ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಹ್ಯಾಕಾಶದಲ್ಲಿಯೂ ಏರಲಿದೆ ಬಿಯರ್‌ ಕಿಕ್‌!

ವಿಶೇಷ ಬಾಟಲಿ ಅಭಿವೃದ್ಧಿಪಡಿಸಿದ ಆಸ್ಟ್ರೇಲಿಯಾ ವಿಜ್ಞಾನಿಗಳು
Last Updated 14 ಮೇ 2018, 19:30 IST
ಅಕ್ಷರ ಗಾತ್ರ

ಮೆಲ್ಬರ್ನ್‌ : ಬಾಹ್ಯಾಕಾಶದಲ್ಲಿಯೇ ಬಿಯರ್‌ ಸೇವಿಸುವಂತಹ ಸುವರ್ಣಾವಕಾಶವನ್ನು ಗಗನಯಾತ್ರಿಗಳು ಸದ್ಯದಲ್ಲಿಯೇ ಪಡೆಯಲಿದ್ದಾರೆ! ಸೂಕ್ಷ್ಮಗುರುತ್ವದ ವಾತಾವರಣದಲ್ಲಿಯೂ ಮದ್ಯ ಸೇವಿಸಬಹುದಾದಂತಹ ವಿಶೇಷ ಬಾಟಲಿಯನ್ನು ಆಸ್ಟ್ರೇಲಿಯಾದ ಕಂಪನಿಗಳು ಅಭಿವೃದ್ಧಿಪಡಿಸಿವೆ.

ಆಸ್ಟ್ರೇಲಿಯಾದ ಬಿಯರ್‌ ಕಂಪನಿ ‘4ಪೈನ್ಸ್‌’ ಹಾಗೂ ಬಾಹ್ಯಾಕಾಶ ಎಂಜಿನಿಯರಿಂಗ್‌ ಕಂಪನಿ ‘ಸಬೇರ್‌ ಆಸ್ಟ್ರೋನಾಟಿಕ್ಸ್‌ ಆಸ್ಟ್ರೇಲಿಯಾ’ ಇದನ್ನು ಅಭಿವೃದ್ಧಿಪಡಿಸಿವೆ. ಈ ರೀತಿಯ ಬಾಟಲಿಯನ್ನು ವಿನ್ಯಾಸಗೊಳಿಸಲು ಈ ಎರಡೂ ಕಂಪನಿಗಳು ಸಾರ್ವಜನಿಕರಿಂದ ಹಣ ಸಂಗ್ರಹಿಸುವ ಅಭಿಯಾನ ನಡೆಸಿದ್ದವು.

10 ಲಕ್ಷ ಅಮೆರಿಕನ್‌ ಡಾಲರ್‌ ನಿಧಿ ನೀಡುವಂತೆ ಮನವಿ ಮಾಡಿಕೊಂಡಿದ್ದವು. ಜನರಿಂದ ಸಂಗ್ರಹಿಸಿದ ಹಣ ಬಳಸಿಕೊಂಡು ಈ ವಿಶೇಷ ಬಾಟಲಿ ವಿನ್ಯಾಸಗೊಳಿಸಲಾಗಿದೆ.

ಬಾಹ್ಯಾಕಾಶದಲ್ಲಿ ಮದ್ಯ ಸೇವಿಸುವುದಕ್ಕೆ ಈಗ ನಿರ್ಬಂಧವಿದೆ. ನಾಸಾದ ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಯಾವುದೇ ಬಗೆಯ ಮದ್ಯ ಸೇವಿಸುವುದಿಲ್ಲ.

‘ಬಾಹ್ಯಾಕಾಶದಲ್ಲಿ ಬಿಯರ್‌ ಸವಿಯುವ ಉದ್ದೇಶದಿಂದ ಮಾತ್ರ ಈ ಸಂಶೋಧನೆ ನಡೆಸಿಲ್ಲ. ಸೂಕ್ಷ್ಮಗುರುತ್ವ ವಾತಾವರಣದಲ್ಲಿ ಮದ್ಯ ಸೇವನೆ ಮಿತಿ ಯಾವ ರೀತಿ ಬದಲಾಗುತ್ತದೆ ಎಂಬ ಬಗ್ಗೆ ತಿಳಿದುಕೊಳ್ಳುವ ಉದ್ದೇಶವೂ ಇದರ ಹಿಂದಿದೆ’ ಎಂದು ಸಂಶೋಧಕರು ಹೇಳಿದ್ದಾರೆ.

23 ಮೀಟರ್‌ ಅಡಿ ಎತ್ತರದಿಂದ ಬಾಟಲಿಯನ್ನು ಬೀಳಿಸಿ ಪ್ರಯೋಗ ಮಾಡಲಾಗಿದೆ. ಗಾಜು, ಪ್ಲಾಸ್ಟಿಕ್‌ ಹಾಗೂ ಸ್ಟೀಲ್‌ ಬಾಟಲಿಯ ಒಳಗಡೆ ಬಿಯರ್‌ ಯಾವ ರೀತಿ ಗುರುತ್ವ ಬಲ ಕಾಯ್ದುಕೊಳ್ಳುತ್ತದೆ ಎಂದು ಪರೀಕ್ಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT