ಮರಾಜೊಗೆ ಸಿಕ್ಕಿದೆ 8 ಸೀಟು!

7

ಮರಾಜೊಗೆ ಸಿಕ್ಕಿದೆ 8 ಸೀಟು!

Published:
Updated:
Prajavani

ದೇಶದಲ್ಲಿ ಈಗ ಎಸ್‌ಯುವಿಗಳ ಸಂಖ್ಯೆ ಕಡಿಮೆಯೇನಿಲ್ಲ. ಅದರಲ್ಲೂ ಮಲ್ಟಿ ಯುಟಿಲಿಟಿ ವಾಹನಗಳ ಸಾಲಿಗೆ ಸೇರುವ, ಈಗಲೂ ಪ್ರಶ್ನಾತೀತ ವಾಹನವಾಗಿರುವ ಟೊಯೊಟ ಇನ್ನೋವಾಗೆ ಸ್ಪರ್ಧಿಯಾಗಿ ಬಂದ ಮಹಿಂದ್ರಾ ಮರಾಜೊ ಈಗ ಮೇಲ್ದರ್ಜೆಗೆ ಏರಿದೆ.

7 ಸೀಟುಗಳಿಗೆ ಸೀಮಿತವಾಗಿದ್ದ ಐಷಾರಾಮಿ ಎಂಯುವಿ ಮರಾಜೊ ಮಾರುಕಟ್ಟೆಯಲ್ಲಿ ನಿರೀಕ್ಷೆ ಮೀರಿ ಯಶಸ್ಸು ಪಡೆದಿದೆ. ಕೇವಲ ₹ 8 ಸಾವಿರ ಹೆಚ್ಚುವರಿ ನೀಡಿದರೆ 8 ಸೀಟರ್‌ ಅವತರಣಿಯನ್ನು ಗ್ರಾಹಕ ಪಡೆಯುವುದು ಇದರಿಂದ ಸಾಧ್ಯವಾಗುತ್ತಿದೆ. 7 ಸೀಟರ್‌ ಮರಾಜೊ ಬೆಲೆ ₹ 13.9 ಲಕ್ಷ ಇದೆ. ₹ 14.7 ಲಕ್ಷ ನೀಡಿದಲ್ಲಿ ಈ ಹೊಸ ಸೌಲಭ್ಯವುಳ್ಳ ಕಾರು ಪಡೆಯಬಹುದಾಗಿದೆ.

ಎಂದಿನಂತೆ ಐಷಾರಾಮ

ಮೊರಾಜೊ ಐಷಾರಾಮಿ ಸೌಲಭ್ಯಗಳಿಗೆ ಹೆಸರುವಾಸಿಯಾಗಿದೆ. 7 ಇಂಚಿನ ಟಚ್‌ ಸ್ಕ್ರೀನ್‌ ಪರದೆ, ರಿವರ್ಸ್ ಪಾರ್ಕಿಂಗ್‌ ಕ್ಯಾಮೆರಾ, 17 ಇಂಚಿನ ಅಲಾಯ್‌ ಚಕ್ರಗಳು ಇರಲಿವೆ. ಈ ಕಾರನ್ನು ಮಹಿಂದ್ರಾ ಉತ್ತರ ಅಮೆರಿಕದ ತಾಂತ್ರಿಕ ಕೇಂದ್ರ ಹಾಗೂ ಚೆನ್ನೈನಲ್ಲಿರುವ ಮಹಿಂದ್ರಾ ಸಂಶೋಧನಾ ಸಂಸ್ಥೆಯಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಮಹಿಂದ್ರಾ ಡಿಸೈನ್‌ ಸ್ಟುಡಿಯೊ ಹಾಗೂ ಇಟಾಲಿಯನ್ ಡಿಸೈನ್‌ ಹೌಸಿನಲ್ಲಿ ವಿನ್ಯಾಸಗೊಳಿಸಿರುವುದು ವಿಶೇಷವಾಗಿದೆ ಎಂದು ಮಹಿಂದ್ರಾ ಅಂಡ್‌ ಮಹಿಂದ್ರಾ ಮಾರುಕಟ್ಟೆ ಹಾಗೂ ಮಾರಾಟ ವಿಭಾಗದ ಮುಖ್ಯಸ್ಥ ವಿಜಯ್ ನಕ್ರ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !