ನವದೆಹಲಿ: ಮಾರ್ಚ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಮಾರುತಿ ಸುಜುಕಿ ಇಂಡಿಯಾ ಕಂಪನಿಯ ನಿವ್ವಳ ಲಾಭವು ಶೇ 6.45ರಷ್ಟು ಕಡಿಮೆ ಆಗಿದೆ. ಈ ಅವಧಿಯಲ್ಲಿ ಕಂಪನಿಯು ₹3,659 ಕೋಟಿ ಲಾಭ ಗಳಿಸಿದೆ.

ಮಾರ್ಚ್ ತ್ರೈಮಾಸಿಕದಲ್ಲಿ ಕಂಪನಿಯ ವಾಹನ ಮಾರಾಟವು ದಾಖಲೆಯ ಮಟ್ಟ ತಲುಪಿದೆ. ಆದರೆ, ಕಂಪನಿಯು ತ್ರೈಮಾಸಿಕದ ಹಣಕಾಸಿನ ಲೆಕ್ಕಾಚಾರ ಸಿದ್ಧಪಡಿಸುವಾಗ, ಹೊಣೆಗಾರಿಕೆ ಹಾಗೂ ಆಸ್ತಿಗಳ ಮೌಲ್ಯವನ್ನು ಈಗಿನ ಮಾರುಕಟ್ಟೆ ದರಕ್ಕೆ ಅನ್ವಯ ಮಾಡಿರುವ ಕಾರಣದಿಂದಾಗಿಯೂ ಲಾಭದ ಪ್ರಮಾಣ ಕಡಿಮೆ ಆಗಿದೆ.

ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿಯು ₹3,911 ಕೋಟಿ ಲಾಭ ಗಳಿಸಿತ್ತು. ಕಾರ್ಯಾಚರಣೆ ಹೊರತಾದ ವರಮಾನವು ಕಡಿಮೆ ಆಗಿದೆ ಎಂದು ಕಂಪನಿ ಮಾಹಿತಿ ನೀಡಿದೆ.

ಮಾರ್ಚ್ ತ್ರೈಮಾಸಿಕದಲ್ಲಿ ಕಂಪನಿಯು ಒಟ್ಟು 6.76 ಲಕ್ಷ ವಾಹನಗಳನ್ನು ಮಾರಾಟ ಮಾಡಿದೆ. ಇದು ತ್ರೈಮಾಸಿಕವೊಂದರ ಅವಧಿಯಲ್ಲಿ ಆಗಿರುವ ಅತಿಹೆಚ್ಚಿನ ಮಾರಾಟ. ಕಳೆದ ವರ್ಷದ ಮಾರ್ಚ್ ತ್ರೈಮಾಸಿಕಕ್ಕೆ ಹೋಲಿಸಿದರೆ ಮಾರಾಟವು ಶೇ 11.8ರಷ್ಟು ಜಾಸ್ತಿ ಆಗಿದೆ.

ಕಂಪನಿಯ ಆಡಳಿತ ಮಂಡಳಿಯು ಪ್ರತಿ ಷೇರಿಗೆ ₹140 ಲಾಭಾಂಶ ನೀಡಲು ಶಿಫಾರಸು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.