ಮತಯಾಚನೆ: ಬಂಡಿಯೇರಿದ ಬಚ್ಚೇಗೌಡ

ಗುರುವಾರ , ಏಪ್ರಿಲ್ 25, 2019
31 °C

ಮತಯಾಚನೆ: ಬಂಡಿಯೇರಿದ ಬಚ್ಚೇಗೌಡ

Published:
Updated:
Prajavani

ಹೆಸರಘಟ್ಟ: ಪದವಾಡಿದ ಗಾಯಕರು, ತಮಟೆ ತಾಳಕ್ಕೆ ನರ್ತಿಸಿದ ಕಾರ್ಯಕರ್ತರು, ಶೃಂಗಾರಗೊಂಡ ಎತ್ತುಗಳು, ಆರತಿ ಬೆಳಗಿ ಅಭ್ಯರ್ಥಿಯನ್ನು ಬರಮಾಡಿಕೊಂಡ ಮಹಿಳೆಯರು. ಇವೆಲ್ಲವು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಅವರು ಮತಯಾಚನೆಗೆ ಬಂದಾಗ ಮೇಳೈಸಿದವು.

ಜೋಡೆತ್ತಿನ ಬಂಡಿಯೇರಿದ ಅಭ್ಯರ್ಥಿ ಮತ್ತು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಜತೆಗೂಡಿ ಗ್ರಾಮದಲ್ಲಿ  ಮತಯಾಚನೆ ಮಾಡಿದರು. 

‘18 ಲಕ್ಷ ಮತದಾರರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿದ್ದಾರೆ. 3.70 ಲಕ್ಷ ಮತದಾರರು ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಇದ್ದಾರೆ. ಹೆಸರಘಟ್ಟ ಹೋಬಳಿಯಲ್ಲಿ 85 ಸಾವಿರ ಮತದಾರರಿದ್ದು, ಸ್ಥಳೀಯನಾದ ನನ್ನನ್ನು ನೀವು ಬೆಂಬಲಿಸಬೇಕು’ ಎಂದು ಹೇಳಿದರು.

‘ವಿಶ್ವನಾಥ ಮತ್ತು ನಾನು ಜೋಡೆತ್ತುಗಳಾಗಿ ಪ್ರಗತಿಯ ಬಂಡಿ ಎಳೆಯುತ್ತೇವೆ’ ಎಂದರು. 

ವಿಶ್ವನಾಥ್,‘ಮೋದಿ ಅವರು ಪ್ರಧಾನ ಮಂತ್ರಿಯಾದ ಮೇಲೆ ಉಗ್ರಗಾಮಿ ಚಟುವಟಿಕೆಗಳು ಜಮ್ಮು ಕಾಶ್ಮೀರಕ್ಕೆ ಸೀಮಿತವಾಗಿದೆ. ಈ ದೇಶವನ್ನು ರಕ್ಷಿಸುವ ಸಾರ್ಮರ್ಥ್ಯ ಮೋದಿ ಅವರಿಗೆ ಮಾತ್ರ ಇದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !