last Updated 4 ಜೂನ್ 2023, 11:18 IST
ಅಕ್ಷರ ಗಾತ್ರ

ನವದೆಹಲಿ: ಹೀರೊ ಮೊಟೊಕಾರ್ಪ್‌ ಕಂಪನಿಯು ತನ್ನ ವಿದ್ಯುತ್ ಚಾಲಿತ ಸ್ಕೂಟರ್‌ ‘ವಿಡಾ ವಿ1 ಪ್ರೊ’ ಬೆಲೆಯನ್ನು ₹ 6 ಸಾವಿರದಷ್ಟು ಹೆಚ್ಚಿಸಿದೆ.

ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳಿಗೆ (ಇ.ವಿ) ಸಿಗುವ ಸಬ್ಸಿಡಿಯು ಜೂನ್‌ 1ರಿಂದ ಅನ್ವಯವಾಗುವಂತೆ ಕಡಿಮೆ ಆಗಿಗಿರುವುದರಿಂದ ಅದನ್ನು ಸರಿದೂಗಿಸಲು ಈ ಬೆಲೆ ಏರಿಕೆ ಮಾಡಲಾಗಿದೆ. ಇ–ಸ್ಕೂಟರ್‌ನ ಬೆಲೆಯು ಫೇಮ್‌–2 ಸಬ್ಸಿಡಿ ಮತ್ತು ಪೋರ್ಟೆಬಲ್ ಚಾರ್ಜರ್‌ನೊಂದಿಗೆ ₹1,45,900ಕ್ಕೆ ಏರಿಕೆ ಆಗಿದೆ ಎಂದು ತಿಳಿಸಿದೆ.

ಬೆಲೆ ಏರಿಕೆಯನ್ನು ಕಂಪನಿಯ ವಿತರಕರು ಖಚಿತಪಡಿಸಿದ್ದಾರೆ. ಆದರೆ ಕಂಪನಿಯ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಈಗಾಗಲೇ ಹಲವು ಕಂಪನಿಗಳು ತಮ್ಮ ಇ.ವಿ.ಗಳ ಬೆಲೆ ಏರಿಕೆ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT