ಬೆಂಗಳೂರು: ಯುಲು ಕಂಪನಿಯು ತಾನು ವಿತರಣೆ ಮಾಡಿದ ವಿದ್ಯುತ್ ಚಾಲಿತ ವಾಹನಗಳು ನಗರದಲ್ಲಿ ಒಟ್ಟು 100 ಕೋಟಿ ಕಿಲೋ ಮೀಟರ್ಗಳಷ್ಟು ಸಂಚಾರ ಪೂರೈಸಿವೆ ಎಂದು ಪ್ರಕಟಿಸಿದೆ.

ಯುಲು ಕಂಪನಿಯ ಒಟ್ಟು 22,500 ವಿದ್ಯುತ್ ಚಾಲಿತ ವಾಹನಗಳು ಈಗ ಬೆಂಗಳೂರಿನಲ್ಲಿ ಬಳಕೆಯಲ್ಲಿವೆ. ಈ ವಾಹನಗಳನ್ನು ಅಲ್ಪ ದೂರದ ಪ್ರಯಾಣಕ್ಕೆ ಹೆಚ್ಚಾಗಿ ಬಳಸಲಾಗುತ್ತದೆ. ಕಂಪನಿಯು ತನ್ನ ಪ್ರಭಾವವನ್ನು ವಿಸ್ತರಿಸುತ್ತಿದ್ದು, ಇದುವರೆಗೆ 2.7 ಕೋಟಿ ಕೆ.ಜಿ.ಯಷ್ಟು ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಕಡಿಮೆ ಮಾಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಯುಲು ಪಾಲಿಗೆ ಬೆಂಗಳೂರು ಪ್ರಮುಖ ಮಾರುಕಟ್ಟೆಯಾಗಿದೆ. ಕಂಪನಿಯು ಮುಂಬೈ, ದೆಹಲಿ ಮತ್ತು ಹೈದರಾಬಾದ್ನಲ್ಲೂ ಕಾರ್ಯಾಚರಣೆ ಹೊಂದಿದೆ. ನಾಲ್ಕೂ ನಗರಗಳಲ್ಲಿ ಕಂಪನಿಯು ಒಟ್ಟು 46,000 ವಿದ್ಯುತ್ ಚಾಲಿತ ವಾಹನಗಳನ್ನು ಹೊಂದಿದ್ದು, ಅವು ಒಟ್ಟಾರೆಯಾಗಿ 2 ಶತಕೋಟಿ ಕಿಲೋ ಮೀಟರ್ಗಳಷ್ಟು ದೂರ ಕ್ರಮಿಸಿವೆ.

ಬೆಂಗಳೂರಿನ ಕ್ವಿಕ್ ಕಾಮರ್ಸ್ ಕಂಪನಿಗಳಿಗೆ ಸೇರಿದ ‘ಡಾರ್ಕ್ ಸ್ಟೋರ್’ಗಳಲ್ಲಿ ಬಳಕೆಯಲ್ಲಿ ಇರುವ ಪ್ರತಿ ಮೂರು ಡೆಲಿವರಿ ವಾಹನಗಳಲ್ಲಿ ಒಂದು ‘ಯುಲು’ ವಾಹನವಾಗಿದೆ. 2026ರ ಮಾರ್ಚ್ ತಿಂಗಳೊಂದರಲ್ಲೇ ಯುಲು 85 ಲಕ್ಷ ಡೆಲಿವರಿಗಳನ್ನು ಸಾಧ್ಯವಾಗಿಸಿದೆ ಎಂದು ಕಂಪನಿಯ ಪ್ರಕಟಣೆಯಲ್ಲಿ ಹೇಳಲಾಗಿದೆ.

ಮುಂಬರುವ ವರ್ಷಗಳಲ್ಲಿ ‘ಯುಲು’ ಬೆಂಗಳೂರಿನಲ್ಲಿ ತನ್ನ ವಾಹನಗಳ ಸಂಖ್ಯೆಯನ್ನು ಗರಿಷ್ಠ 40,000ಕ್ಕೆ ಹೆಚ್ಚಿಸುವ ಗುರಿ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.