ಸುಲಿಗೆ ಮಾಡುತ್ತಿದ್ದ ಬಿ.ಕಾಂ ವಿದ್ಯಾರ್ಥಿ ಸೇರಿ ನಾಲ್ವರ ಬಂಧನ

7
ಕದ್ದ ದ್ವಿಚಕ್ರ ವಾಹನದಲ್ಲಿ ಸುತ್ತಾಡಿ ಸುಲಿಗೆ

ಸುಲಿಗೆ ಮಾಡುತ್ತಿದ್ದ ಬಿ.ಕಾಂ ವಿದ್ಯಾರ್ಥಿ ಸೇರಿ ನಾಲ್ವರ ಬಂಧನ

Published:
Updated:

ಬೆಂಗಳೂರು: ಕದ್ದ ದ್ವಿಚಕ್ರ ವಾಹನಗಳಲ್ಲಿ ಸುತ್ತಾಡಿ, ಸಾರ್ವಜನಿಕರ ಸುಲಿಗೆ ಮಾಡುತ್ತಿದ್ದ ಆರೋಪದಡಿ ಬಿ.ಕಾಂ ವಿದ್ಯಾರ್ಥಿ ಸೇರಿದಂತೆ ನಾಲ್ವರನ್ನು ಸಿದ್ದಾಪುರ ‍ಪೊಲೀಸರು ಬಂಧಿಸಿದ್ದಾರೆ.

ಸಿದ್ದಾಪುರದ ದೇವರಾಜ್, ಗುಟ್ಟೆಪಾಳ್ಯದ ನವೀನ್ ಕುಮಾರ್, ವಿಲ್ಸನ್ ಗಾರ್ಡನ್‌ನ ಅಭಿಷೇಕ್ ಹಾಗೂ ಕಲಾಸಿಪಾಳ್ಯದ ಎಂ. ಮುನಿರಾಜ್ ಬಂಧಿತರು. ಅವರಿಂದ ₹ 10 ಲಕ್ಷ ಮೌಲ್ಯದ 7 ಚಿನ್ನದ ಸರ, 6 ದ್ವಿಚಕ್ರ ವಾಹನ ಹಾಗೂ 2 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ.

‘ಒಬ್ಬಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದವರನ್ನು ಗುರಿಯಾಗಿಸಿಕೊಂಡು ಆರೋಪಿಗಳು ಕೃತ್ಯ ಎಸಗುತ್ತಿದ್ದರು. ಇವರ ಬಂಧನದಿಂದ ಸಿದ್ದಾಪುರ, ಜಯನಗರ, ಬಸವನಗುಡಿ ಮತ್ತು ಜೆ.ಪಿ.ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ 15 ಪ್ರಕರಣಗಳು ಪತ್ತೆಯಾಗಿವೆ’ ಎಂದು ಪೊಲೀಸರು ಹೇಳಿದರು.

‘ಪ್ರಮುಖ ಆರೋಪಿ ದೇವರಾಜ್, 8ನೇ ತರಗತಿಗೆ ಶಿಕ್ಷಣವನ್ನು ಮೊಟಕುಗೊಳಿಸಿ ಸರಗಳವು ಮಾಡಲಾರಂಭಿಸಿದ್ದ. ಕೆಲವು ವರ್ಷಗಳ ನಂತರ, ಸ್ನೇಹಿತ ನವೀನ್‌ಕುಮಾರ್‌ ಜೊತೆ ಸೇರಿ ಕೃತ್ಯ ಎಸಗಲಾರಂಭಿಸಿದ. ಅವರಿಬ್ಬರ ಕೃತ್ಯಕ್ಕೆ ಬಿ.ಕಾಂ ವಿದ್ಯಾರ್ಥಿ ಅಭಿಷೇಕ್ ಹಾಗೂ ಮುನಿರಾಜು ಸಹಕಾರ ನೀಡುತ್ತಿದ್ದರು’ ಎಂದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !