ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಾಯ ವಿವರ ಸಲ್ಲಿಸದ ಬಿಜೆಪಿ, ಕಾಂಗ್ರೆಸ್‌

Last Updated 8 ಫೆಬ್ರುವರಿ 2018, 8:47 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷ ತಮ್ಮ ಆದಾಯ ಮತ್ತು ವೆಚ್ಚಗಳಿಗೆ ಸಂಬಂಧಿಸಿದ 2016–17ನೇ ಸಾಲಿನ ಲೆಕ್ಕಪರಿಶೋಧನಾ ವರದಿಯನ್ನು  ಚುನಾವಣಾ ಆಯೋಗಕ್ಕೆ ಇನ್ನೂ ಸಲ್ಲಿಸಿಲ್ಲ.

ಚುನಾವಣೆಗಳ ಮೇಲೆ ನಿಗಾ ಇಡುವ ‘ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌’ (ಎಡಿಆರ್‌) ಸಂಸ್ಥೆಯು ರಾಷ್ಟ್ರೀಯ ಪಕ್ಷಗಳ 2016–17ನೇ ಸಾಲಿನ ಆದಾಯ ಮತ್ತು ವೆಚ್ಚದ ಬಗ್ಗೆ ವಿಶ್ಲೇಷಣೆ ನಡೆಸಿ ಸಿದ್ಧಪಡಿಸಿರುವ ವರದಿಯಲ್ಲಿ ಈ ವಿಷಯವನ್ನು ಉಲ್ಲೇಖಿಸಿದೆ.

ಎಲ್ಲ ರಾಷ್ಟ್ರೀಯ ಪಕ್ಷಗಳು ಚುನಾವಣಾ ಆಯೋಗದ ಮುಂದೆ ಲೆಕ್ಕ ಪರಿಶೋಧನಾ ವರದಿ ಸಲ್ಲಿಸುವುದು ಕಡ್ಡಾಯ. 2016–17ನೇ ಸಾಲಿನ ವಿವರಗಳನ್ನು ಸಲ್ಲಿಸುವುದಕ್ಕೆ 2017ರ ಅಕ್ಟೋಬರ್‌ 30 ಕಡೆಯ ದಿನವಾಗಿತ್ತು.

ಇತರ ರಾಷ್ಟ್ರೀಯ ಪಕ್ಷಗಳಾದ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ), ಭಾರತೀಯ ಕಮ್ಯುನಿಸ್ಟ್‌ ಪಕ್ಷ (ಮಾವೊವಾದಿ) (ಸಿಪಿಎಂ), ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ (ಎಐಟಿಸಿ) ನಿಗದಿತ ಅವಧಿಯೊಳಗೆ ವಿವರಗಳನ್ನು ಸಲ್ಲಿಸಿವೆ. ಭಾರತೀಯ ಕಮ್ಯುನಿಸ್ಟ್‌ ಪಕ್ಷ (ಸಿಪಿಐ) ಮತ್ತು ನ್ಯಾಷನಲ್‌ ಕಾಂಗ್ರೆಸ್‌ ಪಕ್ಷಗಳು (ಎನ್‌ಸಿಪಿ) ವಿಳಂಬವಾಗಿ ವಿವರಗಳನ್ನು ನೀಡಿವೆ. ಸಿಪಿಐ 2017ರ ನವೆಂಬರ್‌ 23ರಂದು ಮತ್ತು ಎನ್‌ಸಿಪಿ 2018ರ ಜನವರಿ 19ರಂದು ಲೆಕ್ಕ ಪರಿಶೋಧನಾ ವರದಿ ಸಲ್ಲಿಸಿವೆ.

––––––––
ಪಕ್ಷಗಳ ಆದಾಯ ಮತ್ತು ಖರ್ಚಿನ ಲೆಕ್ಕಾಚಾರ (2016–17)

ಬಿಎಸ್‌ಪಿ

₹173.58 ಕೋಟಿ

ಘೋಷಿತ ಆದಾಯ

₹51.83 ಕೋಟಿ

ಘೋಷಿತ ಖರ್ಚು

₹121.75 ಕೋಟಿ

ಉಳಿದಿರುವ ಮೊತ್ತ

70%

ಖರ್ಚಾಗದೆ ಉಳಿದಿರುವ ಹಣದ ಪ್ರಮಾಣ

––––

ಸಿಪಿಎಂ

₹100.25 ಕೋಟಿ

ಘೋಷಿತ ಆದಾಯ‌

₹94.05 ಕೋಟಿ

ಮಾಡಿರುವ ಖರ್ಚು

₹6.2 ಕೋಟಿ

ಉಳಿಕೆ ಮೊತ್ತ

6%

ಉಳಿಕೆ ಹಣದ ಪ್ರಮಾಣ

–––

ಎನ್‌ಸಿಪಿ

₹17.23 ಕೋಟಿ

ಘೋಷಿತ ಆದಾಯ

₹24.96 ಕೋಟಿ

ಮಾಡಿರುವ ವೆಚ್ಚ

₹7.73 ಕೋಟಿ

ಆದಾಯಕ್ಕಿಂತಲೂ ಹೆಚ್ಚಿನ ಖರ್ಚಿನ ಮೊತ್ತ

45%

ಹೆಚ್ಚು ಖರ್ಚು ಮಾಡಿರುವ ಪ್ರಮಾಣ

–––––––

ಎಐಟಿಸಿ

₹6.39 ಕೋಟಿ

ಘೋಷಿತ ಆದಾಯ

₹24.26 ಕೋಟಿ

ಆಗಿರುವ ಖರ್ಚು

₹17.87 ಕೋಟಿ

ಆದಾಯಕ್ಕಿಂತಲೂ ಹೆಚ್ಚಿನ ಖರ್ಚಿನ ಮೊತ್ತ‌

280%

ಹೆಚ್ಚು ಖರ್ಚು ಮಾಡಿರುವ ಪ್ರಮಾಣ

–––

ಸಿಪಿಐ

₹2.07 ಕೋಟಿ

ಘೋಷಿತ ಆದಾಯ

₹1.42 ಕೋಟಿ

ಘೋಷಿತ ಖರ್ಚು

₹65 ಲಕ್ಷ

ಉಳಿದಿರುವ ಮೊತ್ತ

31%


ಉಳಿಕೆ ಹಣದ ಪ್ರಮಾಣ

–––––

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT