ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಂತ್ರಿಕ ದೋಷ: ಏಳು ಲಕ್ಷಕ್ಕೂ ಅಧಿಕ ಕಾರುಗಳ ಬಿಡಿಭಾಗ ಬದಲಾಯಿಸಿಕೊಡಲಿದೆ ಹೋಂಡಾ

Last Updated 31 ಮಾರ್ಚ್ 2021, 11:27 IST
ಅಕ್ಷರ ಗಾತ್ರ

ವಾಷಿಂಗ್ಟನ್: ಹೋಂಡಾ ಮೋಟಾರ್‌ ಕಾರುಗಳ ಬಿಡಿಭಾಗವೊಂದರಲ್ಲಿ ದೋಷ ಕಾಣಿಸಿಕೊಂಡಿದ್ದು, ಅವುಗಳನ್ನು ವಾಪಸ್ ಕರೆಸಿಕೊಂಡು, ಬದಲಾಯಿಸಿಕೊಡಲು ಸಂಸ್ಥೆ ಮುಂದಾಗಿದೆ.

ಸುಮಾರು 7,61,000 ಕಾರುಗಳಲ್ಲಿ ಜಾಗತಿಕವಾಗಿ ಫುಯೆಲ್ ಪಂಪ್ ಸಮಸ್ಯೆ ಕಾಣಿಸಿಕೊಂಡಿದೆ. ಅದರಿಂದ ಎಂಜಿನ್ ತೊಂದರೆ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಅವುಗಳನ್ನು ಕಂಪನಿ ಬದಲಾಯಿಸಿಕೊಡಲಿದೆ.

ಈ ಪೈಕಿ 6,28,000 ಕಾರುಗಳು ಅಮೆರಿಕದಲ್ಲಿವೆ. ಮತ್ತು 2018ರಿಂದ 2020ರ ಅವಧಿಯಲ್ಲಿ ತಯಾರಾದ ಅಕ್ಯುರಾ ಮತ್ತು ಹೋಂಡಾ ಕಾರುಗಳಿವೆ. ಆದರೆ ಈ ದೋಷದಿಂದ ಕಾರು ಅಪಘಾತಕ್ಕೀಡಾದ ಯಾವುದೇ ವರದಿ ಬಂದಿಲ್ಲ ಎಂದು ಕಂಪನಿ ಹೇಳಿದೆ.

ಹೋಂಡಾ ಅಕೋರ್ಡ್, ಸಿವಿಕ್, ಸಿಆರ್-ವಿ ಮತ್ತಿತರ ಮಾದರಿಗಳು ಕೂಡ ಸೇರಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT