ವಿವಿಧೆಡೆ ಪಾದಚಾರಿ ಮಾರ್ಗ ಒತ್ತುವರಿ ತೆರವು

7

ವಿವಿಧೆಡೆ ಪಾದಚಾರಿ ಮಾರ್ಗ ಒತ್ತುವರಿ ತೆರವು

Published:
Updated:
Prajavani

ಬೆಂಗಳೂರು: ಯಲಹಂಕ ವಲಯದ ವಾರ್ಡ್‌ 6ರ ಸುತ್ತಮುತ್ತಲಿನ ಪ್ರದೇಶದಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿಯನ್ನು ಶುಕ್ರವಾರ ಬಿಬಿಎಂಪಿ ವತಿಯಿಂದ ತೆರವುಗೊಳಿಸಲಾಯಿತು. 

ನಾಗವಾರದ ಉಪನೋಂದಣಾಧಿಕಾರಿ ಕಚೇರಿ ರಸ್ತೆಯಲ್ಲಿ ಸುಮಾರು 1 ಕಿಲೋಮೀಟರ್‌ ಉದ್ದ, ಮಹದೇವಪುರ ವಲಯದ ವಾರ್ಡ್‌ 150ರ ಬಳಿ ಸುಮಾರು 2 ಕಿಲೋಮೀಟರ್‌  ಉದ್ದದ ಪಾದಚಾರಿ ಮಾರ್ಗದ ಒತ್ತುವರಿ ತೆರವುಗೊಳಿಸಲಾಗಿದೆ. 

ಕಾರ್ಯಾಚರಣೆಯಲ್ಲಿ 18 ತಾತ್ಕಾಲಿಕ ಒತ್ತುವರಿ, 9 ಶಾಶ್ವತ ಒತ್ತುವರಿ (ನಿರ್ಮಾಣಗಳು ಸೇರಿ) ಮಹದೇವಪುರ ವಲಯದಲ್ಲಿ 63 ತಾತ್ಕಾಲಿಕ ಒತ್ತುವರಿ ಹಾಗೂ 2 ಶಾಶ್ವತ ಒತ್ತುವರಿಗಳನ್ನು ತೆರವು ಮಾಡಲಾಗಿದೆ ಎಂದು ಈ ವಲಯದ ಮುಖ್ಯ ಎಂಜಿನಿಯರ್‌ ಆರ್‌.ಎಲ್‌.ಪರಮೇಶ್ವರಯ್ಯ ತಿಳಿಸಿದ್ದಾರೆ. 

ವಾಣಿಜ್ಯ ಚಟುವಟಿಕೆ ತೆರವು: ಮಹದೇವಪುರ ವಲಯದ ವಾರ್ಡ್‌ ನಂ 82ರಲ್ಲಿ ವಸತಿ ಪ್ರದೇಶಗಳಲ್ಲಿ ನಡೆಯುತ್ತಿದ್ದ ವಸತಿಯೇತರ (ವಾಣಿಜ್ಯ) ಚಟುವಟಿಕೆಗಳನ್ನು ಶುಕ್ರವಾರ ಬಂದ್‌ ಮಾಡಲಾಯಿತು. ವಸತಿ ಪ್ರದೇಶದಲ್ಲಿ ಅನಧಿಕೃತವಾಗಿ ನಡೆಸುತ್ತಿದ್ದ ಅಂಗಡಿ, ಹೋಟೆಲ್‌ಗಳನ್ನು ಸೇರಿದಂತೆ ಒಟ್ಟು 18 ವಾಣಿಜ್ಯ ಮಳಿಗೆಗಳನ್ನು ಬಿಬಿಎಂಪಿ ಅಧಿಕಾರಿಗಳು ಮುಚ್ಚಿಸಿದರು. ಪಾಲಿಕೆ ಉಪ ಆರೋಗ್ಯಾಧಿಕಾರಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !