ಶನಿವಾರ, ಜೂನ್ 25, 2022
25 °C

ವಿಭಿನ್ನ ಫ್ಯಾಷನ್ ತರಬೇತಿ: ಶಿಬಿರದಲ್ಲಿ 60 ಮಂದಿ ಭಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಂದಿನಿ ನಾಗರಾಜ್ ಅವರ ಸಹಯೋಗದಲ್ಲಿ ವಿಭಿನ್ನವಾದ ಸೌಂದರ್ಯ ತರಬೇತಿ ಶಿಬಿರ ನಡೆಯಿತು.

ವಿನಯ್ ಲಾಂಬ ಅವರ ಇಂಟರ್ನ್ಯಾಷನಲ್ ಬ್ಯುಸಿನೆಸ್ ಸ್ಕೂಲ್ ಆಫ್ ವಾಶಿಂಗ್ಟನ್, ಈ ಶಿಬಿರವನ್ನು ನಡೆಸಿತು. ಇಂಟರ್ನ್ಯಾಷನಲ್ ಶಾಲೆಯು ವಾಷಿಂಗ್ಟನ್ , ಪ್ಯಾರಿಸ್, ದುಬೈ ಹಾಗೂ ಬೆಂಗಳೂರಿನಲ್ಲಿ ಮಾತ್ರ ಇದೆ. 

ಸ್ಕೂಲ್ ಆಫ್ ಫ್ಯಾಷನ್ ಡಿಸೈನ್ ನ ಇಮೇಜ್ ಮೇಕ್ ಓವರ್ ತರಬೇತಿ ಶಿಬಿರವನ್ನು ಪ್ರಖ್ಯಾತ ಫ್ಯಾಷನ್ ಡಿಸೈನರ್ ಬಬಿತಾ ಜೈಶಂಕರ್ ನಡೆಸಿಕೊಟ್ಟರು.

ಎರಡು ದಿನ ನಡೆದ ಶಿಬಿರಕ್ಕೆ ನಂದಿನಿ ನಾಗರಾಜ್ ಅವರ ಸಹಯೋಗ ಇದೆ.

ಐಟಿ ಕಂಪೆನಿ ಉದ್ಯೋಗಿಗಳು ಸೇರಿದಂತೆ 60 ಮಂದಿ ಈ ತರಬೇತಿಯಲ್ಲಿ ಪಾಲ್ಗೊಂಡಿದ್ದರು. ಉಡುಗೆ ತೊಡುಗೆ, ಮೇಕಪ್ ಸೇರಿದಂತೆ ಹಲವು ವಿಷಯಗಳ ಕುರಿತು ತರಬೇತಿ ನೀಡಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು