ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಟಾ: ಸಾಲ ತಗ್ಗಿಸುವ ಗುರಿ

Last Updated 26 ಆಗಸ್ಟ್ 2020, 4:58 IST
ಅಕ್ಷರ ಗಾತ್ರ

ನವದೆಹಲಿ: ಟಾಟಾ ಮೋಟರ್ಸ್ ಲಿಮಿಟೆಡ್ (ಟಿಎಂಎಲ್) ಕಂಪನಿಯು ತನ್ನ ಒಟ್ಟು ಸಾಲವನ್ನು ಮೂರು ವರ್ಷಗಳಲ್ಲಿ ಶೂನ್ಯದ ಸಮೀಪಕ್ಕೆ ತರುವ ಗುರಿ ಹೊಂದಿದೆ ಎಂದು ಕಂಪನಿಯ ಅಧ್ಯಕ್ಷ ಎನ್. ಚಂದ್ರಶೇಖರನ್ ಹೇಳಿದ್ದಾರೆ.

ಕಂಪನಿಯ 75ನೆಯ ಸಾಮಾನ್ಯ ಸಭೆಯಲ್ಲಿ ಷೇರುದಾರರನ್ನು ಉದ್ದೇಶಿಸಿ ಮಾತನಾಡಿದ ಚಂದ್ರಶೇಖರನ್, ‘ಟಾಟಾ ಮೋಟರ್ಸ್‌ ಸಮೂಹದ ಒಟ್ಟು ಸಾಲ ₹ 48 ಸಾವಿರ ಕೋಟಿ. ಇದನ್ನು ತಗ್ಗಿಸಲು ನಾವು ಕೆಲಸ ಮಾಡುತ್ತಿದ್ದೇವೆ. ಮುಂದಿನ ಮೂರು ವರ್ಷಗಳಲ್ಲಿ ಇದನ್ನು ಗಣನೀಯವಾಗಿ ತಗ್ಗಿಸಲಿದ್ದೇವೆ’ ಎಂದರು.

ಪ್ರಯಾಣಿಕ ವಾಹನಗಳ ಮಾರುಕಟ್ಟೆಯಲ್ಲಿ ಕಂಪನಿಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ ಎಂದು ಚಂದ್ರಶೇಖರನ್ ತಿಳಿಸಿದರು. ಹ್ಯಾರಿಯರ್, ನೆಕ್ಸಾನ್, ಆಲ್ಟ್ರೋಜ್ ಕಾರುಗಳಿಗೆ ಗ್ರಾಹಕರಿಂದ ಉತ್ತಮ ಸ್ಪಂದನ ಸಿಕ್ಕಿದೆ ಎಂದರು.

‘ಕಳೆದ 12 ತಿಂಗಳುಗಳಿಂದ ವಿಶ್ವದ ವಾಹನ ಉದ್ಯಮವು ಒಂದಲ್ಲ ಒಂದು ಸಮಸ್ಯೆಯನ್ನು ಎದುರಿಸುತ್ತ ಬಂದಿದೆ. ವಾಣಿಜ್ಯ ಬಿಕ್ಕಟ್ಟುಗಳು ಹೆಚ್ಚುತ್ತಿರುವುದು, ಜಾಗತಿಕ ಅರ್ಥವ್ಯವಸ್ಥೆಯ ಬೆಳವಣಿಗೆ ಚೆನ್ನಾಗಿಲ್ಲದಿರುವುದು ನಾವು ಕೆಲಸ ಮಾಡುವ ಪರಿಸರವನ್ನು ಬದಲಿಸಿವೆ’ ಎಂದು ಷೇರುದಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT