ಬಂಜಾರಾ ಜನಜಾಗೃತಿ ಸಮಾವೇಶ ನಾಳೆ

ಗುರುವಾರ , ಏಪ್ರಿಲ್ 25, 2019
31 °C
ವಿಜಯಪುರ ಪರಿಶಿಷ್ಟ ಜಾತಿಯ ಲೋಕಸಭಾ ಮೀಸಲು ಕ್ಷೇತ್ರದ ಟಿಕೆಟ್‌ಗೆ ಹಕ್ಕೊತ್ತಾಯ

ಬಂಜಾರಾ ಜನಜಾಗೃತಿ ಸಮಾವೇಶ ನಾಳೆ

Published:
Updated:

ವಿಜಯಪುರ: ಸಂತ ಸೇವಾಲಾಲ ಮಹಾರಾಜರ 280ನೇ ಜಯಂತಿ, ಬಂಜಾರಾ ಸಮಾಜದ ಜನಜಾಗೃತಿ ಸಮಾವೇಶ ಭಾನುವಾರ (ಮಾರ್ಚ್‌, 3) ವಿಜಯಪುರದಲ್ಲಿ ನಡೆಯಲಿದೆ ಎಂದು ಶಾಸಕ ದೇವಾನಂದ ಚವ್ಹಾಣ ತಿಳಿಸಿದರು.

‘ರಾಜ್ಯದಿಂದ ಬಂಜಾರಾ ಸಮಾಜದ ಧ್ವನಿ ಈಚೆಗೆ ಸಂಸತ್ತಿನಲ್ಲಿ ಪ್ರತಿಧ್ವನಿಸಿಲ್ಲ. ಸಮಾಜವನ್ನು ರಾಜಕೀಯವಾಗಿ ಸಂಘಟಿಸಲಿಕ್ಕಾಗಿ ಈ ಸಮಾವೇಶವನ್ನು ಪಕ್ಷಾತೀತವಾಗಿ ಹಮ್ಮಿಕೊಳ್ಳಲಾಗಿದೆ’ ಎಂದು ಶನಿವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಬಂಜಾರಾ ಸಮಾಜದ ಶಕ್ತಿ ಇದೀಗ ಹೆಚ್ಚಿದೆ. ಸಮಾಜದಲ್ಲೂ ಜಾಗೃತಿ ಮೂಡಿದೆ. ಚುನಾವಣಾ ದೃಷ್ಟಿಕೋನದಿಂದಲೇ ಈ ಸಮಾವೇಶ ಆಯೋಜಿಸಲಾಗಿದೆ. ಮೈತ್ರಿ ಪಕ್ಷಗಳು (ಕಾಂಗ್ರೆಸ್‌, ಜೆಡಿಎಸ್‌) ವಿಜಯಪುರ ಕ್ಷೇತ್ರದಿಂದ ಬಂಜಾರಾ ಸಮಾಜದ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕು ಎಂದು ಸಮಾವೇಶದ ಮೂಲಕ ಹಕ್ಕೊತ್ತಾಯ ಮಂಡಿಸಲಿದ್ದೇವೆ’ ಎಂದು ಜೆಡಿಎಸ್‌ ಶಾಸಕರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಮಾವೇಶಕ್ಕೆ ಚಾಲನೆ ನೀಡಲಿದ್ದು, ಸಮಾಜದ ಪ್ರಮುಖರು, ಧಾರ್ಮಿಕ ಮುಖಂಡರು ಭಾಗಿಯಾಗಲಿದ್ದಾರೆ. ಇದೇ ಸಂದರ್ಭ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಬೇಕು ಎಂಬ ಬೇಡಿಕೆ ಜತೆಗೆ ಗುಳೆ ತಪ್ಪಿಸಲು ವಿಶೇಷ ಪ್ಯಾಕೇಜ್‌ ಘೋಷಿಸುವಂತೆ ಆಗ್ರಹಿಸಲಾಗುವುದು’ ಎಂದು ದೇವಾನಂದ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !