ಅರಣ್ಯ– ಪ್ರಾಣಿಗಳಿಗೆ ಹಾನಿಯಾಗಿಲ್ಲ: ಸ್ಪಷ್ಟನೆ

ಶನಿವಾರ, ಮೇ 25, 2019
28 °C
ಗೋಪಾಲಸ್ವಾಮಿ ಅರಣ್ಯ ವಲಯದಲ್ಲಿ ಸಂಭವಿಸಿದ ಅಗ್ನಿ ದುರಂತ

ಅರಣ್ಯ– ಪ್ರಾಣಿಗಳಿಗೆ ಹಾನಿಯಾಗಿಲ್ಲ: ಸ್ಪಷ್ಟನೆ

Published:
Updated:

ಬೆಂಗಳೂರು: ‘ಬಂಡೀಪುರ ಹುಲಿ ಸಂರಕ್ಷಣಾ ವಲಯದ ಅಂಚಿನಲ್ಲಿ ಫೆಬ್ರುವರಿಯಲ್ಲಿ ಸಂಭವಿಸಿದ ಅಗ್ನಿ ಅಪಘಾತದಲ್ಲಿ ಅರಣ್ಯ ಮತ್ತು ಪ್ರಾಣಿಗಳಿಗೆ ಹಾನಿಯಾಗಿಲ್ಲ. ಆದರೆ, ಕೆಲವು ಕಿಡಿಗೇಡಿಗಳು ದುರಂತ ದಲ್ಲಿ ಭಾರಿ ಅನಾಹುತವಾಗಿದೆ ಎಂಬುದಾಗಿ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಬೆಂಕಿ ಅಪಘಾತ ಸಂಭವಿಸಿದ ಸ್ಥಳದಲ್ಲಿ ಗಿಡಗಳನ್ನು ನೆಟ್ಟು ಅರಣ್ಯ ಪುನರ್‌ಜ್ಜೀವನಗೊಳಿಸಬೇಕಿದೆ. ಈ ಉದ್ದೇಶಕ್ಕೆ ಬೆಂಗಳೂರಿನಲ್ಲಿ ಬೀಜದುಂಡೆ ಉತ್ಪಾದಿಸುವ ಕಾರ್ಯಕ್ರಮವನ್ನು ಸಾರ್ವಜನಿಕರಿಂದ ಹಣ ಸಂಗ್ರಹಿಸುವ ಮೂಲಕ ನಿರ್ವಹಿಸುವುದಾಗಿ ಬಿಂಬಿಸುತ್ತಿದ್ದಾರೆ ಎಂದು ಅರಣ್ಯ ಪಡೆ ಮುಖ್ಯಸ್ಥರೂ ಆಗಿರುವ ಪಿಸಿಸಿಎಫ್‌ ಹೇಳಿದ್ದಾರೆ.

ವಾಸ್ತವದಲ್ಲಿ ಘಟನೆಯಲ್ಲಿ ಬೆಳೆದು ನಿಂತಿರುವ ಮರಗಳು ಮತ್ತು ಪ್ರಾಣಿಗಳಿಗೆ ಯಾವುದೇ ಹಾನಿಯಾಗಿಲ್ಲ. ಬೆಂಕಿ ನೆಲಮಟ್ಟದಾಗಿದ್ದು ಲಂಟಾನವು (ಒಣಗಿದ್ದ ಕಸಕಡ್ಡಿ, ತರಗೆಲೆ, ರೆಂಬೆಕೊಂಬೆ, ಹುಲ್ಲು ಮಾತ್ರ ಸುಟ್ಟಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಒಂದೆರಡು ಮಳೆಯಾದರೆ ಸಹಜವಾಗಿ ಇಡೀ ಪ್ರದೇಶ ಹಸಿರಿನಿಂದ ನಳನಳಿಸಲಿದ್ದು, ಅರಣ್ಯವನ್ನು ಪುನರ್‌ಜ್ಜೀವನಗೊಳಿಸಲು ಯಾವುದೇ ಹಣಕಾಸು ಅಗತ್ಯವಿಲ್ಲ. ಹೀಗಾಗಿ, ಹಣ ನೀಡುವಂತೆ ಯಾರಿಗೂ ಆಗ್ರಹಿಸುತ್ತಿಲ್ಲ. ಅರಣ್ಯದ ಅಭಿವೃದ್ಧಿ ಹೆಸರಿನಲ್ಲಿ ಯಾರಾದರೂ ಹಣ ಸಂಗ್ರಹಿಸುತ್ತಿದ್ದರೆ ಅದು ವಂಚನೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.

 ಮೊಗ್ಗಿರುವ ಲಂಟಾನ ಕಿತ್ತು ಸ್ಥಳೀಯರ ನೆರವಿನಿಂದ ಬಿದಿರು ಬೀಜದ ಉಂಡೆಗಳನ್ನು ಬಿತ್ತಿ ಹೆಚ್ಚು ಮೇವನ್ನು ಬೆಳೆಯುವುದು ನಮ್ಮ ಉದ್ದೇಶವಾಗಿದೆ. ಇಲ್ಲಿ ಬೇರೆ ಯಾವುದೇ ಜಾತಿಯ ಬೀಜಗಳನ್ನು ಬಿತ್ತುವುದಿಲ್ಲ. ಅಲ್ಲದೆ, ಹೊರಗಿನವರು ಅರಣ್ಯ ಪ್ರದೇಶಕ್ಕೆ ಬರಲು ಅವಕಾಶ ಇರುವುದಿಲ್ಲ. ಬೆಂಕಿ ಅಪಘಾತದ ಸಮಯದಲ್ಲಿ ಅದನ್ನು ನಂದಿಸಲು ಬರುವ ಸ್ವಯಂ ಸೇವಕರನ್ನು ನಿಯಂತ್ರಿಸುವುದೇ ಕಷ್ಟವಾಗಿರುತ್ತದೆ. ಇದರಿಂದಾಗಿ ಅರಣ್ಯದಂಚಿನ ಗ್ರಾಮಗಳ ಸ್ವಯಂ ಸೇವಕರ ಸಹಾಯವನ್ನು ಮಾತ್ರ ಪಡೆದು ಕೆಲಸ ಮುಗಿದ ಬಳಿಕ ವಾಪಸ್‌ ಕಳುಹಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇನ್ನು ಮುಂದೆ ತುರ್ತು ಪರಿಸ್ಥಿತಿ ಸಂದರ್ಭಗಳಲ್ಲಿ ಅರಣ್ಯ ರಕ್ಷಣೆಗೆ ಹೊರಗಿನವರ ಸಹಾಯ ಪಡೆಯುವುದಿಲ್ಲ ಎಂದೂ ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !