ಸೋಮವಾರ, ಅಕ್ಟೋಬರ್ 14, 2019
22 °C

ಟಾಟಾ ಕಾರುಗಳ ಮೇಲೆ ₹ 1.50 ಲಕ್ಷದವರೆಗೂ ಭಾರೀ ರಿಯಾಯಿತಿ 

Published:
Updated:

ನವದೆಹಲಿ:  ಆರ್ಥಿಕ ಹಿಂಜರಿತದ ಪರಿಣಾಮ ಆಟೊಮೊಬೈಲ್ ಕ್ಷೇತ್ರ ತೀವ್ರ ಸಂಕಷ್ಟ ಎದುರಿಸುತ್ತಿದ್ದು ಕಾರು ತಯಾರಿಕ ಕಂಪೆನಿಗಳು ವಾಹನಗಳ ಮಾರಾಟಕ್ಕಾಗಿ ಗ್ರಾಹಕರನ್ನು ಸೆಳೆಯುವ ಸಲುವಾಗಿ ಕಾರುಗಳ ಬೆಲೆಯಲ್ಲಿ ರಿಯಾಯಿತಿ ಪ್ರಕಟಿಸಿವೆ. ಇದೀಗ ಟಾಟಾ ಮೋಟಾರ್ಸ್ ದಸರಾ ಮತ್ತು ದೀಪಾವಳಿ ಹಬ್ಬಗಳನ್ನು ಗಮನದಲ್ಲಿಸಿಕೊಂಡು ಭಾರೀ ರಿಯಾಯಿತಿ ಘೋಷಣೆ ಮಾಡಿದೆ. 

ಟಾಟಾ ಹೆಕ್ಸಾ, ಟಿಯಾಗೊ, ಟಿಯಾಗೊ ಎನ್‌ಆರ್‌ಜಿ, ಟೈಗೊರ್, ನೆಕ್ಸಾನ್, ಹ್ಯಾರಿಯರ್ ಕಾರುಗಳ ಮೇಲೆ ಭಾರೀ ಪ್ರಮಾಣದ ರಿಯಾಯಿತಿಯನ್ನು ಟಾಟಾ ಮೋಟಾರ್ಸ್ ಪ್ರಕಟಿಸಿದೆ. 

ಇದನ್ನೂ ಓದಿ: ಆರ್ಥಿಕ ಹಿಂಜರಿತ: ವಾಣಿಜ್ಯ ವಾಹನ ಮಾರಾಟ ಭಾರಿ ಕುಸಿತ

ಟಾಟಾ ಹೆಕ್ಸಾ ಕಾರಿನ ಮೇಲೆ ₹ 1.50 ಲಕ್ಷ, ನೆಕ್ಸಾನ್ ಕಾರಿನ ಮೇಲೆ ₹ 85,000, ಸಣ್ಣ ಕಾರು ಟಿಯಾಗೊ ಮತ್ತು ಯಾಗೊ ಎನ್‌ಆರ್‌ಜಿ ಮೇಲೆ ₹ 70,000, ಟೈಗೊರ್ ಕಾರಿನ ಮೇಲೆ ₹ 1.15 ಲಕ್ಷ ಹಾಗೂ ಜನಪ್ರಿಯ ಹ್ಯಾರಿಯರ್ ಕಾರಿನ ಮೇಲೆ  ₹ 50,000 ರಿಯಾಯಿತಿಯನ್ನು ಘೋಷಣೆ ಮಾಡಲಾಗಿದೆ.

ದಸರಾ ಮತ್ತು ದೀಪಾವಳಿ ಹಬ್ಬಗಳಿಗಾಗಿ ಈ ರಿಯಾಯಿತಿ ಉಡುಗೊರೆ ನೀಡಲಾಗುತ್ತಿದೆ ಎಂದು ಟಾಟಾ ಮೋಟರ್ಸ್‌ನ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಎಸ್‌.ಎನ್‌.ಬರ್ಮನ್‌ ಹೇಳಿದ್ದಾರೆ. 

ಇದನ್ನೂ ಓದಿ: ಈಗ ರಿಯಾಯಿತಿ ದರದಲ್ಲಿ ಸಿಗುತ್ತೆ ಕಾರು: ಯಾವ್ಯಾವುದಕ್ಕೆ ಎಷ್ಟೆಷ್ಟು ಡಿಸ್ಕೌಂಟ್?

ಈ ಹಿಂದೆ ಓಣಂ ಹಾಗೂ ಗಣೇಶ ಚತುರ್ಥಿಗೆ ರಿಯಾಯಿತಿಯನ್ನು ನೀಡಲಾಗಿತ್ತು. ಇದಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ದಸರಾ, ದೀಪಾವಳಿಗೆ ಹೆಚ್ಚಿನ ಪ್ರಮಾಣದಲ್ಲಿ ರಿಯಾಯಿತಿಯನ್ನು ಪ್ರಕಟಿಸಲಾಗಿದ್ದು ಗ್ರಾಹಕರು ಸ್ಪಂದಿಸುವ ನಿರೀಕ್ಷೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಕಂಪನಿಯು ಕೆಲವು ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್‌ಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದು ಬ್ಯಾಂಕ್‌ಗಳಿಂದ ಶೇ 100 ರಷ್ಟು ಸಾಲ ಸೌಲಭ್ಯ ದೊರಕಿಸಿಕೊಡುವ ಯೋಜನೆಗೂ ಚಾಲನೆ ನೀಡಲಾಗಿದೆ ಎಂದು ಎಸ್‌.ಎನ್‌.ಬರ್ಮನ್‌ ಮಾಹಿತಿ ನೀಡಿದರು. 

ಇದನ್ನೂ ಓದಿ: ಆರ್ಥಿಕ ಕುಸಿತ: ಅರ್ಧಕ್ಕಿಳಿದ ವಾಹನ ಮಾರಾಟ

Post Comments (+)