ಮತಗಟ್ಟೆ ತಲುಪಲಾಗದ ಅಶಕ್ತರ ಪಟ್ಟಿ

ಬುಧವಾರ, ಏಪ್ರಿಲ್ 24, 2019
29 °C
ಬಿಬಿಎಂಪಿಯಿಂದ ಚುನಾವಣಗೆ ಪೂರ್ವಸಿದ್ದತೆ, ಅಂಗವಿಕಲರಿಗೆ ವಿಶೇಷ ವಾಹನ ವ್ಯವಸ್ಥೆ

ಮತಗಟ್ಟೆ ತಲುಪಲಾಗದ ಅಶಕ್ತರ ಪಟ್ಟಿ

Published:
Updated:

ಪ್ರತಿ ಬಾರಿ ಚುನಾವಣೆ ನಡೆದಾಗಲೂ, ಮತಗಟ್ಟೆ ತಲುಪಲಾಗದೇ ತಮ್ಮ ಹಕ್ಕು ಚಲಾಯಿಸಲು ಸಾಧ್ಯವಾಗದವರ ದೊಡ್ಡ ಪಟ್ಟಿಯೇ ಇರುತ್ತದೆ. 

ಇದಕ್ಕೆ ಕಡಿವಾಣ ಹಾಕಲು ಈ ಬಾರಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತೊಂದು ಮಹತ್ವದ ಹೆಜ್ಜೆ ಇರಿಸಿದೆ. ಮನೆ ಮನೆಗೆ ಹೋಗಿ ಅಶಕ್ತರನ್ನು ಹುಡುಕಿ ಪಟ್ಟಿ ಮಾಡಿದ್ದು,  ಒಟ್ಟು 6,285 ಜನರನ್ನು ಈಗಾಗಲೇ ಗುರುತಿಸಿದೆ.

ಬೆಂಗಳೂರು ಕೇಂದ್ರದಲ್ಲಿ 860 ಮಂದಿ ಇದ್ದರೆ, ಉತ್ತರದಲ್ಲಿ 1,162, ದಕ್ಷಿಣದಲ್ಲಿ 1,162 ಮಂದಿ ಇದ್ದಾರೆ. ಈ ಅಶಕ್ತರ ಪಟ್ಟಿಯಲ್ಲಿ ಅಂಧರು, ಶ್ರವಣದೋಷವುಳ್ಳವರು, ಅಂಗವಿಕಲರು ಹಾಗೂ ವಯಸ್ಸಾದವರೂ ಸೇರಿದ್ದಾರೆ. 

‘ಅಶಕ್ತರೆಲ್ಲರಿಗೂ ಮತಗಟ್ಟೆ ಮಟ್ಟದಲ್ಲಿಯೇ ವಾಹನ ವ್ಯವಸ್ಥೆ ಮಾಡಲಾಗಿದೆ. ದಕ್ಷಿಣ ಕ್ಷೇತ್ರದಲ್ಲಿ ಮಾತ್ರ ‘ಓಲಾ’ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.  ಉಳಿದ ಕ್ಷೇತ್ರಗಳಲ್ಲಿ ಸ್ಥಳೀಯವಾಗಿ ವಾಹನ ವ್ಯವಸ್ಥೆ ಮಾಡಲಾಗುತ್ತದೆ. ವಾಹನದ ಸಂಪರ್ಕ ಸಂಖ್ಯೆಯನ್ನು ಅಂಗವಿಕಲ ಹಾಗೂ ವಯಸ್ಸಾದ ಮತದಾರರಿಗೆ ತಲುಪಿಸುವ ಕೆಲಸವನ್ನು ಆಯಾ ಕ್ಷೇತ್ರದ ಅಧಿಕಾರಿಗಳು ಮಾಡಲಿದ್ದಾರೆ. ಮತ ಚಲಾಯಿಸಿದ ಬಳಿಕ ಅವರನ್ನು ಅದೇ ಕ್ಯಾಬ್‌ ಮೂಲಕ ಮನೆಗೆ ತಲುಪಿಸಲಾಗುತ್ತದೆ’ ಎಂದು ರವೀಂದ್ರ, ವಿಶೇಷ ಆಯುಕ್ತರು, ಶಿಕ್ಷಣ ಮತ್ತು ಮಾರುಕಟ್ಟೆ, ಇವರು ಮಾಹಿತಿ ನೀಡಿದರು.

‘ಈ ಬಾರಿಯ ಚುನಾವಣೆಗೆ ಪೂರ್ವ ಸಿದ್ದತೆಯನ್ನು ಅಚ್ಚುಕಟ್ಟಾಗಿ ಮಾಡಿಕೊಂಡಿದ್ದೇವೆ. ಎಲ್ಲಾ ಮತಗಟ್ಟೆಗಳಲ್ಲೂ ವ್ಹೀಲ್‌ಚೇರ್‌ ರ‍್ಯಾಂಪ್‌ ಅನ್ನು ಕಡ್ಡಾಯವಾಗಿ ಹಾಕಲಾಗಿದೆ. ಚುನಾವಣಾ ಸಿಬ್ಬಂದಿಗೆ ಯಾವುದೇ ಕೊರತೆಯಾಗದಂತೆ ಶೌಚಾಲಯ, ನೀರಿನ ವ್ಯವಸ್ಥೆ ಕೂಡ ಮಾಡಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ಜಾಗೃತಿ ಕಾರ್ಯಕ್ರಮಗಳು: ನಗರದ ಮೂರೂ ಕ್ಷೇತ್ರಗಳಲ್ಲಿ ಮತದಾನದ ಪ್ರಮಾಣ ಹೆಚ್ಚಾಗಲು ಬಿಬಿಎಂಪಿ ಈಗಾಗಲೇ ಕಾರ್ಯಪ್ರವೃತ್ತವಾಗಿದೆ. ಶಾಲೆ, ಕಾಲೇಜು, ದೇವಸ್ಥಾನ, ಮಸೀದಿ, ಚರ್ಚ್‌, ಬಸ್‌ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ‘ಮತ ಹಾಕಿ’ ಅಭಿಯಾನ ನಡೆಸುತ್ತಿದೆ. 

ಕೆಲವು ಶಾಲಾ, ಕಾಲೇಜುಗಳಲ್ಲಿ ‘ಮತದಾನ ಜಾಗೃತಿ ಕ್ಲಬ್‌’ ಮಾಡಲಾಗಿದೆ. ವಿ.ವಿ ಪ್ಯಾಟ್‌ ಕುರಿತು ಮಾಹಿತಿ ತಿಳಿಸುವ ಅಧ್ಯಯನ ತರಬೇತಿ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !