ಹೈದರಾಬಾದ್: ಕಾಲೇಜು ವಿದ್ಯಾರ್ಥಿನಿಯರಿಗೆ ಎಲೆಕ್ಟ್ರಿಕ್ ಸ್ಕೂಟರ್ ಕೊಡುವ ಬಗ್ಗೆ ನಮ್ಮ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ತಿಳಿಸಿದ್ದಾರೆ.

ನಿನ್ನೆ ಹೈದರಾಬಾದ್ನ ಖಾಸಗಿ ಸಮಾರಂಭದಲ್ಲಿ ಮಾತನಾಡಿದ ಅವರು, ಎಲೆಕ್ಟ್ರಿಕ್ ಸ್ಕೂಟರ್ ನೀಡುವ ಉದ್ದೇಶ ಮಹಿಳಾ ಸಬಲೀಕರಣ ಒಂದೇ ಅಲ್ಲ, ಪರಿಸರ ಮಾಲಿನ್ಯ ತಗ್ಗಿಸುವುದೂ ಆಗಿದೆ ಎಂದು ಹೇಳಿದರು.

ಕಾಲೇಜು ವಿದ್ಯಾರ್ಥಿನಿಯರಿಗೆ ಎಲೆಕ್ಟ್ರಿಕ್ ಸ್ಕೂಟರ್ ನೀಡುವ ಬಗ್ಗೆ ನಮ್ಮ ಪಕ್ಷ ಮೊದಲೇ ಪ್ರಣಾಳಿಕೆಯಲ್ಲಿ ಸೂಚ್ಯವಾಗಿಸಿತ್ತು. ಆದರೆ, ಸಾಧಕ ಬಾಧಕಗಳ ಬಗ್ಗೆ ಅರಿತು ತಡೆಹಿಡಿಯಲಾಗಿತ್ತು. ಆದರೆ, ಕೊಡುವ ಬಗ್ಗೆ ಈಗ ಗಂಭೀರ ಚಿಂತನೆ ನಡೆದಿದೆ ಎಂದು ಹೇಳಿದರು.

ಈ ವರ್ಷ ಆಗದಿದ್ದರೂ ಮುಂದಿನ ವರ್ಷ ಖಂಡಿತವಾಗಿಯೂ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು ಎಂದು ಹೇಳಿದರು.

ನಾವು ಹೈದರಾಬಾದ್ ನಗರವನ್ನು ಮಾಲಿನ್ಯ ಮುಕ್ತ ನಗರಿಯನ್ನಾಗಿ ಮಾಡಲಿದ್ದೇವೆ. ಅಷ್ಟೇ ಏಕೆ ನಮ್ಮ ಪ್ರತಿಸ್ಪರ್ಧಿ ಬೆಂಗಳೂರು, ಮುಂಬೈ ಅಲ್ಲ, ಸಿಂಗಪುರ, ಟೋಕಿಯೋ ಎಂದೂ ಹೇಳಿದರು.

ಹೈದರಾಬಾದ್ನಲ್ಲಿರುವ ಡಿಸೇಲ್ ಇತರ ಇಂಧನ ಆಧರಿತ 2 ಲಕ್ಷ ಆಟೊಗಳನ್ನು ಇವಿ ಆಟೊಗಳನ್ನಾಗಿ ಮಾಡುತ್ತೇವೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.