ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುತಿ ಸುಜುಕಿಯಿಂದ ‘ಸರ್ವಿಸ್ ಆನ್ ವ್ಹೀಲ್ಸ್‌’ ಸೇವೆ ಆರಂಭ

Last Updated 2 ಸೆಪ್ಟೆಂಬರ್ 2019, 3:14 IST
ಅಕ್ಷರ ಗಾತ್ರ

ಮಾರುತಿ ಸುಜುಕಿ ಕಂಪನಿಯು ನೂತನವಾಗಿ ‘ಸರ್ವಿಸ್ ಆನ್ ವ್ಹೀಲ್ಸ್‌’ ಎಂಬ ಸೇವೆಗೆ ಚಾಲನೆ ನೀಡಿದೆ. ಗ್ರಾಹಕರ ಮನೆ ಬಾಗಿಲಿಗೇ ಸರ್ವಿಸ್ ವಾಹನವನ್ನು ತಂದು, ಗ್ರಾಹಕರ ಕಾರನ್ನು ಸರ್ವಿಸ್ ಮಾಡಿಕೊಡುವ ಸೇವೆ ಇದಾಗಿದೆ.

ಮಾರುತಿ ಸುಜುಕಿಯ ಸೂಪರ್ ಕ್ಯಾರಿ ಮಿನಿಟ್ರಕ್‌ ಅನ್ನು ಸಂಚಾರಿ ಸರ್ವಿಸ್ ಸ್ಟೇಷನ್ ಆಗಿ ಮಾರ್ಪಾಡು ಮಾಡಲಾಗಿದೆ. ಬಹುತೇಕ ಎಲ್ಲಾ ಸರ್ವಿಸ್ ಸೆಂಟರ್‌ಗಳಲ್ಲೂ ಈ‘ಸರ್ವಿಸ್ ಆನ್ ವ್ಹೀಲ್ಸ್‌’ ಇರಲಿದೆ. ಪ್ರೀಮಿಯಂ ವಿಭಾಗ ನೆಕ್ಸಾದಲ್ಲೂ‘ಸರ್ವಿಸ್ ಆನ್ ವ್ಹೀಲ್ಸ್‌’ ಲಭ್ಯವಿದೆ.

‘ಸರ್ವಿಸ್ ಆನ್ ವ್ಹೀಲ್ಸ್‌’ ಮಿನಿಟ್ರಕ್‌ನಲ್ಲಿ ಹೈಡ್ರಾಲಿಕ್ ರ‍್ಯಾಂಪ್‌ ಇರಲಿದೆ. ಹೀಗಾಗಿ ಸರ್ವಿಸ್ ಮಾಡುವ ವೇಳೆ ಕಾರನ್ನು ಸುಲಭವಾಗಿ ಲಿಫ್ಟ್‌ ಮಾಡಬಹುದಾಗಿದೆ. ಇದರಿಂದ ಸರ್ವಿಸ್ ಪ್ರಕ್ರಿಯೆ ಸುಲಭವಾಗಲಿದೆ.

ಆಯಿಲ್, ಏರ್‌ಫಿಲ್ಟರ್‌, ಫ್ಯುಯೆಲ್ ಫಿಲ್ಟರ್‌, ಆಯಿಲ್‌ ಫಿಲ್ಟರ್‌, ಬ್ರೇಕ್‌ ಸಂಯೋಜನೆ ಸೇರಿದಂತೆ ಅಧಿಕೃತ ಸರ್ವಿಸ್ ಸೆಂಟರ್‌ಗಳಲ್ಲಿ ಮಾಡಲಾಗುವ ಎಲ್ಲಾ ಕೆಲಸಗಳನ್ನೂ‘ಸರ್ವಿಸ್ ಆನ್ ವ್ಹೀಲ್ಸ್‌’ನಲ್ಲಿ ಮಾಡಿಸಬಹುದಾಗಿದೆ.ಇದರ ಜತೆಯಲ್ಲೇ ಸಣ್ಣ–ಪುಟ್ಟ ರಿಪೇರಿ ಕೆಲಸಗಳು, ಬಿಡಿಭಾಗಗಳ ಬದಲಾವಣೆಯೂ‘ಸರ್ವಿಸ್ ಆನ್ ವ್ಹೀಲ್ಸ್‌’ನಲ್ಲಿ ಲಭ್ಯವಿದೆ.

ಮಾರುತಿ ಸುಜುಕಿಯ ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿ ಎಂಜಿನ್‌ನ ಎಲ್ಲಾ ವಾಹನಗಳಿಗೂ‘ಸರ್ವಿಸ್ ಆನ್ ವ್ಹೀಲ್ಸ್‌’ ಸೇವೆ ಲಭ್ಯವಿದೆ. ಹಳೆಯ ಕಾರುಗಳು ಮತ್ತು ಇನ್ನೂ ಉಚಿತ ಸರ್ವಿಸ್ ಸವಲತ್ತು ಹೊಂದಿರುವ ಹೊಸ ಕಾರುಗಳಿಗೂ‘ಸರ್ವಿಸ್ ಆನ್ ವ್ಹೀಲ್ಸ್‌’ ಸೇವೆ ಒದಗಿಸಲಾಗುತ್ತದೆ ಎಂದು ಕಂಪನಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT