ಮಾರುಕಟ್ಟೆಗಿಳಿದ ಇಸುಜು - ಎಂಯು-ಎಕ್ಸ್ ಯುವಿ

7

ಮಾರುಕಟ್ಟೆಗಿಳಿದ ಇಸುಜು - ಎಂಯು-ಎಕ್ಸ್ ಯುವಿ

Published:
Updated:
Deccan Herald

ಬಹುನಿರೀಕ್ಷಿತ ಹೊಸ ಇಸುಜು ಎಂಯು-ಎಕ್ಸ್ ಅನ್ನು ಭಾರತೀಯ ಮಾರುಕಟ್ಟೆಗೆ ಕಳೆದ ತಿಂಗಳು ಬಿಡುಗಡೆ ಮಾಡಲಾಯಿತು. ಸ್ಟೈಲ್ ಮತ್ತು ಹೊಸ ವಿನ್ಯಾಸಗಳಿಂದಾಗಿ ಈ ಹೊಸ ಎಂಯು-ಎಕ್ಸ್ ಎಸ್‍ಯುವಿ ಮತ್ತಷ್ಟು ಆಕರ್ಷಕವಾಗಿ ಕಾಣಿಸಿಕೊಳ್ಳುತ್ತಿದೆ. ಈ ಹೊಸ ಮಾದರಿಯ ಎಂಯು-ಎಕ್ಸ್ ಸ್ಪೋರ್ಟಿಯರ್ `ಲಾವಾ ಬ್ಲ್ಯಾಕ್’ ಪ್ರೀಮಿಯಂ ಇಂಟೀರಿಯರ್‌ಗಳನ್ನು ಹೊಂದಿದ್ದು, ಲೆದರ್ ಸೀಟ್‍ಗಳು, ಏಳು ಮಂದಿ ಪ್ರಯಾಣಿಸಲು ಸಾಕಾಗುವಷ್ಟು ಜಾಗವೂ ಇದೆ.

ಹೊರಾಂಗಣ ಮತ್ತು ಒಳಾಂಗಣದಲ್ಲಿ ಹೆಚ್ಚು ಹೆಚ್ಚು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದರಲ್ಲಿ ಆರು ಏರ್ ಬ್ಯಾಗ್ ಗಳಿವೆ. ಹಿಲ್ ಡೀಸೆಂಟ್ ಕಂಟ್ರೋಲ್ (ಎಚ್‍ಡಿಸಿ)ಯೊಂದಿಗೆ ಹೆಚ್ಚು ಸುರಕ್ಷತಾ ಸೌಲಭ್ಯಗಳಿವೆ. ಭಾರತದ ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ಈ ವಾಹನದಲ್ಲಿ ಸೌಲಭ್ಯಗಳನ್ನು ನೀಡಲಾಗಿದೆ.

ಕ್ರಿಕೆಟ್ ಲೋಕದ ಧೃವತಾರೆ ಆಸ್ಟ್ರೇಲಿಯಾದ ಜಾಂಟಿರೋಡ್ಸ್ ಇಸುಜು ಇಂಡಿಯಾಗೆ ಲೈಫ್‍ಸ್ಟೈಲ್ ಅಂಬಾಸಿಡರ್ ಆಗಿದ್ದಾರೆ, ಅಕ್ಟೋಬರ್‌ನಲ್ಲಿ ಹೈದ್ರಾಬಾದ್‍ನಲ್ಲಿ ನಡೆದ ಅದ್ಧೂರಿ ಸಮಾರಂಭ ದಲ್ಲಿ ಜಾಂಟಿ ರೋಡ್ಸ್ ತಮ್ಮ ಕುಟುಂಬ ಸದಸ್ಯರೊಂದಿಗೆ ಈ ಹೊಸ ಎಂಯು-ಎಕ್ಸ್ ಅನ್ನು ಚಲಾಯಿಸುವ ಮೂಲಕ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದರು.

ಈ ಹೊಸ ಎಂಯು-ಎಕ್ಸ್‌ ವಿಶಿಷ್ಟ ರೀತಿಯಲ್ಲಿ ಕಾರಿನ ಸಂಪೂರ್ಣ ವಿನ್ಯಾಸವನ್ನೇ ಆಕರ್ಷಕವಾಗಿಸಲಾಗಿದೆ. ಮುಂಭಾಗದಲ್ಲಿ ಗರುಡ ಪಕ್ಷಿಯನ್ನು ಹೋಲುವುದಾಗಿ ಕಂಪನಿ ಹೇಳಿಕೊಂಡಿದೆ. ಇಸುಜುವಿನ ಮೂಲ ಸಿಗ್ನೇಚರ್ ಗ್ರಿಲ್ ವಿನ್ಯಾಸವನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಹೊಸ ಬೈ-ಎಲ್‍ಇಡಿ ಆಟೊ ಲೆವೆಲ್ಲಿಂಗ್ ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ಸ್‌ ನೊಂದಿಗೆ ಮತ್ತಷ್ಟು ಸುಂದರಗೊಳಿಸಲಾಗಿದೆ.

ಇದರಲ್ಲಿರುವ ಸಮಗ್ರವಾದ ಲೈಟ್-ಗೈಡ್ ಮತ್ತು ಸ್ಟೈಲಿಶ್ ಡೇಲೈಟ್ ರನ್ನಿಂಗ್ ಲ್ಯಾಂಪ್ಸ್ (ಡಿಆರ್‍ಎಲ್)ಗಳು ವಾಹನದ ಅಂದ ವನ್ನು ಹೆಚ್ಚಿಸುತ್ತವೆ. ಈ ಕಾರ್‌ನ ಹಿಂಭಾಗದಲ್ಲಿ ಆಕರ್ಷಕವಾದ ಎಲ್‍ಇಡಿ ಪೊಸಿಶನ್ ಲೈಟ್‍ಗಳಿವೆ. ಟೇಲ್-ಲೈಟ್ಸ್, 2-ಟೋನ್ ರಿಯರ್ ಸ್ಪಾಯ್ಲರ್ ಮತ್ತು ಶಾರ್ಕ್‍ಫಿನ್ ಆಂಟೆನಾ ಇದ್ದು, ಅದಕ್ಕೆ ಗನ್ ಮೆಟಲ್ ಫಿನಿಶ್ ನೀಡಿದೆ.

ಹೊಸ ಪೀಳಿಗೆಯ ಖರೀದಿದಾರರನ್ನು ಆಕರ್ಷಿಸುವಂತಹ ವೈಶಿಷ್ಟ್ಯಗಳು ಈ ಕಾರಿನಲ್ಲಿವೆ. ಈ ಎಸ್‍ಯುವಿಯು 18 ಇಂಚುಗಳ ಮಲ್ಟಿ-ಸ್ಪೋಕ್ ಟ್ವಿಸ್ಟ್ ಡಿಸೈನ್ ಡೈಮಂಡ್ ಕಟ್ ಅನ್ನು ಒಳಗೊಂಡಿದೆ. ಆದ್ದರಿಂದ ಹೆಚ್ಚು ಸ್ಪೋರ್ಟಿ, ಮಸ್ಕುಲರ್ ಮತ್ತು ಮಹತ್ವಾಕಾಂಕ್ಷೆಯ ವಾಹನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

3.0 ಲೀ. ಎಂಜಿನ್ ಸಾಮರ್ಥ್ಯದ 4ಜೆಜೆ1 ಡೀಸೆಲ್ ಎಂಜಿನ್ ಈ ಕಾರಿನಲ್ಲಿದೆ. ಇದು 130 ಕಿಲೋವ್ಯಾಟ್ (177 ಪಿಎಸ್) ಶಕ್ತಿ ಯನ್ನು ಹೊರಹಾಕುವಷ್ಟು (ಔಟ್‌ಪುಟ್‌) ಶಕ್ತಿ ಹೊಂದಿದೆ. ಗರಿಷ್ಠ ಮಟ್ಟದ ಅಂದರೆ 390 ಎನ್‍ಎಂ ಟಾರ್ಕ್ ಉತ್ಪಾದಿಸುವಷ್ಟು ಶಕ್ತವಾಗಿದೆ. ಇದರಲ್ಲಿ 5-ಸ್ಪೀಡ್ ಸೀಕ್ವೆನ್ಷಿಯಲ್ ಶಿಫ್ಟ್ ಆಟೋಮ್ಯಾಟಿಕ್ ಟ್ರಾನ್ಸ್‍ಮಿಷನ್ ಇರಲಿದೆ. 230 ಎಂಎಂನಷ್ಟು ಗ್ರೌಂಡ್ ಕ್ಲಿಯರೆನ್ಸ್ ಇರುವುದರಿಂದ, ಹೊಸ ಎಂಯು-ಎಕ್ಸ್ ಕ್ಲಾಸ್ ಲೀಡಿಂಗ್ ಅಪ್ರೋಚ್ ಮತ್ತು ಡಿಪಾರ್ಚರ್ ಆ್ಯಂಗಲ್‍ಗಳನ್ನು ನೀಡಲಿದೆ. ಈ ಎಲ್ಲಾ ವೈಶಿಷ್ಟ್ಯಗಳಿಂದ ಈ ವಾಹನ ಯಾವುದೇ ಸಂದರ್ಭದಲ್ಲಿ ಯಾವುದೇ ಸ್ಥಳಕ್ಕೆ ಕೊಂಡೊಯ್ಯಲು ಸಿದ್ಧವಾಗಿರುತ್ತದೆ.

ಈ ಹೊಸ ವಾಹನದ ಒಳಾಂಗಣ ವಿನ್ಯಾಸ ಪ್ರಯಾಣಿಕರಿಗೆ ಖುಷಿ ಮತ್ತು ಮುದ ನೀಡಲಿದೆ. ಕ್ವಿಲ್ಟ್-ಪ್ಯಾಟರ್ನ್‍ನ ಲೆದರ್ ಸೀಟುಗಳು, ಸಾಫ್ಟ್-ಟಚ್ ಪೆನಲ್‍ಗಳೊಂದಿಗೆ ಪ್ರೀಮಿಯಂ ಫಿನಿಶ್ ಡ್ಯಾಶ್‍ಬೋರ್ಡ್, ಬ್ರೈಟ್ ಸಿಲ್ವರ್-ಫಿನಿಶ್ ಸೆಂಟರ್ ಕ್ಲಸ್ಟರ್ ಮತ್ತು ಕ್ರೋಮ್ ಫಿನಿಶ್ ವೆಂಟ್ ನಾಬ್‍ಗಳು ವಾಹನದ ಅಂದವನ್ನು ಹೆಚ್ಚಿಸಿವೆ. ಈ ಹೊಸ ಎಸ್‍ಯುವಿ ಆರು ಏರ್ ಬ್ಯಾಗ್ ಗಳೊಂದಿಗೆ ಸುಸಜ್ಜಿತವಾಗಿದ್ದು, ಪ್ರಯಾಣಿಕರಿಗೆ ಸುರಕ್ಷತೆಗೆ ಒತ್ತು ನೀಡಲಾಗಿದೆ.

ಈ ಕಾರು ಸ್ಟೀಲ್ ಬಾಡಿಯೊಂದಿಗೆ ಟೇಲರ್ ವೆಲ್ಡೆಡ್ ಬ್ಲ್ಯಾಂಕ್ ಮತ್ತು ಕ್ರಂಪಲ್ ಝೋನ್ ಅನ್ನು ಒಳಗೊಂಡಿದ್ದು. ಇವು ತುಕ್ಕು ನಿರೋಧವಾಗಿದೆ. ಇದರಿಂದ ಪ್ರಯಾಣಿಕರಿಗೆ ಮತ್ತಷ್ಟು ಹೆಚ್ಚಿನ ಸುರಕ್ಷತೆ ಸಿಗಲಿದೆ. ಇಎಸ್‍ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಸಿಎಸ್ (ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್), ಎಚ್‍ಡಿಸಿ (ಹಿಲ್ ಡೀಸೆಂಟ್ ಕಂಟ್ರೋಲ್) ಮತ್ತು ಎಬಿಎಸ್ (ಆ್ಯಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಎ (ಎಮರ್ಜೆನ್ಸಿ ಬ್ರೇಕ್ ಅಸಿಸ್ಟ್) ಮತ್ತು ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್-ಫೋರ್ಸ್ ಡಿಸ್ಟ್ರಿಬ್ಯುಷನ್)ನಂತಹ ಹತ್ತು ಹಲವು ವೈಶಿಷ್ಟ್ಯಗಳು ಹಾಗೂ ಸುರಕ್ಷತಾ ಕ್ರಮಗಳನ್ನು ಈ ವಾಹನ ಒಳಗೊಂಡಿದೆ.

ಚಾಲನೆಗೆ ಸೂಕ್ತವಾದ ಪರಿಸ್ಥಿತಿಗಳಿಲ್ಲದ ಸಂದರ್ಭದಲ್ಲಿ ಈ ಎಲ್ಲಾ ಅಂಶಗಳು ಸುರಕ್ಷತೆಯನ್ನು ನೀಡಲಿವೆ. ಈ ಮೂಲಕ ಚಾಲಕನಿಗೆ ಯಾವುದೇ ಕಿರಿಕಿರಿ ಇಲ್ಲದ ರೀತಿಯಲ್ಲಿ ವಾಹನ ಚಾಲನೆ ಅನುಭವ ನೀಡಲಿದೆ.

ಈ ಹೊಸ ಎಂಯು-ಎಕ್ಸ್ ಅನ್ನು ಆಂಧ್ರಪ್ರದೇಶದ ಶ್ರೀಸಿಟಿಯ ಇಸುಜುನ ಉತ್ಪಾದನಾ ಘಟಕದಲ್ಲಿ ತಯಾರಿಸಲಾಗಿದೆ. ಹೊಸ ಸ್ಟೈಲ್, ಪವರ್ ಮತ್ತು ರಸ್ತೆಯಲ್ಲಿ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗುವಂತಹ ವಾಹನ ಬಯಸುವವರಿಗೆ ಈ ಎಂಯು-ಎಕ್ಸ್ ಹೇಳಿ ಮಾಡಿಸಿದಂತಹ ವಾಹನ. ಹೆಚ್ಚು ಸ್ಥಳಾವಕಾಶ, ಆರಾಮದಾಯಕ ಮತ್ತು ಸುರಕ್ಷತೆಯಲ್ಲಿ ಒಂದು ಹೆಜ್ಜೆ ಮುಂದಿರುವ ಈ ಎಸ್‍ಯುವಿ ಇಡೀ ಕುಟುಂಬಕ್ಕೆ ಆರಾಮದಾಯಕವಾದ ಪ್ರಯಾಣದ ಅನುಭವವನ್ನು ನೀಡಲಿದೆ. ಹೆಚ್ಚು ಶಕ್ತಿಶಾಲಿ ಮತ್ತು ಹೆಚ್ಚು ಪ್ರೀತಿಶಾಲಿಯಾಗಿರುವ ಈ ವಾಹನ ಭಾರತೀಯ ಎಸ್‍ಯುವಿ ಖರೀದಿದಾರರ ಮನ ಗೆಲ್ಲಲಿದೆ.

ಈ ಹೊಸ ವಾಹನವನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ ಮಾತನಾಡಿದ ಇಸುಜು ಮೋಟರ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ನ್ಯಾಹಿರೋ ಯಮಗುಚಿ `ಇಸುಜು ಎಂಯು-ಎಕ್ಸ್ ಭಾರತೀಯ ಎಸ್‍ಯುವಿ ಮಾರುಕಟ್ಟೆಯನ್ನು ತುದಿಗಾಲ ಮೇಲೆನಿಲ್ಲಿಸಿದೆ. ಕಾಲಕ್ರಮೇಣ ಇದು ಹಲವಾರು ಭಾರತೀಯ ಕುಟುಂಬಗಳ ನೆಚ್ಚಿನ ಆಯ್ಕೆಯ ವಾಹನವಾಗಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬ್ರ್ಯಾಂಡ್ ಅಂಬಾಸಿಡರ್ ಜಾಂಟಿ ರೋಡ್ಸ್ ಅವರು ಈ ಹೊಸ ಎಂಯು-ಎಕ್ಸ್ ವಾಹನವನ್ನು ಬಿಡುಗಡೆ ಮಾಡಿ ಮಾತನಾಡಿ 'ಭಾರತಕ್ಕೆ ಬಂದಿರುವುದಕ್ಕೆ ನನಗೆ ಸಂತಸವೆನಿಸುತ್ತಿದೆ. ಇಸುಜು ಜತೆಗೆ ಹೆಜ್ಜೆ ಹಾಕುತ್ತಿರುವುದಕ್ಕೆ ಖುಷಿ ಎನಿಸುತ್ತಿದೆ' ಎಂದರು.

‘ಆಗಸ್ಟ್‌ನಲ್ಲಿ ಇಸುಜು ಜತೆಗೆ ಕೈಜೋಡಿಸಿದೆ. ಎಂಯು-ಎಕ್ಸ್ ನಲ್ಲಿ ಇಡೀ ದೇಶದಲ್ಲಿ ಪ್ರಯಾಣಿಸುವ ಅವಕಾಶ ಸಿಕ್ಕಿದೆ. ಈ ಎಸ್‍ಯುವಿ ಸಾಕಷ್ಟು ಬದಲಾವಣೆಗಳನ್ನು ತರುವ ವಿಶ್ವಾಸ ನನಗಿದೆ. ಈ ಹೊಸ ಎಂಯು-ಎಕ್ಸ್ ಇಸುಜುವಿಗೆ ಯಶಸ್ಸು ತಂದುಕೊಡಲಿ ಎಂದು ಹಾರೈಸುತ್ತೇನೆ’’ ಎಂದರು.

ಈ ಹೊಸ ಇಸುಜು ಎಂಯು-ಎಕ್ಸ್ ಎರಡು ಶ್ರೇಣಿಗಳಲ್ಲಿ ಲಭ್ಯವಿದ್ದು, 4x2 ಶ್ರೇಣಿಯ ವಾಹನದ ಬೆಲೆ ರೂ 26,26,842 ಮತ್ತು 4x4 ಶ್ರೇಣಿಯ ವಾಹನದ ಬೆಲೆ ರೂ 28,22,959/- ರೂಪಾಯಿಗಳು. (ಇವು ಹೈದ್ರಾಬಾದ್‍ನ ಎಕ್ಸ್-ಶೋರೂಂ ದರಗಳು).

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !