‘ಆಯುಷ್‌ ಪದ್ಧತಿಗೆ ಸಿಗದ ಮಹತ್ವ’

7

‘ಆಯುಷ್‌ ಪದ್ಧತಿಗೆ ಸಿಗದ ಮಹತ್ವ’

Published:
Updated:
Prajavani

ಬೆಂಗಳೂರು: ‘ಸ್ವಾತಂತ್ರ್ಯದ ನಂತರ ಆಯುಷ್ ವೈದ್ಯ ಪದ್ಧತಿಗೆ ಹೆಚ್ಚು ಒತ್ತು ಕೊಡಲಿಲ್ಲ. ಆದ್ದರಿಂದ ಅದರ ಬೆಳವಣಿಗೆ ಕುಂಠಿತಗೊಂಡಿತು’ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್‌ ಕುಮಾರ್‌ ವಿಷಾದ ವ್ಯಕ್ತಪಡಿಸಿದರು.

ಜಿಗಣಿಯ ಗಿಡ್ಡೇನಹಳ್ಳಿಯಲ್ಲಿರುವ ಪ್ರಶಾಂತಿ ಕುಟೀರಂನಲ್ಲಿ ಶನಿವಾರ ನಡೆದ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ 16ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಎನ್‌ಡಿಎ ಸರ್ಕಾರ ಈಗ ಆಯುಷ್‌ ವೈದ್ಯ ಪದ್ಧತಿಯಲ್ಲಿ ಶೇ 100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಮಾಡಿಕೊಟ್ಟಿದೆ. 2022ರ ಹೊತ್ತಿಗೆ ದೇಶದ ಅರ್ಧದಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಶೇ 70ರಷ್ಟು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಆಯುಷ್‌ ಜಾರಿ ಮಾಡುವ ಗುರಿಯನ್ನು ಹೊಂದಿದೆ’ ಎಂದು ತಿಳಿಸಿದರು.

‘ಯೋಗ ಒತ್ತಡವನ್ನು ಕಡಿಮೆ ಮಾಡುತ್ತದೆ. ಸಂತೋಷ ಹಾಗೂ ತೃಪ್ತಿಯನ್ನು ನೀಡುತ್ತದೆ. ‘ವಸುಧೈವ ಕುಟುಂಬಕಂ’ ಎಂಬುವ ಚೈತನ್ಯವನ್ನು ಅಳವಡಿಸಿಕೊಳ್ಳಲು ನೆರವಾಗುತ್ತದೆ’ ಎಂದರು.

ಮನ್ಮಥ ಮನೋಹರ ಘರೋಟೆ, ದಿಲೀಪ್‌ ಸರ್ಕಾರ್‌ ಮತ್ತು ಕೆ.ಶ್ರೀನಿಧಿ ಪಾರ್ಥಸಾರಥಿ ಅವರಿಗೆ ಡಿ.ಲೀಟ್‌ ಪದವಿ ಪ್ರದಾನ ಮಾಡಲಾಯಿತು. ಹನ್ನೆರಡು ಮಂದಿಗೆ ಪಿಎಚ್‌.ಡಿ ಪದವಿ ನೀಡಲಾಯಿತು. ವಿವಿಧ ವಿಷಯಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಚಿನ್ನದ ಪದಕದೊಂದಿಗೆ ಗೌರವಿಸಲಾಯಿತು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !