‘ತಮಿಳು ಮುಂಡು’ ಧರಿಸಿದ ಅಮಿತಾಭ್‌

ಮಂಗಳವಾರ, ಏಪ್ರಿಲ್ 23, 2019
31 °C

‘ತಮಿಳು ಮುಂಡು’ ಧರಿಸಿದ ಅಮಿತಾಭ್‌

Published:
Updated:
Prajavani

ಬಿಗ್ ಬಿ ಅಮಿತಾಭ್‌ ಬಚ್ಚನ್‌ ತಮಿಳು ಚಿತ್ರರಂಗ ಪ್ರವೇಶಿಸುವ ಸುದ್ದಿ ಕಳೆದ ವರ್ಷವೇ ವೈರಲ್‌ ಆಗಿತ್ತು. ಇದೀಗ ಅವರು ಟಾಲಿವುಡ್‌ನಲ್ಲಿ ಆ್ಯಕ್ಷನ್‌–ಕಟ್‌ ಹೇಳಿಸಿಕೊಳ್ಳುತ್ತಿದ್ದಾರೆ. ಈ ಸಂಗತಿಯನ್ನು ಅವರು ಖುಷಿಯಿಂದಲೇ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. 

ಅಮಿತಾಭ್‌ ಬಚ್ಚನ್‌ ನಟಿಸುತ್ತಿರುವ ಚಿತ್ರದ ಹೆಸರು ‘ಉಯಾರ್ಂಧ ಮಣಿತನ್‌’. ಭಾರತೀಯ ಚಿತ್ರರಂಗದ ಮೇರು ನಟನೊಂದಿಗೆ ತೆರೆ ಹಂಚಿಕೊಳ್ಳುತ್ತಿರುವ ಖುಷಿಯನ್ನು ಎಸ್.ಜೆ. ಸೂರ್ಯ ಕೂಡಾ ಟ್ವೀಟ್‌ ಮಾಡಿದ್ದಾರೆ. ಬಚ್ಚನ್‌ ಅವರ ಫಸ್ಟ್‌ ಲುಕ್‌ನ್ನು ಸೂರ್ಯ ಅವರೇ ಬಿಡುಗಡೆ ಮಾಡಿದ್ದಾರೆ.

ಬಿಳಿ ಬಣ್ಣದ ‘ತಮಿಳು ಮುಂಡು’ ಮೇಲೆ ಕುರ್ತಾ ಧರಿಸಿರುವ ಅಮಿತಾಭ್‌ ಹೆಗಲ ಮೇಲೊಂದು ಕೆಂಪು ಬಣ್ಣದ ಅಂಗವಸ್ತ್ರವೂ ಇದೆ. ಹಣೆಗೆ ವಿಭೂತಿ ಮತ್ತು ತೇದ ಗಂಧ ಹಚ್ಚಿಕೊಂಡಿರುವುದು ಅವರಿಗೆ ಪಕ್ಕಾ ಲೋಕಲ್‌ ತಮಿಳಿಗನ ಗೆಟಪ್‌ ನೀಡಿದೆ.

ಅಚ್ಚರಿಯ ಸಂಗತಿ ಎಂದರೆ, ಸೂರ್ಯ ಟ್ವೀಟ್‌ ಮಾಡಿರುವ ಫೋಟೊವನ್ನು ಬಿಗ್‌ ಬಿ ಭಾನುವಾರವೇ ತಮ್ಮ ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಿದ್ದರು. ಆದರೆ ಚಿತ್ರದ ಕುರಿತ ಸ್ಪಷ್ಟ ವಿವರ ಇರಲಿಲ್ಲ. ಇದೀಗ ಆ ಗೆಟಪ್‌ ತಮಿಳು ಚಿತ್ರದ್ದು ಎಂಬುದು ಸ್ಪಷ್ಟವಾಗಿದೆ. ಈ ಚಿತ್ರಗಳನ್ನು ವಿವರವಾದ ನೋಟ್‌ನೊಂದಿಗೆ ಅವರು ತಮ್ಮ ಬ್ಲಾಗ್‌ನಲ್ಲಿ ಹಾಕಿಕೊಂಡಿದ್ದಾರೆ.

ಈ ಚಿತ್ರವು ತಮಿಳು ಮತ್ತು ಹಿಂದಿಯಲ್ಲಿ ತೆರೆ ಕಾಣಲಿದೆ. ಒಟ್ಟು 35 ದಿನ ಅವರು ನಿರಂತರವಾಗಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕಳೆದ ವರ್ಷವೇ ಸೂರ್ಯ, 40 ದಿನಗಳ ಕಾಲ್‌ಶೀಟ್‌ ಕೇಳಿದ್ದರು. ಆದರೆ  2019ರ ತಮ್ಮ ಶೆಡ್ಯೂಲ್‌ ಮತ್ತು ಕ್ಯಾಲೆಂಡರನ್ನೇ ಸೂರ್ಯ ಅವರ ಮುಂದಿಟ್ಟಿದ್ದರು ಬಚ್ಚನ್‌. ಕೊನೆಗೆ 35 ದಿನಗಳ ಕಾಲ್‌ಶೀಟ್‌ ನೀಡಿದ್ದನ್ನು ಸೂರ್ಯ ಖಚಿತಪಡಿಸಿದ್ದರು.

ಕಾಲ್ವನಿನ್‌ ಕಾದಲೈ ಖ್ಯಾತಿಯ ನಿರ್ದೇಶಕ ತಮೀಜ್‌ವಾನನ್‌ ಅವರೇ ಈ ಚಿತ್ರಕ್ಕೂ ನಿರ್ದೇಶಕರ ಟೋಪಿ ಧರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !