ಸೌಂದರ್ಯಕ್ಕೂ ಬೇಕು ಪುದಿನಾ

7

ಸೌಂದರ್ಯಕ್ಕೂ ಬೇಕು ಪುದಿನಾ

Published:
Updated:

* ಪುದಿನಾವನ್ನು ಫೇಸ್‌ ಪ್ಯಾಕ್‌ ಆಗಿ ಬಳಸಬಹುದು. ಅರ್ಧ ಇಂಚು ಸೌತೆಕಾಯಿ, 10 ರಿಂದ 12 ಪುದಿನಾ ಎಲೆ, ಅರ್ಧ ಟಿ ಚಮಚ ಜೇನುತುಪ್ಪವನ್ನು ನುಣ್ಣಗೆ ಅರೆದು ಮುಖಕ್ಕೆ ಫೇಸ್‌ ಪ್ಯಾಕ್‌ ಮಾಡಿಕೊಂಡು 20 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಬೇಕು. ವಾರದಲ್ಲಿ ಎರಡು ಬಾರಿ ಹೀಗೆ ಮಾಡುವುದರಿಂದ ತ್ವಚೆ ಕ್ರಮೇಣ ಬಿಳಿಯಾಗುತ್ತದೆ.

* ಒಂದು ಬಾಳೆಹಣ್ಣಿಗೆ 10 ರಿಂದ 12 ಪುದಿನಾ ಎಲೆಗಳನ್ನು ಸೇರಿಸಿ ನುಣ್ಣಗೆ ರುಬ್ಬಿ ಫೇಸ್‌ ಪ್ಯಾಕ್‌ ಆಗಿ ಬಳಸಬಹುದು. 30 ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು. ವಾರದಲ್ಲಿ 3 ಬಾರಿ ಹೀಗೆ ಮಾಡಿದರೆ ತ್ವಚೆ ಕಾಂತಿಯುತವಾಗುತ್ತದೆ.

* ಮುಖದಲ್ಲಿ ಹೆಚ್ಚು ಮೊಡವೆಗಳಿದ್ದರೆ, ಪುದಿನಾ ಹಾಗೂ ಲಿಂಬೆಹಣ್ಣಿನ ಫೇಸ್ ಪ್ಯಾಕ್‌ ಸಹಕಾರಿ. 10 ರಿಂದ 12 ಪುದಿನಾ ಎಲೆಗಳನ್ನು ನುಣ್ಣಗೆ ರುಬ್ಬಿ ಒಂದು ಟಿ ಚಮಚ ಲಿಂಬೆರಸದೊಂದಿಗೆ ಮುಖಕ್ಕೆ ಹಚ್ಚಿಕೊಂಡು 15 ನಿಮಿಷಗಳ ನಂತರ ತೊಳೆಯಬೇಕು. ನಿತ್ಯ ಈ ರೀತಿ ಮಾಡುವುದರಿಂದ ಮೊಡವೆ ಹಾಗೂ ಮೊಡವೆಯ ಕಲೆಗಳು ಕ್ರಮೇಣ ಕಡಿಮೆಯಾಗುತ್ತವೆ.

* ಪುದಿನಾವನ್ನು ಫೇಸ್‌ ಸ್ಕ್ರಬ್‌ ಆಗಿಯೂ ಬಳಸಬಹುದು. 10 ರಿಂದ 12 ಪುದಿನಾ ಎಸಳುಗಳಿಗೆ 1 ಟಿ ಚಮಚ ಓಟ್ಸ್‌, ಜೇನುತುಪ್ಪ, 2 ಟಿ ಚಮಚ ಹಾಲು, ಅರ್ಧ ಇಂಚು ಸೌತೆಕಾಯಿ ಸೇರಿಸಿ ರುಬ್ಬಬೇಕು. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ 7 ನಿಮಿಷ ಹಾಗೆಯೇ ಬಿಡಬೇಕು. ನಂತರ ಎರಡು ನಿಮಿಷ ವೃತ್ತಾಕಾರವಾಗಿ ಸ್ಕ್ರಬ್‌ ಮಾಡಿ ತಣ್ಣೀರಿನಿಂದ ತೊಳೆಯಬೇಕು. ವಾರದಲ್ಲಿ ಎರಡುಬಾರಿ ಹೀಗೆ ಮಾಡುವುದರಿಂದ ಮುಖದಲ್ಲಿನ ಡೆಡ್‌ ಸ್ಕಿನ್‌ ದೂರಾಗುತ್ತವೆ.

* 10 ರಿಂದ 12 ಪುದಿನಾ ಎಲೆಗಳನ್ನು ನುಣ್ಣಗೆ ರುಬ್ಬಿ ಅದಕ್ಕೆ ಅರ್ಧ ಟಿ ಸ್ಪೂನ್‌ ಜೇನುತುಪ್ಪ, ಮೊಸರು ಸೇರಿಸಿದ ಮಿಶ್ರಣವನ್ನು ಎಣ್ಣೆ ಚರ್ಮದವರು ಫೇಸ್‌ ಪ್ಯಾಕ್‌ ಆಗಿ ಬಳಸಬಹುದು. 20 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಬೇಕು. ವಾರದಲ್ಲಿ ಎರಡರಿಂದ ಮೂರು ಬಾರಿ ಹೀಗೆ ಮಾಡುವುದರಿಂದ ಮುಖದಲ್ಲಿನ ಅನಗತ್ಯ ಎಣ್ಣೆಯ ಅಂಶ ಕಡಿಮೆಯಾಗುತ್ತದೆ.

* ಪುದಿನಾ ಮಿಶ್ರಣಕ್ಕೆ 1 ಟಿ ಚಮಚ ರೋಸ್‌ವಾಟರ್‌, ಅರ್ಧ ಟಿ ಚಮಚ ಜೇನು ತುಪ್ಪ ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಬೇಕು. 20 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಬೇಕು. ವಾರದಲ್ಲಿ ಎರಡು ಬಾರಿ ಹೀಗೆ ಮಾಡುವುದರಿಂದ ತ್ವಚೆಗೆ ತಾಜಾತನದ ಅನುಭವ ನೀಡುತ್ತದೆ. ಮೊಡವೆಗಳು ಆಗದಂತೆ ತಡೆಯುತ್ತದೆ. ಚರ್ಮವು ಒಣಗುವುದನ್ನು ತಡೆಯುತ್ತದೆ.

* ಬಿಸಿಲಿನ ತಾಪಕ್ಕೆ ಸನ್‌ಬರ್ನ್‌ ಆಗದಂತೆ ತಡೆಯುವ ಶಕ್ತಿ ಪುದಿನಾಕ್ಕಿದೆ. ಪುದಿನಾಕ್ಕೆ ಸೌತೆಕಾಯಿ ಸೇರಿಸಿ ಫೇಸ್‌ ಪ್ಯಾಕ್‌ಆಗಿ ಬಳಸಬಹುದು. 20 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಬೇಕು. ಹೀಗೆ ಮಾಡುವುದರಿಂದ ಸನ್‌ಬರ್ನ್‌ ನಿವಾರಣೆಯಾಗುತ್ತದೆ.

* ಪುದಿನಾ ಸೋಂಕು ನಿವಾರಕವಾಗಿಯೂ ಪರಿಣಾಮಕಾರಿ. 10 ಪುದಿನಾ ಎಲೆಗಳನ್ನು ಅರ್ಧ ಲೀಟರ್‌ ನೀರಿನಲ್ಲಿ ಚೆನ್ನಾಗಿ ಕುದಿಸಬೇಕು. ಕುದಿಸಿ ಆರಿಸಿದ ಪುದಿನಾ ನೀರನ್ನು ಹತ್ತಿ ಬಟ್ಟೆಯಲ್ಲಿ ಅದ್ದಿ ದೇಹಕ್ಕೆ ಮಸಾಜ್‌ ಮಾಡುವುದರಿಂದ ಸೋಂಕುಗಳು ತಗಲುವ ಸಾಧ್ಯತೆ ಕಡಿಮೆ. ತ್ವಚೆಯಲ್ಲಿ ಗಾಯಗಳಿದ್ದಲ್ಲಿ ದಿನದಲ್ಲಿ 2 ಬಾರಿ ಈ ರೀತಿ ಮಾಡುವುದು ಉತ್ತಮ

* 10 ಪುದಿನಾ ಎಲೆಗಳನ್ನು ಅರ್ಧ ಲೀಟರ್‌ ನೀರಿನಲ್ಲಿ ಚೆನ್ನಾಗಿ ಕುದಿಸಬೇಕು. ತಣ್ಣಗಾದ ನಂತರ ಹತ್ತಿಯಲ್ಲಿ ಅದ್ದಿ ಮುಖಕ್ಕೆ ಮಸಾಜ್‌ ಮಾಡಬಹುದು. ಇದರಿಂದ ತ್ವಚೆಗೆ ತಾಜಾತನದ ಅನುಭವವಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !