ಮಂಗಳವಾರ, ಸೆಪ್ಟೆಂಬರ್ 17, 2019
21 °C

ಹಿಂಗಣಿಯಲ್ಲಿ ಬಸವ ಜಯಂತಿ

Published:
Updated:
Prajavani

ಧೂಳಖೇಡ: ಇಲ್ಲಿಗೆ ಸಮೀಪದ ಹಿಂಗಣಿ ಗ್ರಾಮದ ಜಗಜ್ಯೋತಿ ಬಸವೇಶ್ವರ ಸಮಿತಿ ಆಶ್ರಯದಲ್ಲಿ ಮಂಗಳವಾರ ಬಸವೇಶ್ವರರ 886ನೇ ಜಯಂತಿ ಆಚರಿಸಲಾಯಿತು.

ಬಸವ ಸಮಿತಿ ಅಧ್ಯಕ್ಷ ಶಂಕರಲಿಂಗ ಬಂಕಲಗಿ ಮಾತನಾಡಿ ‘12ನೇ ಶತಮಾನದಲ್ಲಿ ಬಸವಣ್ಣನವರು ಸಾಮಾಜಿಕ ಸುಧಾರಣೆ ಕೈಗೊಂಡವರು. ಸಮಾಜದಲ್ಲಿನ ತಾರತಮ್ಯ, ಮೂಢನಂಬಿಕೆ ಕಿತ್ತೊಗೆಯಲು ಶ್ರಮಿಸಿದವರು’ ಎಂದರು.

ಪ್ರಕಾಶ ಪ್ಯಾಟಿ, ಶಿವಾನಂದ ಹಾವಗೊಂಡ, ರಾಜಶೇಖರ ಸಿದ್ರಾಮಶೆಟ್ಟಿ, ಅನಿಲಗೌಡ ಪಾಟೀಲ, ಬಸವರಾಜ ಮಣೂರ, ಮಲ್ಲಿಕಾರ್ಜುನ ಪ್ಯಾಟಿ, ಶ್ರೀಕೃಷ್ಣ ಸಲಗೊಂಡ, ಮಹೇಶ ಬೆನ್ನೂರ, ಬಂಗಾರೆಪ್ಪ ದೇಗಾಂವ, ಹಣಮಂತಯ್ಯ ಮಠ, ನರುಸು ಕುಂಬಾರ ಉಪಸ್ಥಿತರಿದ್ದರು.

Post Comments (+)