₹ 6 ಕೋಟಿ ವಂಚನೆ; ಉದ್ಯೋಗಿ ಬಂಧನ

ಬುಧವಾರ, ಜೂನ್ 26, 2019
25 °C

₹ 6 ಕೋಟಿ ವಂಚನೆ; ಉದ್ಯೋಗಿ ಬಂಧನ

Published:
Updated:

ಬೆಂಗಳೂರು: ಕೆಲಸಕ್ಕಿದ್ದ ಕಂಪನಿಯ ಹೆಸರಿನಲ್ಲಿ ನಕಲಿ ಇ–ಮೇಲ್‌ ಸೃಷ್ಟಿಸಿ ಅಮೆರಿಕದ ಹ್ಯಾಕರ್ ಸಹಾಯದಿಂದ ₹ 6 ಕೋಟಿ ಹಣವನ್ನು ಸ್ವಂತ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ್ದ ಆರೋಪದಡಿ ರಮೇಶ್ ಕಾಮಯ್ಯ ಎಂಬುವರನ್ನು ಬಂಡೇಪಾಳ್ಯ ಪೊಲೀಸರು ಬಂಧಿಸಿದ್ದಾರೆ.

‘ಹೊಂಗಸಂದ್ರದ ನಿವಾಸಿಯಾದ ರಮೇಶ್, ಹಿಂದುಜಾ ಗ್ಲೋಬಲ್ ಸಲ್ಯೂಷನ್ ಕಂಪನಿಯ ಹಣಕಾಸು ವಿಭಾಗದ ಉದ್ಯೋಗಿ. 50 ದಿನಗಳಲ್ಲಿ ₹ 6 ಕೋಟಿಯನ್ನು ತನ್ನದಾಗಿಸಿಕೊಂಡಿದ್ದರು. ಅವರ ವಿರುದ್ಧ ಕಂಪನಿಯ ಸಹಾಯಕ ಅಧ್ಯಕ್ಷ ಡಿ.ಎನ್‌.ಮಧುಸೂದನ್ ದೂರು ನೀಡಿದ್ದರು’ ಎಂದು ಪೊಲೀಸರು ಹೇಳಿದರು.

‘ಕಂಪನಿಯ ವ್ಯವಹಾರದ ಬಗ್ಗೆ ತಿಳಿದುಕೊಂಡಿದ್ದ ಆರೋಪಿ, ಆನ್‌ಲೈನ್‌ ಮೂಲಕ ಅಮೆರಿಕದ ಹ್ಯಾಕರ್ ಲೋವಾ ಲಾಮ್‌ ಎಂಬಾತನನ್ನು ಸಂಪರ್ಕಿಸಿದ್ದರು. ಆತನ ಸಹಾಯದಿಂದಲೇ ಕಂಪನಿಯ ಹಣವನ್ನು ಕದ್ದಿದ್ದರು. ಆ ಬಗ್ಗೆ ಅನುಮಾನಗೊಂಡ ಕಂಪನಿಯ ಆಡಳಿತ ಮಂಡಳಿ, ಆಂತರಿಕ ತನಿಖೆ ನಡೆಸಿದಾಗಲೇ ಅವರ ಕೃತ್ಯ ಗೊತ್ತಾಗಿತ್ತು’ ಎಂದರು. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !