ಭಾನುವಾರ, ಮೇ 22, 2022
21 °C

ಮಾರುತಿ ಕಾರು ಬೆಲೆ ಏರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಎಲ್ಲ ಮಾದರಿಯ ಕಾರುಗಳ ಬೆಲೆಯನ್ನು ಹೆಚ್ಚಳ ಮಾಡುತ್ತಿರುವುದಾಗಿ ದೇಶದ ಅತಿದೊಡ್ಡ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಬುಧವಾರ ತಿಳಿಸಿದೆ. ತಯಾರಿಕಾ ವೆಚ್ಚ ಜಾಸ್ತಿ ಆಗಿರುವ ಕಾರಣ ಕಾರಿನ ಬೆಲೆ ಹೆಚ್ಚಿಸುತ್ತಿರುವುದಾಗಿ ಅದು ಹೇಳಿದೆ.

ಹೆಚ್ಚುವರಿ ವೆಚ್ಚದ ಹೊರೆಯಲ್ಲಿ ಒಂದಿಷ್ಟನ್ನು ಗ್ರಾಹಕರ ಹೆಗಲಿಗೆ ವರ್ಗಾಯಿಸುವುದು ಅನಿವಾರ್ಯ ಆಗಿದೆ ಎಂದು ಕಂಪನಿ ಹೇಳಿದೆ. ಈ ತಿಂಗಳಲ್ಲಿಯೇ ಕಾರುಗಳ ಬೆಲೆ ಹೆಚ್ಚಾಗಲಿದ್ದು, ಮಾದರಿಯಿಂದ ಮಾದರಿಗೆ ಬೆಲೆ ಹೆಚ್ಚಳದಲ್ಲಿ ವ್ಯತ್ಯಾಸ ಇರಲಿದೆ.

2021ರ ಜನವರಿಯಿಂದ 2022ರ ಮಾರ್ಚ್‌ವರೆಗಿನ ಅವಧಿಯಲ್ಲಿ ಕಂಪನಿಯು ಕಾರುಗಳ ಬೆಲೆಯನ್ನು ಶೇಕಡ 8.8ರಷ್ಟು ಹೆಚ್ಚಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು