ಅಯೋಧ್ಯೆಯ ಶ್ರೀ ಸೀತಾ ರಾಮ ದೇಗುಲದಲ್ಲಿ ಇಫ್ತಾರ್‌ ಕೂಟ

ಮಂಗಳವಾರ, ಜೂನ್ 18, 2019
26 °C

ಅಯೋಧ್ಯೆಯ ಶ್ರೀ ಸೀತಾ ರಾಮ ದೇಗುಲದಲ್ಲಿ ಇಫ್ತಾರ್‌ ಕೂಟ

Published:
Updated:

ಅಯೋಧ್ಯೆ: ರಾಮ ಮಂದಿರ ಮತ್ತು ಮಸೀದಿಯ ಜಾಗದ ವಿವಾದದಿಂದಷ್ಟೇ ಸುದ್ದಿಯಾಗುವ ಅಯೋಧ್ಯೆಯಲ್ಲಿ ಧಾರ್ಮಿಕ ಸಾಮರಸ್ಯದ ಪ್ರಸಂಗಗಳೂ ನಡೆಯುತ್ತವೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ಅಲ್ಲಿನ ಸೀತಾ ರಾಮ ದೇಗುಲವೊಂದರಲ್ಲಿ ಸೋಮವಾರ ರಂಜಾನ್‌ ಮಾಸಾಚರಣೆಯ ಇಫ್ತಾರ್ ಕೂಟ ಆಯೋಜಿಸಲಾಗಿತ್ತು.

ದೇಗುಲದ ಆವರಣದಲ್ಲಿ ಆಯೋಜಿಸಿದ್ದ ಇಫ್ತಾರ್‌ಗೆ ಆಗಮಿಸಿದ ಮುಸ್ಲಿಂ ಧರ್ಮೀಯರು ಭೋಜನ ಸ್ವೀಕರಿಸಿದರು.

ಈ ಕುರಿತು ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್‌ಐ ಜತೆ ಮಾತನಾಡಿರುವ ದೇಗುಲದ ಅರ್ಚಕ, ಇಫ್ತಾರ್‌ ಕೂಟದ ಆಯೋಜಕ ಯುಗಲ್‌ ಕಿಶೋರ್‌, ‘ದೇಗುಲದ ಆವರಣದಲ್ಲಿ ಆಯೋಜಿಸುತ್ತಿರುವ ಮೂರನೇ ಇಫ್ತಾರ್‌ ಕೂಟವಿದು. ಭವಿಷ್ಯದಲ್ಲೂ ನಾವು ಹೀಗೆಯೇ ನಡೆದುಕೊಳ್ಳುತ್ತೇವೆ. ನವೋತ್ಸಾಹದಿಂದ ಎಲ್ಲ ಧರ್ಮದ ಹಬ್ಬಗಳನ್ನೂ ನಾವು ಆಚರಿಸಬೇಕು,’ ಎಂದು ಅವರು ಅಭಿಪ್ರಾಯಪಟ್ಟರು.

ಇಫ್ತಾರ್‌ ಕೂಟದಲ್ಲಿ ಭಾಗವಹಿಸಿದ್ದ ಮುಜಾಮಿಲ್‌ ಫೈಜಲ್‌ ಕೂಡ ಇದೇ ಧಾಟಿಯಲ್ಲಿ ಮಾತನಾಡಿದರು. ನಾವು ನವರಾತ್ರಿಯನ್ನು ಹಿಂದೂ ಬಾಂಧವರೊಂದಿಗೆ ಪ್ರತಿ ವರ್ಷ ಆಚರಿಸುತ್ತೇವೆ ಎಂದು ಅವರು ಹೇಳಿದರು.

ಧರ್ಮದ ಅಂಕೆಗಳಿಲ್ಲದೆ ಎಲ್ಲರೂ ನಮ್ಮ ಜತೆಗೆ ಸೇರಬಹುದು ಎಂದೂ ಫೈಜಲ್‌ ಮನವಿ ಮಾಡಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 33

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !