ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಷನ್‌ ವೈರಾಗ್ಯ ನೀಗುವುದು ಹೇಗೆ?

Last Updated 22 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಕೋವಿಡ್ ನಮ್ಮೆಲ್ಲರ ಬದುಕಿನಲ್ಲಿ ಹಲವು ಮಹತ್ತರ ಬದಲಾವಣೆಗಳಿಗೆ ಕಾರಣವಾಗಿತ್ತು. ನಮ್ಮದಲ್ಲದ ಜೀವನಕ್ಕೆ ನಮ್ಮನ್ನು ಕರೆದೊಯ್ಯುವ ಮೂಲಕ ಹೊಸ ಜೀವನ ಪಾಠವನ್ನೂ ಕಲಿಸಿತ್ತು. ಈ ನಡುವೆ ಈ ಮಹಾಮಾರಿ ನಮಗೆ ಹಲವು ವಿಷಯಗಳ ಮೇಲೆ ಬೇಸರ ಮೂಡುವಂತೆ ಮಾಡಿಸಿದ್ದೂ ಸುಳ್ಳಲ್ಲ. ಸದಾ ಕಚೇರಿ, ಸಿನಿಮಾ, ಶಾಪಿಂಗ್‌, ಪಿಕ್‌ನಿಕ್‌, ಪ್ರವಾಸ ಎಂದು ತಿರುಗಾಡಿಕೊಂಡಿದ್ದ ನಮಗೆ ಇದೆಲ್ಲದ್ದಕ್ಕೂ ಬ್ರೇಕ್ ಹಾಕಿಸಿ ಮನೆಯೊಳಗೆ ಕುಳಿತುಕೊಳ್ಳುವಂತೆ ಮಾಡಿತ್ತು. ಸುಮಾರು ಒಂದೂವರೆ ವರ್ಷಗಳ ಕಾಲ ಮನೆಯೊಳಗೆ ನೈಟ್‌ ಪ್ಯಾಂಟ್‌‌, ಕುರ್ತಾ, ಟೀ ಶರ್ಟ್‌ನಲ್ಲಿ ಕಾಲ ಕಳೆದ ಮಂದಿಗೆ ಅದುವೇ ಜಗತ್ತಾಗಿದೆ. ಈಗ ಪುನಃಫ್ಯಾಷನ್‌ ಲೋಕಕ್ಕೆ ತೆರೆದುಕೊಳ್ಳಲು ಮನಸ್ಸು ಹಿಂಜರಿಯುತ್ತಿದೆ. ಈಫ್ಯಾಷನ್‌ ಕುರಿತಾದ ಬರ್ನ್‌ ಔಟ್‌ ಅಥವಾವೈರಾಗ್ಯಎನ್ನುವುದು ನಮ್ಮ ಜೀವನದ ಬೇಸರವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಆ ಕಾರಣಕ್ಕೆ ಈ ಬೇಸರವನ್ನು ಬದಿಗಿಟ್ಟು ಬದುಕಿನ ಚೈತನ್ಯವನ್ನು ಮರಳಿ ಗಳಿಸುವುದು ಹೇಗೆ?

ಫ್ಯಾಷನ್ಬರ್ನ್‌ ಔಟ್ ಎಂದರೆ..

ಫ್ಯಾಷನ್ಬರ್ನ್ ಔಟ್ ಎಂದರೆಫ್ಯಾಷನ್ಅಥವಾ ಹೊಸ ಹೊಸ ಬಟ್ಟೆ ಧರಿಸುವುದರ ಮೇಲೆವೈರಾಗ್ಯಮೂಡುವುದು. ಮನೆಯಲ್ಲೇ ದಿನ ಕಳೆಯುತ್ತಿದ್ದವರಿಗೆ ಬಗೆ ಬಗೆಯ ಬಟ್ಟೆಗಳ ಅವಶ್ಯಕತೆ ಇರಲಿಲ್ಲ. ಅಂತಹ ಸಮಯದಲ್ಲಿ ಸಮವಸ್ತ್ರದಂತೆ ಮೂರ್ನಾಲ್ಕು ಜೊತೆ ಬಟ್ಟೆಯಲ್ಲೇ ಕಾಲ ಕಳೆದಿದ್ದೆವು. ಈಗ ಪುನಃ ಕೋವಿಡ್‌ ಹಿಂದಿನ ಸಹಜ ಜೀವನಕ್ಕೆ ಹೊಂದಿಕೊಳ್ಳಲು ಕಷ್ಟವಾಗುತ್ತಿದೆ. ಆದರೆ ಹೊಂದಿಕೊಳ್ಳದೇ ಬೇರೆ ದಾರಿ ಇಲ್ಲ. ಈ ಬಟ್ಟೆಯ ಏಕತಾನತೆ ಎನ್ನುವುದೂಫ್ಯಾಷನ್ಬರ್ನ್‌ ಔಟ್‌ಗೆ ಕಾರಣವಾಗಿದೆ.

ಮದುವೆ, ಸಮಾರಂಭಗಳೂ ಸರಳ

ಹಿಂದೆಲ್ಲಾ ಮದುವೆ ಸಮಾರಂಭಗಳೆಂದರೆ ಸಡಗರ. ಕೋವಿಡ್‌ ಇಂತಹ ಸಂಭ್ರಮಕ್ಕೂ ಕಡಿವಾಣ ಹಾಕಿತ್ತು. ಹಾಗಾಗಿ ಮದುವೆ, ಮುಂಜಿಯಂತಹ ಕಾರ್ಯಕ್ರಮಗಳೂ ಸರಳ ಉಡುಪಿನಲ್ಲೇ ಮುಗಿದು ಹೋಗಿದ್ದವು. ಹೊಸ ಉಡು‍‍ಪು, ಅದಕ್ಕೆ ಮ್ಯಾಚಿಂಗ್ ಎನ್ನಿಸುವ ಆಭರಣಗಳು, ಡ್ರೆಸ್‌ಗೆ‌ ಹೊಂದುವ ಚಪ್ಪಲಿ, ಬ್ಯಾಗ್ ಇವೆಲ್ಲಾ ಈಗ ಮೂಲೆಗೆ ಸರಿದಿದೆ. ತುಂಬಿಸಿಟ್ಟ ವಾರ್ಡ್‌ರೋಬ್‌ ಕಡೆ ನೋಡುವುದೂ ಕಷ್ಟವಾಗಿದೆ.

ಕಚೇರಿಗೂ ಅದೇ ಸ್ಟೈಲ್‌

ಹಿಂದೆಲ್ಲಾ ಕಚೇರಿಗೆ ಹೋಗಲೆಂದೇ ಒಂದಿಷ್ಟು ಉಡುಪು ಖರೀದಿಸುವ ಸಲುವಾಗಿ ಬಹುತೇಕರು ತಿಂಗಳಿಗೊಮ್ಮೆ ಶಾಪಿಂಗ್ ಮಾಡುತ್ತಿದ್ದೆವು. ಆದರೆ ಈಗ ವಾರ್ಡ್‌ರೋಬ್‌ನಲ್ಲಿ ಹಿಂದೆ ಪೇರಿಸಿಟ್ಟ ಯಾವುದೋ ಒಂದು ಉಡು‍ಪನ್ನು ಧರಿಸಿ ಹೋಗುತ್ತಿದ್ದೇವೆ. ಯಾವುದೋ ಪ್ಯಾಂಟ್‌, ಯಾವುದೋ ಟಾಪ್‌, ಕೈಗೆ ಸಿಕ್ಕಿದ ದುಪಟ್ಟಾ ತೊಟ್ಟುಕೊಂಡು ಕಚೇರಿಯ ದಿನವನ್ನು ಮುಗಿಸುತ್ತಿದ್ದೇವೆ.

ಫ್ಯಾಷನ್ಬರ್ನ್ ಔಟ್‌ನಿಂದ ದೂರವಾಗಿ ಸಹಜ ಜೀವನಕ್ಕೆ ಮರಳಿ ಜೀವನವನ್ನು ಸರಾಗಗೊಳಿಸುವ ಹಾದಿಯಲ್ಲಿ ನಾವು ಸಾಗಬೇಕಿದೆ.ಫ್ಯಾಷನ್ಬರ್ನ್ ಔಟ್‌ನಿಂದ ಹೊರಬರಲು ಈ ಮಾರ್ಗಗಳನ್ನು ಅನುಸರಿಸಿ.

1→ಸಂದರ್ಭ ಯಾವುದೇ ಇರಲಿ. ಯಾವುದೋ ಒಂದು ಉಡುಪು ಧರಿಸಿದರೆ ಆಯ್ತು ಎನ್ನುವ ಅಸಡ್ಡೆಯ ಮನೋಭಾವ ಬೇಡ. ಸಮಯ ಸಿಕ್ಕಾಗಲೆಲ್ಲಾ ಒಳ್ಳೆಯ ಬಟ್ಟೆ ಧರಿಸಿ, ಅಲಂಕರಿಸಿಕೊಳ್ಳಿ. ಈ ಕ್ಷಣವನ್ನು ಅನುಭವಿಸಲು ರೆಡಿಯಾಗಿ.

2→ಇತ್ತೀಚೆಗೆ ಒತ್ತಡ ನಿವಾರಣೆಯಲ್ಲಿ ಸಾಮಾಜಿಕ ಜಾಲತಾಣಗಳ ಪಾತ್ರವೂ ದೊಡ್ಡದಿದೆ. ಸಾಮಾಜಿಕ ಜಾಲತಾಣಗಳನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಸುಂದರ ಉಡುಪುಗಳನ್ನು ಧರಿಸಿ ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂಗಳಲ್ಲಿ ಫೋಟೊ ಹಂಚಿಕೊಳ್ಳಬಹುದು.

3→ನಿಮ್ಮ ಕಲ್ಪನೆಯಂತೆ ನಿಮ್ಮನ್ನು ನೀವು ಸಿಂಗರಿಸಿಕೊಳ್ಳುವುದನ್ನು ಕಲಿಯಿರಿ. ಕಲ್ಪನೆಗೆ ಮೀರಿದ್ದು ಯಾವುದೂ ಇಲ್ಲ.

4→ನಮ್ಮ ನೋಟ ಅಥವಾ ಸೌಂದರ್ಯ ಎನ್ನುವುದು ಕೇವಲ ಉಡುಪುಗಳ ಮೇಲೆ ಅವಲಂಬಿತವಾಗಿಲ್ಲ. ನಾವು ತೊಟ್ಟ ಉಡುಪಿಗೆ ನಿಜವಾದ ಸೌಂದರ್ಯ ಹೆಚ್ಚಲು ನಮ್ಮ ಮುಖದಲ್ಲಿನ ಖುಷಿಯೂ ಕಾರಣವಾಗುತ್ತದೆ.

5→ಮನಸ್ಸಿಗೆ ಇಷ್ಟವಾದ ಉಡುಪ‍ನ್ನು ಆಯ್ಕೆ ಮಾಡಿ ಧರಿಸಿ. ಬೇರೆಯವರಿಗೆ ನೀವು ತಯಾರಾದ ರೀತಿ ಹೇಗೆ ಕಾಣಿಸಬಹುದು ಎಂದು ಯೋಚಿಸುವುದಕ್ಕಿಂತ ನಿಮಗಾಗಿ ನೀವು ತಯಾರಾಗಿ. ಆ ಖುಷಿಯನ್ನು ಅನುಭವಿಸಿ.

6→ಅತಿ ಆಡಂಬರವಾಗಿ ತಯಾರಾಗುವ ಬದಲು ಸರಳವಾಗಿ, ಅಂದವಾಗಿ ಸಿದ್ಧವಾಗುವುದನ್ನು ಕಲಿಯಿರಿ. ವಾರ್ಡ್‌ರೋಬ್‌ನಲ್ಲಿರುವ ಬೇಡದ ಉಡು‍ಪುಗಳನ್ನು ದಾನ ಮಾಡಿ. ಇದರಿಂದ ವಾರ್ಡ್‌ರೋಬ್‌ ಸ್ವಚ್ಛ ಮಾಡಿದ ಹಾಗೆಯೂ ಆಗುತ್ತದೆ; ಮನಸ್ಸಿಗೂ ಖುಷಿ ಸಿಗುತ್ತದೆ.

7→ನಿಮ್ಮ ಬಳಿ ಇಲ್ಲದೇ ಇರುವುದರ ಬಗ್ಗೆ ಯೋಚಿಸುತ್ತಾ ಕೊರಗುವ ಬದಲು ಇರುವುದನ್ನೇ ಧರಿಸಿ ಖುಷಿ‍ಪಡಿ.

8→ಯಾವತ್ತೋ ನಡೆಯುವ ಕಾರ್ಯಕ್ರಮಗಳಿಗೆ ಇಂದಿನಿಂದಲೇ ಉಡುಪುಗಳನ್ನು ಖರೀದಿಸಿ ಇಡಬೇಡಿ. ಇರುವ ಹೊಸ ಉಡುಪುಗಳನ್ನು ಧರಿಸಲು ಸಂದರ್ಭಕ್ಕಾಗಿ ಕಾಯಬೇಡಿ. ಸಿಕ್ಕ ಸಂದರ್ಭವನ್ನೇ ಅವಕಾಶವನ್ನಾಗಿಸಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT