ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುತಿಯಿಂದ ಇನ್ನಷ್ಟು ಸಿಎನ್‌ಜಿ ವಾಹನಗಳು ಮಾರುಕಟ್ಟೆಗೆ

Last Updated 28 ಅಕ್ಟೋಬರ್ 2021, 13:32 IST
ಅಕ್ಷರ ಗಾತ್ರ

ನವದೆಹಲಿ: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಾಗುತ್ತ ಇರುವುದರಿಂದ ತನ್ನ ಸಿಎನ್‌ಜಿ ಚಾಲಿತ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದೆ ಎಂದು ಹೇಳಿರುವ ಮಾರುತಿ ಸುಜುಕಿ ಕಂಪನಿ, ಇನ್ನೂ ನಾಲ್ಕು ಮಾದರಿಯ ಕಾರುಗಳಲ್ಲಿ ಸಿಎನ್‌ಜಿ ಆಯ್ಕೆಯನ್ನು ಶೀಘ್ರದಲ್ಲಿಯೇ ನೀಡುವುದಾಗಿ ತಿಳಿಸಿದೆ.

ಕಂಪನಿಯು 2025ರ ಸುಮಾರಿಗೆ ದೇಶದ ಮಾರುಕಟ್ಟೆಯಲ್ಲಿ ವಿದ್ಯುತ್ ಚಾಲಿತ ವಾಹನವೊಂದನ್ನು ಬಿಡುಗಡೆ ಮಾಡುವ ಆಲೋಚನೆಯನ್ನು ಕೂಡ ಹೊಂದಿದೆ. ‘ಈಗ ನಮ್ಮ ಎಂಟು ಮಾದರಿ ಕಾರುಗಳಲ್ಲಿ ಸಿಎನ್‌ಜಿ ಆಯ್ಕೆ ಲಭ್ಯವಿದೆ. ಇನ್ನೂ ನಾಲ್ಕು ಮಾದರಿಗಳಲ್ಲಿ ಸಿಎನ್‌ಜಿ ಆಯ್ಕೆಯನ್ನು ಶೀಘ್ರವೇ ನೀಡಬೇಕು ಎಂದು ಆಲೋಚನೆ ಇದೆ’ ಎಂದು ಕಂಪನಿಯ ಮಾರುಕಟ್ಟೆ ಮತ್ತು ಮಾರಾಟ ವಿಭಾಗದ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರೀವಾಸ್ತವ ಹೇಳಿದ್ದಾರೆ.

ಕಂಪನಿಯ ಕೈಯಲ್ಲಿ ಒಟ್ಟು 2.8 ಲಕ್ಷ ವಾಹನಗಳಿಗೆ ಬುಕಿಂಗ್ ಬಾಕಿ ಇದೆ. ಈ ಪೈಕಿ ಸಿಎನ್‌ಜಿ ಹೊಂದಿರುವ 1.1 ಲಕ್ಷ ವಾಹನಗಳಿಗೆ ಬುಕಿಂಗ್ ಬಂದಿವೆ. ‘ಪೆಟ್ರೋಲ್ ಅಥವಾ ಡೀಸೆಲ್ ವಾಹನ ಓಡಿಸಲು, ಪ್ರತಿ ಕಿ.ಮೀ.ಗೆ ₹ 5ರಷ್ಟು ಖರ್ಚು ಮಾಡಬೇಕು. ಆದರೆ, ಸಿಎನ್‌ಜಿ ಚಾಲಿತ ವಾಹನಕ್ಕೆ ಮಾಡಬೇಕಿರುವ ಖರ್ಚು ಪ್ರತಿ ಕಿ.ಮೀ.ಗೆ ₹ 1.7 ಮಾತ್ರ. ಗ್ರಾಹಕರು ಸಿಎನ್‌ಜಿ ಆಯ್ಕೆಯ ವಾಹನಗಳತ್ತ ಮುಖ ಮಾಡಲು ಇದು ಮುಖ್ಯ ಕಾರಣ’ ಎಂದು ಅವರು ಹೇಳಿದ್ದಾರೆ.

ಎರಡು ವರ್ಷಗಳ ಹಿಂದೆ ದೇಶದಲ್ಲಿ ಒಟ್ಟು 1,500 ಸಿಎನ್‌ಜಿ ಭರ್ತಿ ಕೇಂದ್ರಗಳು ಇದ್ದವು. ಈಗ ಈ ಸಂಖ್ಯೆಯು 3,400ಕ್ಕೆ ಏರಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT