ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರೆಂಡ್‌ನಲ್ಲಿದೆ ಬನಾರಸ್ ಸೀರೆ

Last Updated 22 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

‘ಫ್ಯಾಷನ್’ ಜಗತ್ತಿನಲ್ಲಿ ಎಂಥದ್ದೇ ವಸ್ತ್ರಗಳು ಬಂದರೂ ಮಹಿಳೆಯರಿಗೆ ಸೀರೆಯ ಬಗೆಗಿನ ಸೆಳೆತ ಎಂದಿಗೂ ಕಡಿಮೆಯಾಗದು.ಸೀರೆಗೆ ಸರಿಸಾಟಿಯಾದ ಉಡುಗೆ ಬೇರೊಂದಿಲ್ಲ. ಅದರ ಘನತೆಯೇ ಅಂಥದ್ದು. ಸಾಂಪ್ರದಾಯಿಕ ಸಮಾರಂಭಗಳಲ್ಲಿ ಸೀರೆಗೆ ಹೆಚ್ಚು ಪ್ರಾಶಸ್ತ್ಯ ಇದೆ. ಈಗಮದುವೆಸೀಸನ್ಆರಂಭವಾಗಿದೆ. ಮದುವೆ ಮನೆಗಳಲ್ಲೂ ಸೀರೆಗಳ ಬಗೆಗಿನ ಚರ್ಚೆ ರಂಗೇರಿರುತ್ತದೆ !

ಸೀರೆಗಳಲ್ಲಿ ರೇಷ್ಮೆ ಸೀರೆಗೆ ವಿಶೇಷ ಸ್ಥಾನ. ಬನಾರಸ್ರೇಷ್ಮೆ ಸೀರೆಯೆಂದರೆ ಅದಕ್ಕೆ ಇನ್ನೂ ಉನ್ನತ ಸಮ್ಮಾನ.ಏಕೆಂದರೆ ಬನಾರಸ್ ಸೀರೆ ಸಂಪ್ರದಾಯಕ್ಕೆ ಹೆಸರು. ಭಾರತದ ಆಧ್ಯಾತ್ಮಿಕರಾಜಧಾನಿ, ಜಗತ್ತಿನ ಅತ್ಯಂತ ಪ್ರಾಚೀನ ನಗರಗಳಲ್ಲಿ ಒಂದಾದ ಕಾಶಿ ಅಥವಾ ವಾರಾಣಸಿ ‘ಬನಾರಸ್’ ಸೀರೆಯ ತವರೂರು. ಇಲ್ಲಿ ಮಹಿಳೆಯರು ‘ಬಳೆ’ಮತ್ತು‘ಸಿಂಧೂರ’ಕ್ಕೆ ನೀಡುವಷ್ಟು ಆದ್ಯತೆಯನ್ನು ‘ಬನಾರಸ್ ಸೀರೆ’ಗೂ ನೀಡುತ್ತಾರೆ. ಬನಾರಸ್ ಸೀರೆಗೆ ‘ಸುಹಾಗ್’- ಅಂದರೆ ಪತಿಯ ಸ್ಥಾನ ನೀಡಲಾಗಿದೆ. ಇದರಿಂದ ಬನಾರಸ್ ಸೀರೆಗಿರುವ ಮಹತ್ವವನ್ನು ಅರಿಯಬಹುದು.

ಬನಾರಸ್ ಸೀರೆಗಳಲ್ಲಿ ಹಲವು ವಿಧಗಳು ಇವೆ:ಪ್ಯೂರ್ ಸಿಲ್ಕ್,ಶಾಟಿರ್, ಕೋರಾ, ಜಾರ್ಜೆಟ್, ಜಂಗ್ಲಾ, ಟ್ಯಾಂಚೋಯಿ, ಕಟ್ವರ್ಕ್, ಟಿಶ್ಯೂ, ಬೂಟಿದಾರ್. ಇವುಗಳಲ್ಲಿ ಈಗಿನ ಟ್ರೆಂಡ್‌ನಲ್ಲಿ, ಮದುವೆ ಸಮಾರಂಭಗಳಲ್ಲಿ ಅಗಲವಾದ ಬಾರ್ಡರ್‌ನ ಬನಾರಸ್ ಸೀರೆಗಳನ್ನು ಮಹಿಳೆಯರು ಹೆಚ್ಚಾಗಿ ಉಡುತ್ತಾರೆ.

ಯುವತಿಯರಿಗೆ ಬನಾರಸಿ ಲೆಹೆಂಗಾಗಳ ಹೊರತಾಗಿ ಶುದ್ಧ ಸಿಲ್ಕ್ ಬನಾರಸ್ ಸೀರೆಗಳುಇಷ್ಟವಾಗುತ್ತಿವೆ. ಮದುವೆಗಳಲ್ಲಿ ಟ್ಯಾಂಚೋಯಿ ಬನಾರಸ್ ಸೀರೆಗಳು ಕೂಡಹೆಚ್ಚುಬಳಕೆಯಾಗುತ್ತಿವೆ.ಗೃಹಿಣಿಯರು ಅಗಲವಾದ ಬಾರ್ಡರ್ ಹೊಂದಿರುವಜಂಗ್ಲಾ,ಬೂಟಿದಾರ್ ಬನಾರಸ್ ಸೀರೆಗಳಂಥ ವಿಧಗಳನ್ನು ಮೆಚ್ಚಿಕೊಳ್ಳುತ್ತಿದ್ದಾರೆ.

ಬಣ್ಣಗಳ ವಿಚಾರಕ್ಕೆ ಬಂದಾಗ,ಕೆಂಪು, ಮರೂನ್,ನೀಲಿ, ಜೆಮಿನಿ, ಲೆಮನ್, ಹಳದಿ ಇತ್ಯಾದಿ ಬಣ್ಣಗಳ ಬನಾರಸ್ ಸೀರೆಗಳು ಹೆಚ್ಚು ಫೇಮಸ್.ವಿನ್ಯಾಸದದೃಷ್ಟಿಯಿಂದ ನೋಡುವುದಾದರೆ,ವೆಡ್ಡಿಂಗ್ ಟೋನ್ ಬನಾರಸ್ ಸೀರೆ,ಪಾರ್ಟಿವೇರ್, ಬ್ರೈಡಲ್, ಸಿಲ್ಕ್ ಸ್ಯಾರೀ ಗೋಲ್ಡ್‌ಬನಾರಸಿ ಸೀರೆಗಳು ಟ್ರೆಂಡಿಂಗ್‌ನಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT