ಅರ್ಜಿ ಸಲ್ಲಿಸಲು ಇಂದೇ ಕೊನೆ

7

ಅರ್ಜಿ ಸಲ್ಲಿಸಲು ಇಂದೇ ಕೊನೆ

Published:
Updated:

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ 2018–19ನೇ ಸಾಲಿನ ಎಂ.ಕಾಂ ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ದಂಡವಿಲ್ಲದೆ ಅರ್ಜಿ ಸಲ್ಲಿಸಲು ಸೋಮವಾರ (ಆ.20) ಕೊನೆ ದಿನ.

ಆಗಸ್ಟ್‌ 21ರವರೆಗೆ ₹ 200 ದಂಡ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಬಹುದು. ಆಗಸ್ಟ್‌ 23ರಂದು ದಾಖಲಾತಿಗಳನ್ನು ಲಗತ್ತಿಸಬೇಕು. ಆಗಸ್ಟ್‌ 24ರಂದು ಮೆರಿಟ್‌ ಲಿಸ್ಟ್‌ ಬಿಡುಗಡೆ ಮಾಡಲಾಗುವುದು.

ಆಗಸ್ಟ್‌ 27 ರಂದು ಕೌನ್ಸೆಲಿಂಗ್‌ ನಡೆಯಲಿದೆ. ಆಗಸ್ಟ್‌ 28ರಂದು ತರಗತಿಗಳು ಪ್ರಾರಂಭವಾಗಲಿವೆ.

ಸಂಪರ್ಕ: 080 22961082

ಪ್ರವೇಶ ಪ್ರಕ್ರಿಯೆ ಇಂದು
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು (ಸ್ನಾತಕೋತ್ತರ) ವಿಭಾಗದ ಪ್ರವೇಶ ಪ್ರಕ್ರಿಯೆ ಇದೇ 20ಕ್ಕೆ ನಡೆಯಲಿದೆ.

ಇದೇ 17ರಂದು ನಡೆಯಬೇಕಿದ್ದ ಪ್ರವೇಶ ಪ್ರಕ್ರಿಯೆಯನ್ನು ಅಟಲ್‌ ಬಿಹಾರಿ ವಾಜಪೇಯಿ ನಿಧನದ ಕಾರಣಕ್ಕೆ ಮುಂದೂಡಲಾಗಿತ್ತು. ಕಾನೂನು ಕಾಲೇಜು ಆವರಣದಲ್ಲಿ ಪ್ರಕ್ರಿಯೆ ನಡೆಸಲಾಗುವುದು ಎಂದು ವಿಶ್ವವಿದ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !