ಭಾನುವಾರ, 3 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಚಾಲಿತ ವಾಹನಗಳ ವಿಭಾಗದಲ್ಲಿ ಟಾಟಾ ಮೋಟರ್ಸ್‌ ₹ 15 ಸಾವಿರ ಕೋಟಿ ಹೂಡಿಕೆ

Last Updated 15 ಮಾರ್ಚ್ 2022, 11:23 IST
ಅಕ್ಷರ ಗಾತ್ರ

ಔರಂಗಾಬಾದ್: ವಿದ್ಯುತ್ ಚಾಲಿತ ವಾಹನಗಳ (ಇ.ವಿ.) ವಿಭಾಗದಲ್ಲಿ ಮುಂದಿನ ಐದು ವರ್ಷಗಳಲ್ಲಿ ₹ 15 ಸಾವಿರ ಕೋಟಿ ಹೂಡಿಕೆ ಮಾಡುವ ಆಲೋಚನೆ ಟಾಟಾ ಮೋಟರ್ಸ್‌ಗೆ ಇದೆ ಎಂದು ಕಂಪನಿಯ ಪ್ರಯಾಣಿಕ ವಾಹನ ವಿಭಾಗದ ಅಧ್ಯಕ್ಷ ಶೈಲೇಶ್ ಚಂದ್ರ ಹೇಳಿದ್ದಾರೆ.

ಇ.ವಿ. ವಿಭಾಗದಲ್ಲಿ ಕಂಪನಿಯು ಹೊಸದಾಗಿ 10 ಮಾದರಿಗಳನ್ನು ಅಭಿವೃದ್ಧಿಪಡಿಸುವ ಇರಾದೆ ಹೊಂದಿದೆ ಎಂದೂ ಅವರು ಹೇಳಿದ್ದಾರೆ. ‘ಬೇರೆ ಬೇರೆ ವಿನ್ಯಾಸ, ಬೆಲೆ, ಕ್ರಮಿಸುವ ಸಾಮರ್ಥ್ಯದ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲಾಗುವುದು’ ಎಂದು ಅವರು ತಿಳಿಸಿದ್ದಾರೆ.

‘ಚಾರ್ಜಿಂಗ್ ಮೂಲಸೌಕರ್ಯಗಳ ಜೊತೆಯಲ್ಲೇ ಇ.ವಿ.ಗೆ ಅಗತ್ಯವಿರುವ ಹಲವು ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಕೆಲಸಕ್ಕೆ ವೇಗ ನೀಡಬೇಕಿದೆ. ಈ ಕೆಲಸ ಮಾಡುವ ಬದ್ಧತೆ ಕಂಪನಿಗೆ ಇದೆ. ನಾವು ಇ.ವಿ.ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದಾಗ, ತಮ್ಮ ಮೊದಲ ಕಾರು ಇ.ವಿ. ಆಗಿರಲಿ ಎಂದು ಬಯಸುವ ಗ್ರಾಹಕರ ಪ್ರಮಾಣವು ಶೇಕಡ 20ರಿಂದ ಶೇ 25ರಷ್ಟು ಮಾತ್ರ ಇತ್ತು. ಈಗ ಅದು ಶೇ 65ಕ್ಕೆ ಏರಿಕೆ ಆಗಿದೆ’ ಎಂದು ಹೇಳಿದ್ದಾರೆ.

ಟಾಟಾ ಮೋಟರ್ಸ್ ಕಂಪನಿಯು ಇದುವರೆಗೆ 22 ಸಾವಿರ ಇ.ವಿ.ಗಳನ್ನು ಮಾರಾಟ ಮಾಡಿದೆ. ಇದು 1.5 ಲಕ್ಷ ಸಸಿಗಳನ್ನು ನೆಡುವುದಕ್ಕೆ ಸಮ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT