ಸೋಮವಾರ, ಆಗಸ್ಟ್ 8, 2022
21 °C

ಒಕಿನಾವಾ ಇ–ಸ್ಕೂಟರ್‌ ಬೆಲೆ ಗರಿಷ್ಠ ₹ 17,892ರವರೆಗೂ ಇಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ತಯಾರಿಸುವ ಒಕಿನಾವಾ ಕಂಪನಿಯು ತನ್ನೆಲ್ಲಾ ಸ್ಕೂಟರ್‌ಗಳ ಮೇಲಿನ ಬೆಲೆಯನ್ನು ₹ 7,209 ರಿಂದ ₹ 17,892ರವರೆಗೆ ಇಳಿಕೆ ಮಾಡಿದೆ.

ಕೇಂದ್ರ ಸರ್ಕಾರವು ಫೇಮ್‌–2 ನಿಯಮದ ಅಡಿಯಲ್ಲಿ ವಿದ್ಯುತ್‌ ಚಾಲಿತ ದ್ವಿಚಕ್ರವಾಹನಗಳ ಮೇಲಿನ ಸಬ್ಸಿಡಿ ಹೆಚ್ಚಳ ಮಾಡಿದೆ. ಇದಕ್ಕೆ ಅನುಗುಣವಾಗಿ ಬೆಲೆಯನ್ನು ತಗ್ಗಿಸಿರುವುದಾಗಿ ಕಂಪನಿ ತಿಳಿಸಿದೆ.

ಪ್ರೇಸ್‌ ಪ್ಲಸ್‌ ಎಲೆಕ್ಟ್ರಿಕ್‌ ಸ್ಕೂಟರ್ ಬೆಲೆಯು ₹1,17,600 ಇದ್ದಿದ್ದು, ₹ 99,708ಕ್ಕೆ ಇಳಿಕೆ ಆಗಿದೆ. ಪ್ರೇಸ್‌ ಪ್ರೊ ಬೆಲೆ ₹ 84,795 ರಿಂದ ₹ 76,848ಕ್ಕೆ ಇಳಿಕೆ ಕಂಡಿದೆ. ರಿಡ್ಜ್‌ ಪ್ಲಸ್‌ ಮಾದರಿಯ ಬೆಲೆ ₹ 69 ಸಾವಿರದಿಂದ ₹ 61,791ಕ್ಕೆ ಇಳಿಕೆ ಆಗಿದೆ ಎಂದು ಮಾಹಿತಿ ನೀಡಿದೆ.

ರಾಜಸ್ಥಾನದಲ್ಲಿ ಹೊಸ ತಯಾರಿಕಾ ಘಟಕ ಸ್ಥಾಪನೆಗಾಗಿ ₹ 150 ಕೋಟಿ ಹೂಡಿಕೆ ಮಾಡುವ ಸಿದ್ಧತೆ ನಡೆದಿದೆ ಎಂದು ಕಂಪನಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು