ಟೂ ಇನ್ ಒನ್ ಇಂಧನ ಚಾಲಿತ ವಾಹನ

7
ಪಾರ್ಕಿಂಗ್ ಮಾಡೋಕೆ ಸರಳ, ಓಡ್ಸೋಕೆ ಸುಲಭ !

ಟೂ ಇನ್ ಒನ್ ಇಂಧನ ಚಾಲಿತ ವಾಹನ

Published:
Updated:

‘ಬಿಸಿಲಿದ್ದರೆ ಸೋಲಾರ್ ಶಕ್ತಿಯಲ್ಲಿ ಓಡುತ್ತೆ. ಮೋಡ ಕವಿದರೆ ಎಲೆಕ್ಟ್ರಿಕ್ ಚಾರ್ಜ್ ಮಾಡಿರುವ ಬ್ಯಾಟರಿಯಲ್ಲಿ ಓಡಿಸಬಹುದು. ಇದು ತೈಲ ಇಂಧನಕ್ಕೆ ಪರ್ಯಾಯ. ಟೂ ಇನ್ ಒನ್ ಪರ್ಯಾಯ ಇಂಧನ ಚಾಲಿತ ವಾಹನ..’
ನೆಲಮಂಗಲ ಸಮೀಪದ ದೊಡ್ಡಮಸ್ಕಲ್‌ನ ರೈತರ ಮಗ ಎಂಜಿನಿಯರಿಂಗ್ ಪದವೀಧರ ಬೈರೇಗೌಡ, ತನ್ನ ಸ್ನೇಹಿತರೊಂದಿಗೆ ಅಂತಿಮ ವರ್ಷದ ಪದವಿಯ ಪ್ರಾಜೆಕ್ಟ್ ಗಾಗಿ ತಯಾರಿಸಿದ ‘ಟೂ ಇನ್ ಒನ್ ಇಂಧನ ಚಾಲಿತ’ ವಾಹನದ ವಿವರಣೆ ನೀಡಿದ್ದು ಹೀಗೆ.

ದೊಡ್ಡ ದೊಡ್ಡ ಕಂಪನಿಗಳು ಇಂಥ ವಾಹನಗಳ ತಯಾರಿಕೆಗಾಗಿ ಸ್ಪರ್ಧೆಗಿಳಿದಿರುವ ಹೊತ್ತಲ್ಲಿ, ಇವರು ತನ್ನ ಪ್ರಾಜೆಕ್ಟ್್ಗಾಗೇ ಅಂಥ ವಾಹನ ಸಿದ್ಧಪಡಿಸಿದ್ದಾರೆ. ಮೂರು ಚಕ್ರದ ಪರಿಸರ ಸ್ನೇಹಿ ವಾಹನಕ್ಕೆ ಅವರು ಕೊಟ್ಟಿರುವ ಶೀರ್ಷಿಕೆ ‘ಗೋ ಗ್ರೀನ್, ಗ್ಲೋ ಗ್ರೀನ್’ !

ಆಳ್ವಾಸ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ವಿಭಾಗದಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿರುವ ಬೈರೇಗೌಡ ಡಿಪ್ಲೊಮಾ ಓದಿ ಎಂಜಿನಿಯರಿಂಗ್ ಸೇರಿದವರು. ಇವರಿಗೆ ಮೊದಲಿನಿಂದಲೂ ವಾಹನಲೋಕಕ್ಕೆ ಹೊಸತನ್ನು ನೀಡುವ ಹಂಬಲವಿತ್ತು. ರೈತ ಕುಟುಂಬದ ಹಿನ್ನೆಲೆಯಿಂದ ಬಂದವರು ಪರಿಸರ ಸ್ನೇಹಿ ವಾಹನ ರೂಪಿಸುವ ಕನಸು ಅವರದ್ದು. ಅದಕ್ಕಾಗಿಯೇ ಎಂಜಿನಿಯರಿಂಗ್ 5ನೇ ಸೆಮಿಸ್ಟರ್ ನಿಂದಲೇ ವಾಹನ ತಯಾರಿಕೆ ಯೋಜನೆ ರೂಪಿಸಿದರು. ಕಾಲೇಜಿನ ಪ್ರಾಚಾರ್ಯ ಹಾಗೂ ಪ್ರಾಧ್ಯಾಪಕರ ಒಪ್ಪಿಗೆ ಪಡೆದುಕೊಂಡು ಪ್ರಾಜೆಕ್ಟ್ ಆರಂಭಿಸಿದರು. ಸತತ ಒಂದು ವರ್ಷ, ಎರಡು ತಿಂಗಳ ಪ್ರರಿಶ್ರಮದೊಂದಿಗೆ ವಾಹನ ಸಂಪೂರ್ಣವಾಗಿ ಸಿದ್ಧವಾಗಿ, ಚಲಿಸುವಂತಾಯಿತು.

ಪಾರ್ಕಿಂಗ್ ಸರಳ, ಓಡಿಸಲು ಸುಲಭ : ನೋಡೋಕೆ ಆಟೊ ತರಹ ಕಾಣುತ್ತದೆ. ಆದರೆ ಕಾರಿನ ಗುಣಲಕ್ಷಣಗಳನ್ನು ಹೊಂದಿದೆ. ಕಾರಿಗಿಂತ ಚಿಕ್ಕದಾಗಿದೆ. ‘ಒಂದು ಸ್ಪಿಪ್ಟ್ ಕಾರು ನಿಲ್ಲಿಸುವ ಜಾಗದಲ್ಲಿ ನಾಲ್ಕು ‘ಗ್ರೋ ಗ್ರೀನ್’ ವಾಹನಗಳನ್ನು ನಿಲ್ಲಿಸಬಹುದು’ ಎನ್ನುವ ಮೂಲಕ ವಾಹನದ ಗಾತ್ರವನ್ನು ಬೈರೇಗೌಡ ವಿವರಿಸುತ್ತಾರೆ. ಹಾಗೆಯೇ ‘ಪಾರ್ಕಿಂಗ್ ಸಮಸ್ಯೆ’ಗೂ ಈ ವಾಹನದಿಂದ ಪರಿಹಾರ ಕಂಡುಕೊಳ್ಳಬಹುದು ಎನ್ನುವುದು ಅವರ ಅಭಿಪ್ರಾಯ.
ಆಲ್ಯುವಿನಿಯಂ ಆಲಾಯ್ 6063 ಮೆಟಲ್ ಬಳಸಿ ತಯಾರಿಸಿರುವುದರಿಂದ ವಾಹನದ ತೂಕ ಕಡಿಮೆಯಿದೆ. ವಾಹನದ ಒಳಗಡೆ ಸೆಂಟ್ರಲ್ ಲಾಕಿಂಗ್ ಸಿಸ್ಟಮ್, ಜಿಪಿಆರ್ ಎಸ್ ಸೇರಿದಂತೆ ಸಂಪೂರ್ಣ ಕಾರಿನ ವ್ಯವಸ್ಥೆ ಇದೆ. ವಾಹನದಲ್ಲಿ ಮೂವರು ಕುಳಿತುಕೊಳ್ಳಲು ಅವಕಾಶವಿದೆ.

ಈ ವಾಹನವನ್ನು ಕಚ್ಚಾ ರಸ್ತೆಯಲ್ಲಾದರೂ ಓಡಿಸಬಹುದು. ನೈಸ್ ರಸ್ತೆಯಲ್ಲಾದರೂ ಓಡಿಸಬಹುದು. ಮೂರರಿಂದ ನಾಲ್ಕು ಗಂಟೆ ಒಳಗೆ ಇದರ ಬ್ಯಾಟರಿ ಚಾರ್ಜ್ ಆಗುತ್ತದೆ. ‘ಸಿಂಗಲ್ ರೈಡಿಂಗ್ ಗೆ 70 ರಿಂದ 80 ಕಿ.ಮೀ ಮೈಲೇಜ್ ನೀಡುತ್ತದೆ. ಡಬ್ಬಲ್ ರೈಡಿಂಗ್ ಮಾಡಿದರೆ 60 ಕಿ.ಮೀ ನಿಂದ 65 ಕಿ.ಮೀ ಮೈಲೇಜ್ ನೀಡಬಹುದು’ ಎನ್ನುವುದು ಬೈರೇಗೌಡ ಅವರ ಅಭಿಪ್ರಾಯ.

ಸೌರಶಕ್ತಿ ಚಾಲಿತ ವಾಹನಗಳು ಎಲ್ಲಾ ಕಡೆಯೂ ಇದೆ, ಆದರೆ ಸೋಲಾರ್ - ಎಲೆಕ್ಟ್ರಿಕಲ್ ವಾಹನ ಅಪರೂಪ. ಭವಿಷ್ಯದಲ್ಲಿ ಇಂಥ ವಾಹನವೇ ಹೆಚ್ಚು ಬಳಕೆಗೆ ಬರುತ್ತದೆ. ನಾನು ಪ್ರಾಜೆಕ್ಟ್ ಗಾಗಿ ಒಂದೇ ವಾಹನವನ್ನು ತಯಾರಿಸಿದ್ದೆ. ಆಗ ರೂ. 1.60 ಲಕ್ಷ ಹಣ ಖರ್ಚಾಗಿತ್ತು. ದೊಡ್ಡ ಪ್ರಮಾಣದಲ್ಲಿ (ಬಲ್ಕ್) ತಯಾರಿಸಿದರೆ, ಸುಮಾರು ರೂ 90ಸಾವಿರದವರೆಗೂ ಖರ್ಚು ಬರಬಹುದು ಎಂದು ಲೆಕ್ಕಾಚಾರ ಹೇಳುತ್ತಾರೆ ಬೈರೇಗೌಡ.

ಗ್ರೋ ಗ್ರೀನ್ ಗ್ಲೋ ಗ್ರೀನ್ ನ ವಿಶೇಷತೆ

* ಬೇಸಿಗೆ, ಮಳೆಗಾಲ, ಚಳಿಗಾಲ ಹೀಗೆ ಎಲ್ಲ ಕಾಲದಲ್ಲೂ ಓಡಿಸಬಹುದು.
* ವಾಹನವೂ ಗರಿಷ್ಠ 225 ಕೆ.ಜಿ. ತೂಕವನ್ನು ಹೊರುವ ಸಾಮರ್ಥ್ಯ ಹೊಂದಿದೆ.
* ಈ ವಾಹನದ ಒಟ್ಟು ತೂಕ 85 ಕೆ.ಜಿ.
* ವಾಹನದಲ್ಲಿ ಬಳಸಿರುವ ಎಲ್ಲಾ ವಸ್ತುಗಳು ಮರುಬಳಕೆಗೆ ಯೋಗ್ಯವಾದವು.
* ವಾಹನದ ಬಾಡಿಗೆ ಬಳಸಿರುವ ಅಲ್ಯೂಮಿನಿಯಂ ತುಕ್ಕು ಹಿಡಿಯುವುದಿಲ್ಲ.
* 10 ವರ್ಷಗಳ ಕಾಲ ವಾಹನ ಯಾವುದೇ ಸಮಸ್ಯೆ ಇಲ್ಲದೇ ಸಂಚರಿಸುತ್ತದೆ.

ವಾಹನ ವಿನ್ಯಾಸ

ಈ ವಾಹನದಲ್ಲಿ ಮುಂದೆ 2 ಚಕ್ರಗಳಿವೆ. ಹಿಂದೆ ಒಂದು ಚಕ್ರವಿದೆ. ಚಾಲಕನ ಸುರಕ್ಷತೆಯ ದೃಷ್ಟಿಯಿಂದ ಹೀಗೆ ವಿನ್ಯಾಸ ಮಾಡಲಾಗಿದೆ. ಮುಂದಿನ ಚಕ್ರಗಳಿಗೆ ಡ್ರಮ್ ಬ್ರೇಕ್ ಹಾಗೂ ಹಿಂದಿನ ಚಕ್ರಕ್ಕೆ ಡಿಸ್ಕ್ ಬ್ರೇಕ್ ಅಳವಡಿಸಲಾಗಿದೆ. ಸೆನ್ಸರ್ ಸೌಲಭ್ಯವೂ ಇದೆ.

ತಾಂತ್ರಿಕ ಅಂಶಗಳು:

ವಾಹನದ ಮೇಲ್ಭಾಗಕ್ಕೆ ಸೋಲಾರ್ ಪ್ಯಾನಲ್ : ಇದರಿಂದ ಸೂರ್ಯ ಶಕ್ತಿಯಿಂದ ವಾಹನ ಚಾಲನೆಯಾಗುತ್ತದೆ. ಹಾಗೆಯೇ, ಬಿಸಿಲು, ಮಳೆಯಿಂದ ವಾಹನದೊಳಗೆ ಕುಳಿತವರಿಗೆ ರಕ್ಷಣೆ ಸಿಗುತ್ತದೆ.

ಲಿಥಿಯಂ ಬ್ಯಾಟರಿ: ಸೋಲಾರ್ ಪ್ಯಾನೆಲ್ ನಿಂದ ಸಂಗ್ರಹವಾದ ವಿದ್ಯುತ್ ಅನ್ನು ಸಂಗ್ರಹಿಸುತ್ತದೆ. ದರಲ್ಲಿ ಸುಮಾರು 20 ಲಿಥಿಯಂ ಬ್ಯಾಟರಿಗಳ ಸರಣಿಯಿದ್ದು ಇದು ಸೋಲಾರ್ ಪ್ಯಾನೆಲ್ ಸಹಾಯದಿಂದ ಸೌರಶಕ್ತಿಯನ್ನು ಹೀರಿಕೊಂಡು ಆ ಶಕ್ತಿಯನ್ನು ಹಬ್ ಮೋಟರ್ ಗೆ ವರ್ಗಾಯಿಸಿ ಆ ಮೂಲಕ ಗಾಡಿ ಓಡುವಂತೆ ಮಾಡುತ್ತದೆ.

ರಿಮೋಟ್ ಲಾಕ್ ಹಾಗೂ ಜಿಪಿಎಸ್: ಈ ಸೌಲಭ್ಯದಿಂದ ವಾಹನ ಕಳುವಾದರೆ ಸುಲಭವಾಗಿ ಪತ್ತೆ ಮಾಡಬಹುದು. ಜತೆಗೆ ರಿಮೋಟ್ ಮೂಲಕ ಗಾಡಿ ಮುಂದೆ ಸಾಗದಂತೆ ಲಾಕ್ ಮಾಡಬಹುದು.

ಇಂಡಿಪೆಂಡೆಟ್ ಸಸ್ಪೆನ್ಷನ್ : ಈ ವ್ಯವಸ್ಥೆ ಗಾಡಿಯನ್ನು ಆರಾಮಾಗಿ ಎಲ್ಲೆಂದರಲ್ಲಿ ಓಡಿಸಲು ಅನುಕೂಲವಾಗುತ್ತದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !