ಬುಧವಾರ, ನವೆಂಬರ್ 13, 2019
22 °C

ಘನತ್ಯಾಜ್ಯ ನಿರ್ವಹಣೆ ಪ್ರಕರಣ: ಬಿಬಿಎಂಪಿಗೆ ಕುಟುಕಿದ ಹೈಕೋರ್ಟ್‌

Published:
Updated:
Prajavani

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್‌, ನಗರದ ಹೊರವಲಯದಲ್ಲಿ ಬಿಬಿಎಂಪಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರವಾನಗಿ ಇಲ್ಲದೆ ತ್ಯಾಜ್ಯ ಸುರಿಯುತ್ತಿರುವ ಬಗ್ಗೆ ಸೋಮವಾರ ಅಸಮಾಧಾನ ವ್ಯಕ್ತಪಡಿಸಿತು.

'ಕಾನೂನು ಬಾಹಿರ ಚಟುವಟಿಕೆಯನ್ನು ಎಷ್ಟೊಂದು ಸುಂದರವಾಗಿ ಮಾಡುತ್ತೀರಲ್ಲಾ' ಎಂದು ನ್ಯಾಯಪೀಠ ಬಿಬಿಎಂಪಿಗೆ ಕುಟುಕಿತು.

'ಕಾಂಟ್ರ್ಯಕ್ಟರ್ ಮತ್ತು ಪಾಲಿಕೆ ಸದಸ್ಯರು ಶಾಮೀಲಾಗಿ ವಾರ್ಷಿಕ ಸಾವಿರ ಕೋಟಿಗೂ ಹೆಚ್ಚು ಬಜೆಟ್ ಹೊಂದಿದ ತ್ಯಾಜ್ಯ ವಿಲೇವಾರಿ ವಿಭಾಗದಲ್ಲಿ ವ್ಯಾಪಕ ಅಕ್ರಮ ನಡೆಸುತ್ತಿದ್ದಾರೆ' ಎಂದು ಅರ್ಜಿದಾರರ ಪರ ವಕೀಲರು ಆಕ್ಷೇಪಿಸಿದರು.

'ಬಿಬಿಎಂಪಿ ಚುನಾಯಿತ ಸದಸ್ಯರನ್ನು ಬರ್ಖಾಸ್ತುಗೊಳಿಸಿ ಆಡಳಿತಾಧಿಕಾರಿ ನೇಮಕ ಮಾಡಬೇಕು' ಎಂದು ಮನವಿ ಮಾಡಿದರು.

ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ನ್ಯಾಯಪೀಠ, ಆದೇಶವನ್ನು ನಾಳೆಗೆ ಕಾಯ್ದಿರಿಸಿತು.

ಪ್ರತಿಕ್ರಿಯಿಸಿ (+)