5ಕ್ಕೆ ಬಿಬಿಎಂಪಿ ಜನಸ್ಪಂದನ

7

5ಕ್ಕೆ ಬಿಬಿಎಂಪಿ ಜನಸ್ಪಂದನ

Published:
Updated:

ಬೆಂಗಳೂರು: ಪೂರ್ವ ವಲಯದ ವ್ಯಾಪ್ತಿಗೆ ಒಳಪಡುವ ಶಾಂತಿನಗರ, ಸರ್ವಜ್ಞ ನಗರ, ಪುಲಕೇಶಿನಗರ, ಶಿವಾಜಿ ನಗರ, ಸಿ.ವಿ.ರಾಮನ್‌ ನಗರ ಹಾಗೂ ಹೆಬ್ಬಾಳ ವಿಧಾನಸಭಾ ಕ್ಷೇತ್ರಗಳ ಜನರ ಕುಂದುಕೊರತೆಗಳಿಗೆ ಪರಿಹಾರ ಕಂಡುಕೊಳ್ಳಲು ಬಿಬಿಎಂಪಿ ಶುಕ್ರವಾರ ‘ಜನಸ್ಪಂದನ’ ಕಾರ್ಯಕ್ರಮವನ್ನು ಏರ್ಪಡಿಸಿದೆ.

ಮ್ಯೂಸಿಯಂ ರಸ್ತೆಯ ಗುಡ್‌ಶೆಫರ್ಡ್‌ ಕಾನ್ವೆಂಟ್‌ನ ಸಭಾಂಗಣದಲ್ಲಿ ಬೆಳಿಗ್ಗೆ 10ಕ್ಕೆ ಕಾರ್ಯಕ್ರಮ ನಡೆಯಲಿದೆ.

ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಮೇಯರ್‌ ಗಂಗಾಂಬಿಕೆ, ಉಪಮೇಯರ್‌ ರಮೀಳಾ ಉಮಾಶಂಕರ್‌, ಈ ಕ್ಷೇತ್ರಗಳ ಶಾಸಕರು, ಪಾಲಿಕೆ ಸದಸ್ಯರು ಹಾಗೂ ಬಿಬಿಎಂಪಿ ಅಧಿಕಾರಿಗಳು ಭಾಗವಹಿಸಲಿದ್ದಾರೆ. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !