ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುತಿ ಸುಜುಕಿ: ಸೆಪ್ಟೆಂಬರ್‌ನಲ್ಲಿ ಶೇ 17.48ರಷ್ಟು ತಯಾರಿಕೆ ಕಡಿತ

Last Updated 8 ಅಕ್ಟೋಬರ್ 2019, 10:42 IST
ಅಕ್ಷರ ಗಾತ್ರ

ನವದೆಹಲಿ: ವಾಹನ ಮಾರಾಟ ಕುಸಿತದ ಬಿಕ್ಕಟ್ಟು ಎದುರಿಸುತ್ತಿರುವ ಮಾರುತಿ ಸುಜುಕಿ ಇಂಡಿಯಾ ಕಂಪನಿ ಸತತ 8ನೇ ತಿಂಗಳಿನಲ್ಲಿಯೂ ತಯಾರಿಕೆಯಲ್ಲಿ ಇಳಿಕೆ ಮಾಡಿದೆ. ಸೆಪ್ಟೆಂಬರ್‌ನಲ್ಲಿ ಶೇ 17.48ರಷ್ಟು ತಯಾರಿಕೆಯನ್ನು ತಗ್ಗಿಸಿರುವುದಾಗಿ ತಿಳಿಸಿದೆ.

ಕಂಪನಿಯುಸೆಪ್ಟೆಂಬರ್‌ನಲ್ಲಿ 1,32,199 ವಾಹನಗಳನ್ನು ತಯಾರಿಸಿದೆ. 2018ರ ಸೆಪ್ಟೆಂಬರ್‌ನಲ್ಲಿ 1,60,219 ವಾಹನಗಳನ್ನು ತಯಾರಿಸಿತ್ತು. 2019ರ ಆಗಸ್ಟ್‌ನಲ್ಲಿ ಶೇ 33.99ರಷ್ಟು ತಯಾರಿಕೆ ತಗ್ಗಿಸಲಾಗಿತ್ತು.

ಟಾಟಾ ಮೋಟರ್ಸ್‌ ಕಂಪನಿಯು ಸೆಪ್ಟೆಂಬರ್‌ನಲ್ಲಿ ತಯಾರಿಕೆ 18,855 ರಿಂದ 6,976ಕ್ಕೆ ಶೇ 63ರಷ್ಟು ಕಡಿಮೆ ಮಾಡಿದೆ. ವಾಹನ ಉದ್ಯಮವು ಚೇತರಿಸಿಕೊಳ್ಳುವ ಲಕ್ಷಣಗಳೇ ಕಾಣುತ್ತಿಲ್ಲ.ಪ್ರಮುಖ ಕಂಪನಿಗಳ ಸೆಪ್ಟೆಂಬರ್‌ ತಿಂಗಳ ದೇಶಿ ಪ್ರಯಾಣಿಕ ವಾಹನ ಮಾರಾಟವು ಎರಡಂಕಿ ಇಳಿಕೆ ಕಂಡಿದೆ.

ನ್ಯಾನೊ ಕೇಳೋರೆ ಇಲ್ಲ:ಟಾಟಾ ಮೋಟರ್ಸ್ ಕಂಪನಿಯ ನ್ಯಾನೊ ಕಾರನ್ನು ಕೇಳುವವರೇ ಇಲ್ಲದಂತಾಗಿದೆ. 2019ರಲ್ಲಿ ಇದುವರೆಗೆ ಕೇವಲ ಒಂದೇ ಒಂದು ಕಾರು ಮಾರಾಟವಾಗಿದೆ.2019ರ ಜನವರಿಯಿಂದ–ಸೆಪ್ಟೆಂಬರ್‌ ಅವಧಿಯಲ್ಲಿ ಒಂದೇ ಒಂದು ಕಾರನ್ನೂ ತಯಾರಿಸಿಲ್ಲ.ಹೀಗಿದ್ದರೂ ಕಂಪನಿ ಅಧಿಕೃತವಾಗಿ ತಯಾರಿಕೆ ಸ್ಥಗಿತಗೊಳಿಸುವ ಘೋಷಣೆ ಮಾಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT