ಬಂಡೀಪುರ ಕಾಳ್ಗಿಚ್ಚು: ಮತ್ತಿಬ್ಬರ ಬಂಧನ

ಮಂಗಳವಾರ, ಏಪ್ರಿಲ್ 23, 2019
33 °C
ಹುಲಿಗೆ ಹೆದರಿ ಬೆಂಕಿ ಕೊಟ್ಟಿರುವುದಾಗಿ ಕುರಿಗಾಹಿಗಳ ತಪ್ಪೊಪ್ಪಿಗೆ

ಬಂಡೀಪುರ ಕಾಳ್ಗಿಚ್ಚು: ಮತ್ತಿಬ್ಬರ ಬಂಧನ

Published:
Updated:

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅರಣ್ಯಕ್ಕೆ ಬೆಂಕಿ ಹೆಚ್ಚಿದ ಆರೋಪದ ಮೇಲೆ ಮತ್ತಿಬ್ಬರನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ.

ತಾಲ್ಲೂಕಿನ ಚೌಡಹಳ್ಳಿ ಗ್ರಾಮದ ಹನುಮಂತಯ್ಯ (73), ಗೋಪಯ್ಯ (65) ಅವರನ್ನು ಶುಕ್ರವಾರ ತಡರಾತ್ರಿ ಗೋಪಾಲಸ್ವಾಮಿ ಬೆಟ್ಟದ ವಲಯ ಅರಣ್ಯಾಧಿಕಾರಿ (ಆರ್‌ಎಫ್‌ಒ) ಪುಟ್ಟಸ್ವಾಮಿ ನೇತೃತ್ವದ ತಂಡ ಬಂಧಿಸಿದೆ. ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಹುಲಿಗೆ ಹೆದರಿ ಬೆಂಕಿ: ಅರಣ್ಯಕ್ಕೆ ಬೆಂಕಿ ಹಾಕಿರುವುದಾಗಿ ಇಬ್ಬರೂ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.

‘ಇಬ್ಬರೂ ಕಾಡಂಚಿನ ಪ್ರದೇಶಗಳಲ್ಲಿ ದಿನನಿತ್ಯ ಮೇಕೆ, ಕುರಿ ಮೇಯಿಸುತ್ತಿದ್ದರು. ಹುಲಿಯ ಕಾಟಕ್ಕೆ ಹೆದರಿ ಬೆಂಕಿ ಇಟ್ಟಿರುವುದಾಗಿ ವಿಚಾರಣೆ ವೇಳೆ ಹೇಳಿದ್ದಾರೆ’ ಎಂದು ಆರ್‌ಎಫ್‌ಒ ಪುಟ್ಟಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಅರುಣ್‌ ಕುಮಾರ್‌ ಎಂಬ ಆರೋಪಿಯನ್ನು ಎರಡು ದಿನಗಳ ಹಿಂದೆ ಬಂಧಿಸಲಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !