ಐಜಿಎನ್‌ಸಿಎ–ಬೆಂಗಳೂರು ವಿ.ವಿ ಒಪ್ಪಂದ

7

ಐಜಿಎನ್‌ಸಿಎ–ಬೆಂಗಳೂರು ವಿ.ವಿ ಒಪ್ಪಂದ

Published:
Updated:

ಬೆಂಗಳೂರು: ಸಂಶೋಧನೆಯ ಅಭಿ ವೃದ್ಧಿ ಹಾಗೂ ತರಬೇತಿ ಕಾರ್ಯಕ್ರಮಗಳ ಲಾಭ ಪಡೆಯುವ ಉದ್ದೇಶದಿಂದ ಶನಿವಾರ ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಇಂದಿರಾ ಗಾಂಧಿ ನ್ಯಾಷನಲ್‌ ಸೆಂಟರ್‌ ಫಾರ್‌ ಆರ್ಟ್ಸ್‌ (ಐಜಿಎನ್‌ಸಿಎ) ಸಂಸ್ಥೆಗಳು ಒಪ್ಪಂದ ಮಾಡಿಕೊಂಡಿವೆ.

‘ಐಜಿಎನ್‌ಸಿಎ ಸಂಸ್ಥೆ ಸಾಂಸ್ಕೃತಿಕ ಸಂಶೋಧನೆಗಳಿಗೆ ಹೆಸರುವಾಸಿಯಾಗಿದೆ. ಕನ್ನಡ, ಹಿಂದಿ, ಇಂಗ್ಲಿಷ್‌, ಸಂಸ್ಕೃತದಲ್ಲಿರುವ ನಮ್ಮ ಹಳೆಯ ಲಿಪಿಗಳನ್ನು ಉಳಿಸಿಕೊಳ್ಳುವ ಮುಖ್ಯ ಉದ್ದೇಶದಿಂದ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಜತೆಗೆ ಎರಡೂ ಸಂಸ್ಥೆಗಳ ಶಿಕ್ಷಕರ ಜ್ಞಾನವನ್ನು ಬಳಸಿಕೊಳ್ಳಬಹುದು. ಜಂಟಿಯಾಗಿ ಸಂಶೋಧನೆ ಮಾಡುವ ಉದ್ದೇಶ ಕೂಡ ಇದೆ. ಸಂಶೋಧನಾ ಪ್ರಬಂಧಗಳು ಹಾಗೂ ಗ್ರಂಥಾಲಯದ ಸಹಾಯವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಲಿದ್ದಾರೆ’ ಎಂದು ಬೆಂಗಳೂರು ವಿ.ವಿ ಕುಲಪತಿ ಕೆ.ಆರ್‌.ವೇಣುಗೋಪಾಲ್‌ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !